ಕೊಪ್ಪಳ ೨೦ : ಭಾರತೀಯ ಜನತಾ ಪಕ್ಷದ ತತ್ವ, ಸಿದ್ಧಾಂತಗಳನ್ನು ಮತ್ತು ಸಂಗಣ್ಣ ಕರಡಿಯವರ ಅಭಿವೃದ್ಧಿಪರ ಧೋರಣೆಗಳನ್ನು ಮೆಚ್ಚಿ, ೧೬ ನೇ ವಾರ್ಡಿನ ಧುರೀಣ ಸೋಮಪ್ಪ ಗೆಜ್ಜಿ ಇವರು ಮರಳಿ ಬಿ.ಜೆ.ಪಿ ಪಕ್ಷಕ್ಕೆ ಸೇರ್ಪಡೆಯಾದರು. ಇದೇ ಸಂದರ್ಭದಲ್ಲಿ ಕೆ.ಜೆ.ಪಿ. ಪಕ್ಷವನ್ನು ತೊರೆದು ಮತ್ತೋರ್ವ ಮುಖಂಡ ಸಿದ್ದು ಹಂಡಿ ಹಾಗೂ ಆಬೀದ್ ಬಿಸರಳ್ಳಿ, ರಿಯಾಜ್ ಕುದರಿಮೋತಿ ಮುಂತಾದವರು ೫೦ ಕ್ಕೂ ಹೆಚ್ಚಿನ ಬೆಂಬಲಿಗರೊಂದಿಗೆ ಶಾಸಕ ಮತ್ತು ಬಿ.ಜೆ.ಪಿ. ಕೊಪ್ಪಳ ವಿಧಾನಸಭಾ ಅಭ್ಯರ್ಥಿ ಸಂಗಣ್ಣ ಕರಡಿಯವರ ಸಮ್ಮುಖದಲ್ಲಿ ಬಿ.ಜೆ.ಪಿ. ಪಕ್ಷವನ್ನು ಸೇರಿದರು. ಇವರನ್ನು ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡು, ಸಂಗಣ್ಣ ಕರಡಿಯವರ ಗೆಲುವಿಗೆ ಶ್ರಮಿಸುವಂತೆ ಪಕ್ಷದ ಮುಖಂಡರು ಕರೆ ಕೊಟ್ಟರು.
Home
»
»Unlabelled
» ಸೋಮಪ್ಪ ಗೆಜ್ಜಿ ಮರಳಿ ಬಿ.ಜೆ.ಪಿ.ಗೆ
Subscribe to:
Post Comments (Atom)
0 comments:
Post a Comment