PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ೨೧ : ಕಾಂಗ್ರೆಸ್‌ನಲ್ಲಿರುವ ನಾಯಕರ ಸ್ವಾರ್ಥ ಮತ್ತು ಒಳಜಗಳಗಳಿಂದಾಗಿ ಪಕ್ಷದ 'ಬಿ' ಫಾರಂಗಳನ್ನು ಹಣವಂತರಿಗೆ ಮಾರಾಟವಾಗಿವೆ. ಅಲ್ಲದೇ ಕಾಂಗ್ರೆಸ್ ಬಹುಮತ ಬರುತ್ತದೆ ಎಂದು ನಾಯಕರು ಹ್ಯಾಂಗ್‌ಓವರ್‌ನಲ್ಲಿ ಇದ್ದಾರೆ. ಬಿ.ಜೆ.ಪಿ. ಅಭಿವೃದ್ಧಿಗೆ ರಾಜ್ಯದಾದ್ಯಂತ ಒಲವು ಇದ್ದು, ಬಿಜೆ.ಪಿ. ಸ್ಪಷ್ಟ ಬಹುಮತ ಪಡೆದುಕೊಂಡು ಜಗದೀಶ ಶೆಟ್ರ್ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕೊಪ್ಪಳ ವಿಧಾನಸಭಾ ಬಿ.ಜೆ.ಪಿ. ಅಭ್ಯರ್ಥಿ ಕರಡಿ ಸಂಗಣ್ಣ ಹೇಳಿದರು.
ಅವರು ದಿ.೨೧-೦೪-೧೩ ರಂದು ಸಂಜೆ ನಗರದ ಬಸವರಾಜ ಮಟ್ಟಿಯವರ ಮನೆಯಲ್ಲಿ ಜರುಗಿದ ಬಿ.ಜೆ.ಪಿ. ಪ್ರಚಾರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತ ಮೇಲಿನಂತೆ ನುಡಿದರು.
ಅವರು ಮುಂದುವರಿದು ಈಗಾಗಲೇ ಶೆಟ್ಟರ್ ಮುಖ್ಯಮಂತ್ರಿಯಾದ ಮೇಲೆ ವಿಶೇಷ ಕಾಳಜಿ ವಹಿಸಿ, ಕೊಪ್ಪಳಕ್ಕೆ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು, ಮಳೆಮಲ್ಲೇಶ್ವರದ ಬಳಿ ಯಾತ್ರಿ ನಿವಾಸ ನಿರ್ಮಾಣ, ರಸ್ತೆಗಳ ನಿರ್ಮಾಣಕ್ಕೆ ೩ ಕೋಟಿ ಅನುದಾನ, ಕೊಪ್ಪಳ ಮತ್ತು ಭಾಗ್ಯನಗರ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜಿಗೆ ೫೪ ಕೋಟಿ ಮಂಜುರು ಮಾಡಿದ್ದಾರೆ. ಅಲ್ಲದೇ ಐತಿಹಾಸಿಕ ಕೋಟೆ ಅಭಿವೃದ್ಧಿ, ಹುಲಿಕೆರೆ ಅಭಿವೃದ್ಧಿಗೆ ಅನುದಾನ ಬಿಡುಸಡೆಗೊಳಿಸಿರುವುದು ನಮ್ಮ ಕೊಪ್ಪಳದ ಮೇಲಿನ ವಿಶೇಷ ಕಾಳಜಿಯನ್ನು ತೋರಿಸುತ್ತದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ ಮಾತನಾಡಿ ನಮ್ಮ ಶ್ರೀ ಕ್ಷೇತ್ರ ಗವಿಮಠಕ್ಕೆ ೨ ಕೋಟಿ ಅನುದಾನ, ಯಾತ್ರಿ ನಿವಾಸ, ಅಲ್ಲದೇ ಪ್ರಸಿದ್ಧ ಮರ್ದಾನಗೈಬ್ ದರ್ಗಾದ ಅಭಿವೃದ್ಧಿ, ರಸ್ತೆಗಳ ಅಭಿವೃದ್ಧಿ ಬಿ.ಜೆ.ಪಿ. ಸರಕಾರದ ಅವಧಿಯಲ್ಲಾದವುಗಳು. ಇನ್ನಷ್ಟು ಅಭಿವೃದ್ಧಿಗಾಗಿ ಕರಡಿ ಸಂಗಣ್ಣನವರಿಗೆ ಮತ ನೀಡಬೇಕೆಂದು ವಿನಂತಿಸಿಕೊಂಡರು.
ಮಾಜಿ ನಗರಸಭಾ ಅಧ್ಯಕ್ಷ ಗವಿಸಿದ್ಧಪ್ಪ ಕಂದಾರಿ, ಚಂದ್ರು ಕವಲೂರು,


ನಗರಾಧ್ಯಕ್ಷ ಸದಾಶಿವಯ್ಯ ಹಿರೇಮಠ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಣ್ಣ ಬಳ್ಳೊಳ್ಳಿ, ಪರಮೇಶ್ವರಪ್ಪ ಕೊಪ್ಪಳ, ಶ್ರೀಶೈಲಪ್ಪ ಶಿವಶೆಟ್ಟರ್, ಸಂಗಪ್ಪ ಚವಡಿ, ಸಿದ್ಧಲಿಂಗಪ್ಪ ನಿಲೂಗಲ್, ಪ್ರಭು ಹೆಬ್ಬಾಳ, ಚೆನ್ನಪ್ಪ ನಿಡಶೇಷಿ, ಚಂದ್ರಕಾಂತ ಸುರಾಣಾ, ಬಸವರಾಜ ಕುದರಿಮೋತಿ, ಸುನೀಲ ಹೆಸರೂರ, ಶೇಖಣ್ಣ ಹಕ್ಕಾಪಕ್ಕಿ, ದಾನಪ್ಪ ಶೆಟ್ಟರ್, ಅಕ್ಕನ ಬಳಗದ ಅಧ್ಯಕ್ಷರು ಹಗೂ ಸದಸ್ಯರು ಭಾಗವಹಿಸಿದ್ದರು.

 ಗ್ರಾಮಗಳಲ್ಲಿ ಮತಯಾಚನೆ ಮಾಡುತ್ತಿರುವ ಕೊಪ್ಪಳ ವಿಧಾನಸಭಾ ಬಿ.ಜೆ.ಪಿ. ಅಭ್ಯರ್ಥಿ ಕರಡಿ ಸಂಗಣ್ಣ ತಮ್ಮ ಬೆಂಬಲಿಗರೊಂದಿಗೆ.

Advertisement

0 comments:

Post a Comment

 
Top