ಕೊಪ್ಪಳ ಜಿಲ್ಲಾ ಅಗ್ರಗಣ್ಯ ಬ್ಯಾಂಕ್ ಆಗಿರುವ ಸ್ಟೇಟ್‌ಬ್ಯಾಂಕ್ ಆಫ್
ಹೈದ್ರಾಬಾದ್ ಲೀಡ್ ಬ್ಯಾಂಕ್‌ನಿಂದ ಕೊಪ್ಪಳ ಜಿಲ್ಲೆಗೆ ೯೫೯. ೬೬ ಕೋಟಿ ರೂ.ಗಳ ಸಾಲ
ಯೋಜನೆಯನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು
ಬಿಡುಗಡೆ ಮಾಡಿದರು.
ಕೊಪ್ಪಳ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಜಿಲ್ಲಾ ಸಾಲಪತ್ರ ಯೋಜನೆ ಬಿಡುಗಡೆ ಸಮಾರಂಭ ನೆರವೇರಿತು.
ಕೊಪ್ಪಳ ಜಿಲ್ಲಾ ಸಾಲಪತ್ರ ಯೋಜನೆ ಬಿಡುಗಡೆಗೊಳಿಸಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ಮಾತನಾಡಿ, ಕೊಪ್ಪಳ ಜಿಲ್ಲೆ ಹಿಂದುಳಿದ ಪ್ರದೇಶವಾಗಿರುವುದರಿಂದ, ಈ ಭಾಗದ ಸಣ್ಣ ಮತ್ತು ಅತಿ ಸಣ್ಣ ರೈತರು ಆರ್ಥಿಕವಾಗಿಯೂ ಅತ್ಯಂತ ಹಿಂದುಳಿದಿದ್ದಾರೆ. ಈ ಭಾಗದ ಸರ್ವತೋಮುಖ ಅಭಿವೃದ್ಧಿಗೊಳಿಸಲು ಬ್ಯಾಂಕ್‌ಗಳ ನೆರವು ಅತ್ಯಗತ್ಯವಾಗಿದೆ. ಶೈಕ್ಷಣಿಕವಾಗಿ ಹಿಂದುಳಿದಿರುವ ಈ ಜಿಲ್ಲೆಯಲ್ಲಿ ೦೧ ರಿಂದ ೧೦ ನೇ ತರಗತಿಯಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಪೈಕಿ ಶೇ. ೭೦ ರಷ್ಟು ಪಿ.ಯು.ಸಿ. ಅಥವಾ ಇತರೆ ಶಿಕ್ಷಣಕ್ಕೆ ದಾಖಲಾತ್ತಾರೆ. ನಂತರ ಈ ಪೈಕಿ ಶೇ. ೪೦ ರಷ್ಟು ಪದವಿ ಮಟ್ಟದ ಶಿಕ್ಷಣಕ್ಕೆ ದಾಖಲಾಗುತ್ತಾರೆ, ಸ್ನಾತಕೋತ್ತರ ಶಿಕ್ಷಣಕ್ಕೆ ಕೇವಲ ಶೇ. ೧೦ ರಷ್ಟು ವಿದ್ಯಾರ್ಥಿಗಳು ಮಾತ್ರ ಮುಂದೆ ವ್ಯಾಸಂಗಕ್ಕೆ ದಾಖಲಾಗುತ್ತಿದ್ದಾರೆ. ಇದು, ಈ ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿಯಲು ಕಾರಣವಾಗಿರಬಹುದಾಗಿದೆ. ಓದುವ ಆಸೆ ಇದ್ದರೂ, ಆರ್ಥಿಕ ಸಂಕಷ್ಟದಿಂದಾಗಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮೊಟಕುಗೊಳಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಬ್ಯಾಂಕ್‌ಗಳ ಮೂಲಕ ಶೈಕ್ಷಣಿಕ ಸಾಲ ಒದಗಿಸುವ ಯೋಜನೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ. ಬ್ಯಾಂಕ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಶೈಕ್ಷಣಿಕ ಸಾಲ ಯೋಜನೆಗಳಿಗೆ ಆದ್ಯತೆ ನೀಡುವುದಲ್ಲದೆ, ವಿದ್ಯಾರ್ಥಿಗಳಿಗೆ ಈ ಯೋಜನೆಗಳ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಸಾಲ ಯೋಜನೆಯ ಹೈಲೈಟ್ಸ್ : ಕೊಪ್ಪಳ ಜಿಲ್ಲೆಗೆ ಒಟ್ಟು ೯೫೯. ೫೬ ಕೋಟಿ ರೂ.