ಸಹಸ್ರಾರು ಕಾರ್ಯಕರ್ತರೊಂದಿಗೆ ಭಾರಿ ಮೆರವಣಿಗೆ : ರೋಡ್ ಶೋದಲ್ಲಿ ಭಾರಿ ಜನಸಾಗರ : ಸಂಚಾರ ಸ್ಥಗಿತ
ಕೊಪ್ಪಳ,ಏ.೧೭: ಕರ್ನಾಟಕ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಕೆಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಇಲ್ಲಿನ ನೀರಸಾಬ ಎಂದೇ ಖ್ಯಾತಿ ಹೊಂದಿರುವ ಸಯ್ಯದ್ ಫೌಂಡೇಶನ್ ಮತ್ತು ಚಾರಿಟೇಬಲ್ ಟ್ರಸ್ಟನ್ ಅಧ್ಯಕ್ಷ ಕೆ.ಎಂ.ಸಯ್ಯದ್‌ರವರು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಬುಧವಾರದಂದು ತಮ್ಮ ಉಮೇದುವಾರಿಕೆಯ ನಾಮಪತ್ರವನ್ನು ಚುನಾವಣಾಧಿಕಾರಿಗೆ ಸಲ್ಲಿಸಿದರು.
ಈ ಮೆರವಣಿಗೆಯಲ್ಲಿ ಪಕ್ಷದ ಅಭ್ಯರ್ಥಿ ಕೆ.ಎಂ.ಸಯ್ಯದ್‌ರೊಂದಿಗೆ ಪಕ್ಷದ ಮುಖಂಡರಾದ ಪ್ರಫುಲ್‌ಗೌಡ ಹುರಕಡ್ಲಿ, ಹಾಜಿ ಸಯ್ಯದ್ ಹಜರತ್ ಪಾಷಾ ಖಾದ್ರಿ, ನೇಮಿರಾಜ ಪಾಟೀಲ್, ಪರಸಪ್ಪ ರಾಠೋಡ್, ರೈತ ಸಂಘದ ಮುಖಂಡ ಹನುಮಂತಪ್ಪ ಕಲಿಕೇರಿ, ಯಮನೂರಪ್ಪ ಹಲಗೇರಿ, ದೇವಪ್ಪ ಮಾಗಳದ, ಶ್ಯಾಮೀದ್‌ಸಾಬ ಕಿಲ್ಲೇದಾರ, ವಾಗ್ಮಿ ಯುವ ನಾಯಕ ಮೆಹಬೂಬ ಮುಲ್ಲಾ, ಲಕ್ಷ್ಮಣ ಕವಲೂರು, ಪ್ರಭಾಕರ ಬಡಿಗೇರ, ಬಿ.ಕೆ.ಹಿರೇಮಠ ವಕೀಲರು ಹುಲಗಿ, ಈಶ್ವರ ಲಿಂಗಾಪುರ, ಸಿ.ಎಂ.ಡಂಬಳ, ಅಬ್ದುಲ್ ಅಜೀಜ್ ಮಾನ್ವಿಕರ್, ಎಂ.ಡಿ.ಆಸೀಫ್ ಕರ್ಕಿಹಳ್ಳಿ, ಮಾರುತಿ ಮಾಗಳದ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಚುನಾವಣೆ ಸವಾಲಾಗಿ ಸ್ವೀಕರಿಸುವೆ : ಸಯ್ಯದ್
ಕೆಜೆಪಿ ಅಭ್ಯರ್ಥಿ ಕೆ.ಎಂ.ಸಯ್ಯದ್‌ರವರು ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡುತ್ತ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಈ ಚುನಾವಣೆ ಸವಾಲಾಗಿ ಸ್ವೀಕರಿಸಲಾಗಿದ್ದು, ಚುನಾವಣೆ ಯುದ್ದವೀರರಿಗೆ ಹಬ್ಬವೇ ಹೊರತು ಭಯವಲ್ಲ ಎಂದ ಅವರು, ಸರ್ವರ ಸಹಕಾರದೊಂದಿಗೆ ಸ್ಪರ್ಧಿಸಿರುವ ಈ ಚುನಾವಣೆಯಲ್ಲಿ ಗೆಲ್ಲುವ ಧೃಢ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿದ ಅವರು, ಕಳೆದ ೪-೫ ವರ್ಷಗಳಿಂದ ಕೊಪ್ಪಳ ನಗರ ಮತ್ತು ತಾಲೂಕಿನಲ್ಲಿ ಕೈಗೊಂಡಿರುವ ಜನಪರ ಕಾರ್ಯಕ್ರಮಗಳೇ ಈ ಚುನಾವಣೆಯಲ್ಲಿ ಗೆಲ್ಲಲು ಶ್ರೀರಕ್ಷೆಯಾಗಲಿದೆ. ಈಗಾಗಲೇ ಕ್ಷೇತ್ರದಲ್ಲಿ ಸಂಚರಿಸಲಾಗಿ ಕ್ಷೇತ್ರದ ಜನರ ನಾಡಿ ಮೀಡಿತವನ್ನು ಅರಿತಿದ್ದೇನೆ. ಅವರು ನನಗೆ ನೀಡಿರುವ ಭರವಸೆ ಮತ್ತು ಬೆಂಬಲದಿಂದ ನನ್ನ ವಿಶ್ವಾಸ ಇಮ್ಮಡಿಗೊಂಡಿದೆ. ಎಲ್ಲೇಡೆ ಸಾರ್ವಜನಿಕ ಮತದಾರರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಇದು ಒಳ್ಳೆಯ ಬೆಳವಣಿಗೆ ಎಂದ ಅವರು, ನಮ್ಮ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೈಗೊಂಡಿದ್ದ ಹತ್ತು ಹಲವಾರು ಜನಪರ ಕಾರ್ಯಕ್ರಮಗಳು ಕೂಡ ಈ ಚುನಾವಣೆಯಲ್ಲಿ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಕೆ.ಎಂ.ಸಯ್ಯದ್ ಧೃಢ ವಿಶ್ವಾಸ ವ್ಯಕ್ತಪಡಿಸಿದರು.
0 comments:
Post a Comment