ಕೊಪ್ಪಳ, ಏ.೨೪: ಅಧಿಕಾರ ವ್ಯಾಮೋಹ ದಾಹ ವಿರುವವರಿಂದ ಕ್ಷೇತ್ರದ ಅಭಿವೃದ್ಧಿ ಅಸಾಧ್ಯ ನಾವು ಅದನ್ನು ನಿರೀಕ್ಷಿಸುವುದು ಸಹ ತಪ್ಪು ಎಂದು ಜೆಡಿಎಸ್ ಎಸ್‌ಸಿ ಘಟಕದ ಯುವ ಮುಖಂಡ ಹನುಮೇಶ ಕಿಡಿಕಾರಿದರು.
ಅವರು ಮಂಗಳವಾರ ತಾಲೂಕಿನ ಬೋಚನಳ್ಳಿ ಗ್ರಾಮದ ಹರಿಜನ ಕೇರಿಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ನಮ್ಮನ್ನು ಓಟ್ ಬ್ಯಾಂಕ್‌ನ್ನಾಗಿಸಿಕೊಂಡಿದ್ದರೆ ಬಿಜೆಪಿ ಸಮಾಜಕ್ಕೆ ಕೊಡುಗೆ ನೆಪದಲ್ಲಿ ಸಮಾಜದ ಜನತೆಯ ವಂಚನೆಗೆ ಮುಂದಾಗಿದೆ. ಜೆಡಿಎಸ್ ಮಾತ್ರ ಸಮಾಜದ ಜನತೆಯನ್ನು ಎತ್ತಿಹಿಡಿಯುವ ಕಾರ್ಯಮಾಡಿ ಇಂದು ಸಾಕಷ್ಟು ಮುಖಂಡರು ರಾಜ್ಯ ಮಟ್ಟದಲ್ಲಿ ಜೆಡಿಎಸ್ ನಿಂದ ಗುರುತಿಸಿಕೊಂಡವರಾಗಿದ್ದಾರೆ. ಜೆಡಿಎಸ್ ಪಕ್ಷಕ್ಕೆ ನಿಜವಾಗಿಯೂ ನಮ್ಮ ಸಮಾಜದ ಬಗ್ಗೆ ಕಳಕಳಿ ಇದೆ. ಅಲ್ಲದೇ ಅಭ್ತರ್ಥಿ ಪ್ರದೀಪಗೌಡ ಮಾಲಿ ಪಾಟೀಲ್ ಕವಲೂರಗೌಡ್ರ ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದು ನಮ್ಮೆಲ್ಲಾ ಸಮಾಜದ ಹಾಗೂ ಸಂಬಂಧಿತರ ಮತಗಳು ಜೆಡಿಎಸ್ ಪಕ್ಷಕ್ಕೆ ಮಿಸಲಾಗಿರಲಿ ಎಂದು ಅವರಿಲ್ಲಿ ಕರೆ ನೀಡಿದರು.
ಇದೇ ವೇಳೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್ ಮಾತನಾಡಿ, ಪಕ್ಷದ ನಿಷ್ಠಾವಂತರಿಗೆ ಪಕ್ಷ ಎಂದು ಕೈಕೊಟ್ಟಿ ಎಲ್ಲರನ್ನು ಸಮಾನವಾಗಿ ಪಕ್ಷದಲ್ಲಿ ಪರಿಗಣಿಸಲಾಗುವುದು ಪ್ರಾದೇಶಿಕ ಜೆಡಿಎಸ್ ಪಕ್ಷದಿಂದ ಮಾತ್ರ ರಾಜ್ಯದಲ್ಲಿ ಸುಭದ್ರ ಸಮರ್ಪಕ ಆಢಳಿತ ನೀಡಲು ಸಾಧ್ಯ ಅದನ್ನು ಜನತೆ ಅರಿತು ಮತದಾನ ಮಾಡಬೇಕಿದೆ ಎಂದರು.
