ಬೆಟಗೇರಿ ೨೦ : ಮೂಲತಃ ರೈತ ಕುಟುಂಬದಿಂದ ಬಂದ ಸಂಗಣ್ಣ ಕರಡಿ ಜನರ ಕಷ್ಟಗಳಿಗೆ ಸ್ಪಂದಿಸುವ ಮಾನವೀಯ ಆಂತಃಕರಣವನ್ನು ಹೊಂದಿರುವ ನಾಯಕನಾಗಿದ್ದು, ಕ್ಷೇತ್ರವನ್ನು ನೀರಾವರಿಯನ್ನಾಗಿಸುವದರಲ್ಲಿ ಜಾರಿಗೊಳಿಸಿದ ಸಿಂಗಟಾಲೂರ ಏತ ನೀರಾವರಿ ಪ್ರಮುಖವಾಗಿದೆ. ಅವರ ಅಭಿವೃದ್ಧಿ ಕಾರ್ಯಗಳು ಅವರ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದು ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್ ಹೇಳಿದರು.
ಇದೇ ಸಮಾರಂಭದಲ್ಲಿ ಮಾತನಾಡಿದ ಪಕ್ಷದ ಅಲ್ಪ ಸಂಖ್ಯಾತರ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪೀರಾಹುಸೇನ ಹೊಸಳ್ಳಿ ಮಾತನಾಡಿ, ಕಾಂಗ್ರೆಸ್‌ನವರು ೬೦ ವರ್ಷ ಆಳ್ವಿಕೆ ನಡೆಸಿ ಅಲ್ಪಸಂಖ್ಯಾತರನ್ನು ಓಟ್‌ಬ್ಯಾಂಕಿಗಾಗಿ ಮಾಡಿಕೊಂಡು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಆದರೆ ಬಿ.ಜೆ.ಪಿ. ಸರ್ಕಾರವು ಕೊಪ್ಪಳದ ಮರ್ದಾನ್‌ಗೈಬ್ ದರ್ಗಾ ಹಾಗೂ ಶಾದಿ ಮಹಲ್ ನಿರ್ಮಾಣಕ್ಕಾಗಿ ೫೦ ಲಕ್ಷ ರೂ.ಗಳ ಕೊಡುಗೆ ನೀಡಿದ್ದಲ್ಲದೇ ಮಸೀದಿಗಳ ಜೀರ್ಣೋದ್ಧಾರಕ್ಕಾಗಿ ಅನುದಾನ ಬಿಡುಗಡೆಗೊಳಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾ ವಿ.ಎಂ. ಭೂಸನೂರಮಠ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ವೀರೇಶ ಲಕ್ಷಾಣಿ, ತಾಲೂಕ ಪಂಚಾಯತ್ ಸದಸ್ಯ ವೀರೇಶ ಸಜ್ಜನ್, ಮುಖಂಡರಾದ ಕೃಷ್ಣಾರೆಡ್ಡಿ, ಮಹಾಂತೇಶ ಪಾಟೀಲ ಮತ್ತಿತರ ಹಿರಿಯ, ಯುವ ಮುಖಂಡರು ಭಾಗವಹಿಸಿದ್ದರು.
ಕಾಂಗ್ರೆಸ್‌ನಿಂದ ಬಿ.ಜೆ.ಪಿ.ಗೆ ಸೇರ್ಪಡೆ
ಬೆಟಗೇರಿ, ೨೦ : ಕರಡಿ ಸಂಗಣ್ಣನವರ ಕ್ಷೇತ್ರಾಭಿವೃದ್ಧಿ ಕೆಲಸಗಳನ್ನು ಮೆಚ್ಚಿ, ಅವರ ಕೈ ಬಲ ಪಡಿಸಲು ನಿರ್ಧರಿಸಿ ಬೆಟಗೇರಿಯ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಮೈಲಪ್ಪ ನಡುವಿನಮನಿ, ಮಲ್ಲಪ್ಪ ಗುಡಿಹಿಂದಿನ, ಸುಂಕಪ್ಪ ಹಿರೇಮನಿ, ಮಲ್ಲಪ್ಪ ಗುಡಿಮುಂದಿನ, ರಮೇಶ ನಡುವಿನಮನಿ, ಯಂಕಪ್ಪ ಪೂಜಾರ, ರಮೇಶ ಜಟೆಮ್ಮನವರ, ಮೈಲಾರಪ್ಪ ಹಿರೇಮನಿ, ಮಲ್ಲಪ್ಪ ಮತ್ತೂರ, ಶಿವಪ್ಪ ಗುಡಿಹಿಂದಲ ಸೇರಿದಂತೆ ೫೦ ಕ್ಕೂ ಹೆಚ್ಚು ಯುವಕರು ಬಿ.ಜೆ.ಪಿ. ಸೇರ್ಪಡೆಯಾದರು. ಬಿ.ಜೆ.ಪಿ. ಅಭ್ಯರ್ಥಿ ಕರಡಿ ಸಂಗಣ್ಣ ಎಲ್ಲರನ್ನೂ ಆತ್ಮೀಯವಾಗಿ ಪಕ್ಷಕ್ಕೆ ಸೇರಿಸಿಕೊಂಡು, ಪಕ್ಷದ ಬಲವರ್ಧನೆ ಮತ್ತು ಜಯಕ್ಕೆ ಕಾರಣರಾಗಲು ಕರೆಕೊಟ್ಟರು.
