ಕೊಪ್ಪಳ : ಜಾಮಿಯಾ ಮಜೀದ್ ಪಂಚ್ ಕಮಿಟಿ ಭಾಗ್ಯನಗರ ಹಾಗೂ ಡಾ.ಹಸನ್‌ಅಲಿ ಹೊಸಳ್ಳಿ ಹಾಗೂ ಸಹೋದರರ ಸಹಯೋಗದೊಂದಿಗೆ ಭಾಗ್ಯನಗರದ ಜಾಮಿಯಾ ಮಜೀದ್ ಆವರಣದಲ್ಲಿ ರವಿವಾರ ಬೆ
ಕಾರ್‍ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಉದ್ಯಮಿ ಶ್ರೀನಿವಾಸ ಗುಪ್ತಾ ಮಾತನಾಡಿ ಪ್ರತಿವರ್ಷ ಈ ರೀತಿಯ ಉಚಿತ ಖತ್ನಾ ಶಿಬಿರ ಏರ್ಪಡಿಸುವುದರ ಮೂಲಕ ಭಾಗ್ಯನಗರದ ಜಾಮೀಯಾ ಮಜೀದ್ ಪಂಚ್ ಕಮಿಟಿ ಬಡ ಕುಟುಂಬಗಳಿಗೆ ಸಹಾಯ ಮಾಡುತ್ತ ಬಂದಿರುವುದು ಎಲ್ಲರಿಗೂ ಮಾದರಿಯಾಗುವಂಥಹದ್ದು. ಇಂತಹ ಸಾಮಾಜಿಕ ಕಾರ್‍ಯಕ್ರಮಗಳಿಗೆ ತಮ್ಮ ಸಹಾಯ,ಸಹಕಾರ ಯಾವತ್ತೂ ಇರುತ್ತದೆ ಎಂದರು. ಅತಿಥಿಗಳಾಗಿದ್ದ ಪೀರಾಹುಸೇನ್ ಹೊಸಳ್ಳಿ,ಡಾ.ಹಸನ್ ಅಲಿ,ರಾಘವೇಂದ್ರ ಪಾನಗಂಟಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಾಮೀಯಾ ಮಜೀದ್ ಪಂಚ್ ಕಮಿಟಿಯ ಅಧ್ಯಕ್ಷರಾದ ಇಬ್ರಾಹಿಂಸಾಬ ಬಿಸರಳ್ಳಿ ಮಾತನಾಡಿ ಸಾವಿರಾರು ರೂಪಾಯಿಗಳ ಖರ್ಚು ಮಾಡಲು ಸಾಧ್ಯವಾಗದ ಕುಟುಂಬಗಳು ಖತ್ನಾ ಕಾರ್‍ಯಕ್ರಮವನ್ನು ಮುಂದೂಡುತ್ತಾ ಬರುತ್ತಾರೆ. ಅವರಿಗೆ ಸಹಾಯವಾಗಲಿ ಎಂದು ಈ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ಈ ಶಿಬಿರಕ್ಕೆ ಹೊಸಳ್ಳಿ ಸಹೋದರರು ತಮ್ಮ ಸಹಯೋಗ ನೀಡುತ್ತಾ ಬಂದಿದ್ದಾರೆ, ಶ್ರೀನಿವಾಸ ಗುಪ್ತಾರವರು ಹಾಗೂ ಇನ್ನಿತರ ಮುಖಂಡರು ನಿರಂತರವಾಗಿ ಸಹಾಯ ಮಾಡುತ್ತ ಬಂದಿದ್ದಾರೆ ಅವರಿಗೆ ಸಮಾಜದ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು ಹೇಳಿದರು.
ಕಾರ್‍ಯಕ್ರಮದಲ್ಲಿ ತಾಲೂಕ ಪಂಚಾಯತ್ ಸದಸ್ಯರಾದ ದಾನಪ್ಪ ಕವಲೂರ,ಶ್ರೀನಿವಾಸ ಹ್ಯಾಟಿ, ಗ್ರಾ.ಪಂ.ಅಧ್ಯಕ್ಷರಾದ ಹೊನ್ನೂರಸಾಬ ಬೈರಾಪೂರ,ಪರಶುರಾಮ ನಾಯಕ,ಮೌಲಾಹುಸೇನ ಹಣಗಿ, ಮಂಜೂರಸಾಬ ಟಾಂಗಾ, ಕಬೀರಸಾಬ ಬೈರಾಪೂರ, ಮೆಹಬೂಬ ಬಳಿಗಾರ,ಸಮಾಜದ ಹಿರಿಯರಾದ ರಾಜೇಸಾಬ ಹ್ಯಾಟಿ,ಬಾಬಾ ಪಟೇಲ್,ಖಾಜಾಸಾಬ ಮಾಸ್ತರ ಸೇರಿದಂತೆ ಮಕ್ಕಳ ಪೋಷಕರು,ಭಾಗ್ಯನಗರ ಹಾಗೂ ಸುತ್ತಮುತ್ತಲಿನ ಗ್ರಾಮದ ಮುಸ್ಲಿಂ ಬಾಂಧವರು ಕಾರ್‍ಯಕ್ರಮದಲ್ಲಿ ಭಾಗವಹಿಸಿದ್ದರು. ನೂರಬಾಷಾ ಮಾಸ್ತರ ಕಾರ್‍ಯಕ್ರಮದ ನಿರೂಪಣೆ ಮಾಡಿದರೆ ಖಾಜಪ್ಪ ಮಾಸ್ತರ ವಂದನಾರ್ಪಣೆ ಮಾಡಿದರು. ಕಾರ್‍ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಹಾಗೂ ಪೋಷಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಳಿಗ್ಗೆ ೧೦ಗಂಟೆಗೆ ಉಚಿತ ಖತ್ನಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ ೧೬೭ ಮಕ್ಕಳಿಗೆ ಖತ್ನಾ ಮಾಡಲಾಯಿತು.
0 comments:
Post a Comment