ಗಳ ಸಾಲ ಯೋಜನೆ ಬಿಡುಗಡೆ ಮಾಡಲಾಗಿದ್ದು, ಕೃಷಿ ಕ್ಷೇತ್ರಕ್ಕೆ ಅತಿ ಹೆಚ್ಚು ಅಂದರೆ ೬೩೯ ಕೋಟಿ ರೂ. ಮೀಸಲಿಡಲಾಗಿದೆ. ಸಣ್ಣ ಮತ್ತು ಮಧ್ಯಮ ಉದ್ಯಮ/ಕೈಗಾರಿಕಾ ಕ್ಷೇತ್ರಗಳಿಗೆ ೧೦೭. ೦೨ ಕೋಟಿ ರೂ., ಶಿಕ್ಷಣ ಕ್ಷೇತ್ರಕ್ಕೆ- ೨೦. ೨೬ ಕೋಟಿ, ಗೃಹ ಯೋಜನೆಗಳಿಗೆ- ೬೯. ೬೯ ಕೋಟಿ ರೂ. ಇತರೆ ಕ್ಷೇತ್ರಗಳಿಗೆ ೧೨೩. ೫೯ ಕೋಟಿ ರೂ. ನಿಗದಿಪಡಿಸಲಾಗಿದೆ. ನಿಗದಿತ ಸಾಲ ಯೋಜನೆಯಲ್ಲಿ ಗಂಗಾವತಿ ತಾಲೂಕಿಗೆ ಅತಿ ಹೆಚ್ಚು ಶೇ. ೫೬ ರಷ್ಟು ನಿಗದಿಪಡಿಸಲಾಗಿದ್ದು, ಕೊಪ್ಪಳ ತಾಲೂಕಿಗೆ ಶೇ. ೩೦, ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕಿಗೆ ತಲಾ ಶೇ. ೦೭ ರಷ್ಟು ನಿಗದಿಪಡಿಸಲಾಗಿದೆ. ಕಳೆದ ೨೦೧೨-೧೩ ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಕೃಷಿ ಕ್ಷೇತ್ರಕ್ಕೆ ೫೪೬ ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಆದರೆ ಪ್ರಸಕ್ತ ಸಾಲಿಗೆ ೬೩೯ ಕೋಟಿ ರೂ. ನಿಗದಿಪಡಿಸಿದ್ದು, ಶೇ. ೧೭. ೦೩ ರಷ್ಟು ಹೆಚ್ಚಳ ಮಾಡಲಾಗಿದೆ. ಸಾಲ ಯೋಜನೆಯಲ್ಲಿ ಕೊಪ್ಪಳ ತಾಲೂಕಿಗೆ ೨೯೨. ೭೨ ಕೋಟಿ ರೂ., ಗಂಗಾವತಿ- ೫೩೪. ೫೪ ಕೋಟಿ ರೂ., ಕುಷ್ಟಗಿ- ೬೨. ೯೪ ಕೋಟಿ ರೂ., ಹಾಗೂ ಯಲಬುರ್ಗಾ ತಾಲೂಕಿಗೆ ೬೯. ೩೬ ಕೋಟಿ ರೂ. ಸಾಲ ವಿತರಣೆಗೆ ಯೋಜನೆ ಹಮ್ಮಿಕೊಳ್ಳಲಾಗಿದೆ.
ಕೃಷಿ ಕ್ಷೇತ್ರಕ್ಕೆ ಕೊಪ್ಪಳ ತಾಲೂಕಿಗೆ ೧೨೭. ೪೭ ಕೋಟಿ, ಗಂಗಾವತಿ- ೪೧೩. ೮೧ ಕೋಟಿ, ಕುಷ್ಟಗಿ- ೪೬. ೦೫ ಕೋಟಿ, ಯಲಬುರ್ಗಾ ತಾಲೂಕಿಗೆ ೫೧. ೬೭ ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ಸಣ್ಣ ಮತ್ತು ಮಧ್ಯಮ ಉದ್ಯಮ/ಕೈಗಾರಿಕೆ ಕ್ಷೇತ್ರಕ್ಕೆ ಕೊಪ್ಪಳ ತಾಲೂಕಿಗೆ ೭೦. ೩೪ ಕೋಟಿ, ಗಂಗಾವತಿ- ೩೧. ೯೨ ಕೋಟಿ, ಕುಷ್ಟಗಿ- ೨. ೩೨ ಕೋಟಿ ಮತ್ತು ಯಲಬುರ್ಗಾ ತಾಲೂಕಿಗೆ ೨. ೪೪ ಕೋಟಿ ರೂ. ಸಾಲ ಯೋಜನೆಗೆ ಮೊತ್ತ ನಿಗದಿಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಎಸ್.ಬಿ.ಹೆಚ್.ನ ಗುಲಬರ್ಗಾ ವಲಯದ ಡೆಪ್ಯುಟಿ ಜೆನರಲ್ ಮ್ಯಾನೇಜರ್ ಎಲ್.ವಿ. ರವೀಂದ್ರಕುಮಾರ್, ಎಸ್.ಬಿ.ಹೆಚ್. ಬಳ್ಳಾರಿಯ ಎ.ಜಿ.ಎಂ. ವೆಂಕಟೇಶ್ವರರಾವ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಬೆಂಗಳೂರಿನ ಮ್ಯಾನೇಜರ್ ಆನಂದಬಾಬು, ನಬಾರ್ಡ್ ಬೆಂಗಳೂರಿನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಎಸ್.ಎಲ್. ಯೋಗೇಶ್, ಕೊಪ್ಪಳ ಎಸ್.ಬಿ.ಹೆಚ್. ಪ್ರಧಾನ ವ್ಯವಸ್ಥಾಪಕ ಎಂ.ಜೆ. ಭಾಸ್ಮೆ, ಕೊಪ್ಪಳ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ರವೀಂದ್ರ ಮುಂತಾದವರು ಭಾಗವಹಿಸಿದ್ದರು.

0 comments:
Post a Comment