ಸಮಗ್ರ ಅಭಿವೃದ್ಧಿಗಾಗಿ ಬಿ.ಜೆ.ಪಿ. ಬೆಂಬಲಿಸಿ - ಕರಡಿ ಸಂಗಣ್ಣ
ಶ್ವತ ವ್ಯವಸ್ಥೆ ಹೀಗೆ ಹಲವು ಅಭಿವೃದ್ಧಿ ಯೋಜನೆಗಳು ಈಗಾಗಲೇ ಆರಂಭವಾಗಿದ್ದು, ಮತ್ತೊಂದು ಅವಧಿಗೆ ತಮ್ಮನ್ನು ಚುನಾಯಿಸಿ ಎಲ್ಲ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುಂತಹ ಕೆಲಸ ಮಾಡಲು ಅವಕಾಶ ಕೊಡಲು ಕೋರಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಕೃಷ್ಣಾರೆಡ್ಡಿ, ವಿ.ಎಂ. ಭೂಸನೂರಮಠ, ವೀರಣ್ಣ ಗಾಣಿಗೇರ, ನೇಮಿರೆಡ್ಡಿ, ಹಾಲೇಶ ಕಂದಾರಿ, ಮಹಾಂತೇಶ ಹಿರೇಮಠ, ಗವಿಸಿದ್ಧಪ್ಪ ಚಿನ್ನೂರು ಮತ್ತಿತರರು ಉಪಸ್ಥಿತರಿದ್ದರು. ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ, ಕರಡಿ ಸಂಗಣ್ಣನವರಿಗೆ ಬೆಂಬಲ ಸೂಚಿಸಿದರು.
ಕಾಂಗ್ರೆಸ್ ತೊರೆದು ಬಿ.ಜೆ.ಪಿ.ಗೆ
ಭಾಗ್ಯನಗರ, ೨೧ : ಭಾಗ್ಯನಗರದ ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ ಮಾಲಗಿತ್ತಿ, ವೆಂಕಟೇಶ ಮಾಲಗಿತ್ತಿ ಸೇರಿದಂತೆ ಕುಮಾರ, ಸಂತೋಷ, ಅನಿಲ ಸಂಗಟಿ, ಸುನೀಲ ಗಂಗೂರ, ಸುನೀಲ ಸಂಗಟಿ, ಸಿದ್ದು, ಶರಣಪ್ಪ, ನಾಗರಾಜ, ವಿನಾಯಕ, ವಿನೋದ, ಶಿವು ಮೇಟಿ, ಹನುಮಂತ, ಗವಿಸಿದ್ಧಪ್ಪ ಕೆಂಚಗುಂಡಿ, ನಾಗರಾಜ, ಚೇತನ ಬಣ್ಣದ, ಅನಂದ ಕೆಂಚಗೇರಿ, ಕಾರ್ತಿಕ ಗಂಗೂರ, ನಭಿ ನದಾಫ್, ಕಾಳಿದಾಸ ಮೊದಲಾದವರು ಶಾಸಕ ಹಾಗೂ ಬಿ.ಜೆ.ಪಿ. ಕೊಪ್ಪಳದ ವಿಧಾನಸಭಾ ಅಭ್ಯರ್ಥಿ ಕರಡಿ ಸಂಗಣ್ಣನವರ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿ.ಜೆ.ಪಿ.ಯನ್ನು ಸೇರಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸೋಮಲಿಂಗಪ್ಪ ಮೆಣಸಿನಕಾಯಿ, ಶ್ರೀನಿವಾಸ ಹ್ಯಾಟಿ, ಕೃಷ್ಣ ಮ್ಯಾಗಳಮನಿ, ಕೊಟ್ರೇಶ ಶೇಡ್ಮಿ, ಸರೋಜಾ ಬಾಕಳೆ, ಸತೀಶ ಮೇಘರಾಜ, ಸುರೇಶ ದೊಣ್ಣಿ, ಪುಟ್ಟರಾಜ ಬೇವಿನಹಳ್ಳಿ ಉಪಸ್ಥಿತರಿದ್ದರು.
0 comments:
Post a Comment