ನಂತರ ಕಾಂಗ್ರೆಸ್ ಮತ್ತು ಬಿಜೆಪಿ ತೊರೆದು ವಿವಿಧ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ನೀರಲಗಿ: ಅದೇ ರೀತಿ ನೀರಲಗಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ವಿವಿಧ ಪಕ್ಷದ ಮುಖಂಡರು ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಪ್ರಚಾರ: ಅಂದು ಮೋರನಾಳ, ನಿಲೋಗಿಪುರ, ಬೋಚನಳ್ಳಿ, ಹನುಕುಂಟಿ ಮತ್ತು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪ್ರಚಾರ ಕಾರ್ಯನಡೆಸಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ಮಾಜಿ ಸಚಿವ ವಿರುಪಾಕ್ಷಪ್ಪ ಅಗಡಿ, ಮಾಜಿ ಜಿ.ಪಂ. ಸದಸ್ಯ ಮೋತಿಲಾಲ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷರುಗಳಾದ ಎಂ.ವಿ. ಪಾಟೀಲ್, ನಿಲಕಂಠಯ್ಯ ಹಿರೇಮ ಠ, ನಗರಸಭೆ ಮಾಜಿ ಸದಸ್ಯ ಈರಣ್ಣ ಹಂಚಿನಾಳ ಹಾಗೂ ಹಿರಿಯರಾದ ಹಲಗೇರಿ ಬಸವರಾಜಪ್ಪ, ತಾಲ್ಲೂಕಾಧ್ಯಕ್ಷ ಅಂದಪ್ಪ ಮರೇಬಾಳ, ಕಾರ್ಯದರ್ಶಿ ಶೇಖಪ್ಪ ಲಕ್ಷಾಣಿ, ಎಸ್. ಟಿ ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಹೆಚ್.ರಮೇಶ ವಣಬಳ್ಳಾರಿ, ಪಕ್ಷದ ಮುಖಂಡರಾದ ವಿರೇಶ್‌ಮಹಾಂತಯ್ಯನಮಠ್, ರಾಜು ಹಲಗೇರಿ, ಕೋಟ್ರಪ್ಪ ಕೋರ್ಲಳ್ಳಿ, ಎಂ.ಡಿ.ಹುಸೇನ ಮಾಸ್ಟರ್, ನಗರ ಸಭೆ ಸದಸ್ಯರಾದ ಚನ್ನಪ್ಪ ಕೋಟ್ಯಾಳ್, ಖಾಜಾವಲಿ ಬನ್ನಿಕೊಪ್ಪ, ನಗರ ಯುವ ಘಟಕದ ಅಧ್ಯಕ್ಷ ಸೈಯದ್ ಎಂ.ಹುಸೇನಿ, ಟಿ.ಟಿ. ಪಾಟೀಲ್, ಸಿದ್ದಾರಡ್ಡಿ ಡಂಬ್ರಳ್ಳಿ, ಇಸೂಫ್‌ಖಾನ್, ಹನುಮಂತಪ್ಪ ಹೀರೆಸಿಂದೋಗಿ, ರಮೇಶ ಹದ್ಲಿ, ಶಂಕರ ಗೆ ಜ್ಜಿ, ದೇವೆಂದ್ರಪ್ಪ, ಭಾಗ್ಯನಗರದ ಮಂಜುನಾಥ ಶ್ಯಾವಿ, ಮಂಜುನಾಥ್ ಗಡ್ಡದ್, ವೆಂಕಟೇಶ ಬೆಲ್ಲದ್, ಅಮರೇಶ ಮುರುಳಿ, ವಿಜಯಕುಮಾರ ಬಿಸರಳ್ಳಿ, ಪ್ರಭು ಬಬ್ಲಿ ಸೇರಿದಂತೆ ಪಕ್ಷದ ಇತರ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
0 comments:
Post a Comment