PLEASE LOGIN TO KANNADANET.COM FOR REGULAR NEWS-UPDATES

ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಶುಕ್ರವಾರ ನಡೆದ ಇಂಗ್ಲೀಷ್ ವಿಷಯದ ಪರೀಕ್ಷೆಗೆ ಜಿಲ್ಲೆಯ ೧೫೬೦೦ ವಿದ್ಯಾರ್ಥಿಗಳು ಹಾಜರಾಗಿದ್ದು, ೬೮೭ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.  ಯಾವುದೇ ಡಿಬಾರ್ ಪ್ರಕರಣ ವರದಿಯಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
     ಎಸ್.ಎಸ್.ಎಲ್.ಸಿ. ಪರೀಕ್ಷೆಯ ಇಂಗ್ಲೀಷ್ ವಿಷಯಕ್ಕೆ ಬಾಲಕರು- ೮೮೮೯, ಬಾಲಕಿಯರು- ೭೩೯೮ ಸೇರಿದಂತೆ ಒಟ್ಟು ೧೬೨೮೭ ವಿದ್ಯಾರ್ಥಿಗಳು ದಾಖಲಾಗಿದ್ದರು.  ಇದರಲ್ಲಿ ಬಾಲಕರು- ೮೪೩೯, ಬಾಲಕಿಯರು- ೭೧೬೧ ಸೇರಿದಂತೆ ಒಟ್ಟು ೧೫೬೦೦ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದು,   ೪೫೦-ಬಾಲಕರು, ೨೩೭- ಬಾಲಕಿಯರು ಗೈರು ಹಾಜರಾಗಿದ್ದಾರೆ.  ಕೊಪ್ಪಳ ತಾಲೂಕಿನಲ್ಲಿ ೫೦೭೭ ವಿದ್ಯಾರ್ಥಿಗಳ ಪೈಕಿ ೪೮೨೩ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.  ಗಂಗಾವತಿ ತಾಲೂಕಿನಲ್ಲಿ ೫೨೮೨ ವಿದ್ಯಾರ್ಥಿಗಳ ಪೈಕಿ ೫೦೭೬, ಕುಷ್ಟಗಿ ತಾಲೂಕಿನಲ್ಲಿ ೨೭೮೬ ವಿದ್ಯಾರ್ಥಿಗಳ ಪೈಕಿ ೨೬೮೯, ಯಲಬುರ್ಗಾ ತಾಲೂಕಿನಲ್ಲಿ ೩೧೪೨ ವಿದ್ಯಾರ್ಥಿಗಳ ಪೈಕಿ ೩೦೧೨ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.  ಕೊಪ್ಪಳ ತಾಲೂಕಿ೮ನಲ್ಲಿ ೨೫೪, ಗಂಗಾವತಿ- ೨೦೬, ಕುಷ್ಟಗಿ-೯೭ ಮತ್ತು ಯಲಬುರ್ಗಾ ತಾಲೂಕಿನಲ್ಲಿ ೧೩೦ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು  ತಿಳಿಸಿದ್ದಾರೆ.


Advertisement

0 comments:

Post a Comment

 
Top