PLEASE LOGIN TO KANNADANET.COM FOR REGULAR NEWS-UPDATES


  ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಸೇರ್ಪಡೆಯ ನಂತರ ಇದೀಗ ಮತದಾರರ ಸಂಖ್ಯೆಯ ಅಂತಿಮ ಪಟ್ಟಿ ಪ್ರಕಟಗೊಂಡಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ೯೩೩೬೮೫ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
  ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಹಾಗೂ ಕೊಪ್ಪಳ ಸೇರಿದಂತೆ ಒಟ್ಟು ೦೫ ವಿಧಾನಸಭಾ ಕ್ಷೇತ್ರಗಳಿದ್ದು, ಜಿಲ್ಲೆಯಲ್ಲಿ ಒಟ್ಟು ೪೭೧೩೨೫- ಪುರುಷ ಹಾಗೂ ೪೬೨೩೬೦ ಮಹಿಳೆಯರು ಸೇರಿ ಒಟ್ಟು ೯೩೩೬೮೫ ಮತದಾರರಿದ್ದಾರೆ. ಜಿಲ್ಲೆಯಲ್ಲಿ ಸುಗಮ ಮತದಾನ ಪ್ರಕ್ರಿಯೆಗಾಗಿ ಒಟ್ಟು ೧೧೩೬ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 
ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ  ೨೪೫ ಮತಗಟ್ಟೆಗಳಿದ್ದು, ೯೮೨೭೪-ಪುರುಷ, ೯೫೪೯೯- ಮಹಿಳೆ ಸೇರಿದಂತೆ ಒಟ್ಟು ೧೯೩೭೭೩ ಮತದಾರರಿದ್ದಾರೆ.

  ಕನಕಗಿರಿ ಕ್ಷೇತ್ರದಲ್ಲಿ ೨೨೫ ಮತಗಟ್ಟೆಗಳಿದ್ದು, ೯೧೪೩೯-ಪುರುಷ, ೯೨೨೩೯- ಮಹಿಳೆ ಸೇರಿದಂತೆ ಒಟ್ಟು ೧೮೩೬೭೮ ಮತದಾರರಿದ್ದಾರೆ.  

ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ೨೦೦ ಮತಗಟ್ಟೆಗಳಿದ್ದು, ೮೫೬೩೩-ಪುರುಷ, ೮೫೨೩೨-ಮಹಿಳಾ ಮತದಾರರು ಸೇರಿದಂತೆ ಒಟ್ಟು ೧೭೦೮೬೫ ಮತದಾರರಿದ್ದಾರೆ.  

ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ೨೨೯ ಮತಗಟ್ಟೆಗಳಿದ್ದು, ೯೨೦೨೨-ಪುರುಷ, ೮೮೦೮೭- ಮಹಿಳೆ ಹೀಗೆ, ಒಟ್ಟು ೧೮೦೧೦೯ ಮತದಾರರಿದ್ದಾರೆ.  

ಕೊಪ್ಪಳ ಕ್ಷೇತ್ರದಲ್ಲಿ ೨೩೭ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ೧೦೩೯೫೭-ಪುರುಷ, ೧೦೧೩೦೩-ಮಹಿಳೆ ಸೇರಿದಂತೆ ಒಟ್ಟು ೨೦೫೨೬೦ ಮತದಾರರಿದ್ದಾರೆ.

  ಕುಷ್ಟಗಿ ವಿಧಾನಸಭಾ ಕ್ಷೇತ್ರಗಳಲ್ಲಿನ ೨೪೫ ಮತಗಟ್ಟೆಗಳ ಪೈಕಿ ೨೦ ಮತಗಟ್ಟೆಗಳು ಪಟ್ಟಣ ಪ್ರದೇಶದಲ್ಲಿದ್ದರೆ, ೨೨೫ ಮತಗಟ್ಟೆಗಳು ಗ್ರಾಮಿಣ ಪ್ರದೇಶಗಳಲ್ಲಿವೆ.  ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲ ೨೨೫ ಮತಗಟ್ಟೆಗಳು ಗ್ರಾಮೀಣ ಪ್ರದೇಶಗಳಲ್ಲಿವೆ.  ಗಂಗಾವತಿ ಕ್ಷೇತ್ರದ ೨೦೦ ಮತಗಟ್ಟೆಗಳ ಪೈಕಿ ೭೮ ಮತಗಟ್ಟೆಗಳ ನಗರ ಪ್ರದೇಶದಲ್ಲಿದ್ದು, ಉಳಿದ ೧೨೨ ಮತಗಟ್ಟೆಗಳು ಗ್ರಾಮೀಣ ಪ್ರದೇಶದ ಮತಗಟ್ಟೆಗಳಾಗಿವೆ.  ಯಲಬುರ್ಗಾ ಕ್ಷೇತ್ರದ ೨೨೯ ಮತಗಟ್ಟೆಗಳ ಪೈಕಿ ೦೯ ಮತಗಟ್ಟೆಗಳು ಪಟ್ಟಣ ಪ್ರದೇಶದಲ್ಲಿದ್ದು, ೨೨೦ ಮತಗಟ್ಟೆಗಳು ಗ್ರಾಮೀಣ ಪ್ರದೇಶಗಳಲ್ಲಿವೆ.  ಕೊಪ್ಪಳ ವಿಧಾನಸಭಾ ಕ್ಷೇತ್ರದ ೨೩೭ ಮತಗಟ್ಟೆಗಳ ಪೈಕಿ ೫೧ ನಗರ ಪ್ರದೇಶದಲ್ಲಿದ್ದರೆ,  ಉಳಿದ ೧೮೬ ಮತಗಟ್ಡೆಗಳು ಗ್ರಾಮೀಣ ಪ್ರದೇಶಗಳಲ್ಲಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ  ತಿಳಿಸಿದೆ.


Advertisement

0 comments:

Post a Comment

 
Top