PLEASE LOGIN TO KANNADANET.COM FOR REGULAR NEWS-UPDATES


  ವಿಧಾನಸಭಾ ಚುನಾವಣೆ ನಿಮಿತ್ಯ ನೀತಿ ಸಂಹಿತೆ ಜಾರಿಯಲ್ಲಿದ್ದು, ಜಿಲ್ಲೆಯಲ್ಲಿ ಈವರೆಗೆ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು ೧೦ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಬಕಾರಿ ಅಕ್ರಮಗಳಿಗೆ ಸಂಬಂಧಿಸಿದಂತೆ ಈವರೆಗೆ ೫೦ ಜನರನ್ನು ಬಂಧಿಸಲಾಗಿದೆ.
  ಚುನಾವಣೆ ನಿಮಿತ್ಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಈವರೆಗೆ ೧೦ ಪ್ರಕರಣ ದಾಖಲಿಸಲಾಗಿದೆ.  ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ನೀತಿ ಸಂಹಿತೆ ಉಲ್ಲಂಘನೆಯ ೦೪ ಪ್ರಕರಣಗಳು ದಾಖಲಾಗಿದ್ದು, ಕನಕಗಿರಿ- ೦೨, ಗಂಗಾವತಿ- ೦೨, ಯಲಬುರ್ಗಾ- ೦೨ ಪ್ರಕರಣಗಳು ದಾಖಲಾಗಿವೆ.  ಕೊಪ್ಪಳ ಕ್ಷೇತ್ರದಲ್ಲಿ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.
  ಚುನಾವಣೆ ಸಮಯದಲ್ಲಿ ಅಕ್ರಮ ಮದ್ಯ ಸಾಗಾಣಿಕೆ ಬಗ್ಗೆ ತೀವ್ರ ನಿಗಾ ವಹಿಸಲಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೂ ಸುಮಾರು ೧೫೩ ಕಡೆ ದಾಳಿ ನಡೆಸಲಾಗಿದೆ.  ಈ ಪೈಕಿ ಅಕ್ರಮ ಮದ್ಯ ಸಾಗಾಣಿಕೆಗೆ ಸಂಬಂಧಿಸಿದಂತೆ ೬೫ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ೫೦ ಜನರನ್ನು ಬಂಧಿಸಿ, ೧೯೪. ೪೫೦ ಲೀ. ಅಕ್ರಮ ಮದ್ಯ ಮತ್ತು ೭೪. ೨೫೦ ಲೀ. ಬಿಯರ್ ವಶಪಡಿಸಿಕೊಳ್ಳಲಾಗಿದೆ.  ಕೊಪ್ಪಳ ತಾಲೂಕಿನಲ್ಲಿ ಇದುವರೆಗೂ ೪೨ ಕಡೆಗಳಲ್ಲಿ ದಾಳಿ ನಡೆಸಲಾಗಿದ್ದು, ೧೯ ಪ್ರಕರಣಗಳಲ್ಲಿ ಮೊಕದ್ದಮೆ ದಾಖಲಿಸಿ, ೧೭ ಜನರನ್ನು ಬಂಧಿಸಲಾಗಿದೆ.  ಇದರಲ್ಲಿ ೭೯. ೪೭೦ ಲೀ. ಮದ್ಯ, ೩೨. ೬೫೦ ಲೀ. ಬಿಯರ್ ವಶಕ್ಕೆ ತೆಗೆದುಕೊಳ್ಳಲಾಗಿದೆ.  ಗಂಗಾವತಿ ತಾಲೂಕಿನಲ್ಲಿ ೬೧ ಕಡೆ ದಾಳಿ ನಡೆಸಲಾಗಿದ್ದು, ೩೩ ಪ್ರಕರಣಗಳನ್ನು ದಾಖಲಿಸಿ ೨೨ ಜನರನ್ನು ಬಂಧಿಸಲಾಗಿದೆ.  ಇದರಲ್ಲಿ ೩೦. ೨೪೦ ಲೀ. ಮದ್ಯ ಹಾಗೂ ೨೬ ಲೀ. ಬಿಯರ್ ವಶಪಡಿಸಿಕೊಳ್ಳಲಾಗಿದೆ.  ಕುಷ್ಟಗಿ ತಾಲೂಕಿನಲ್ಲಿ ೨೮ ಕಡೆ ದಾಳಿ ನಡೆದಿದ್ದು, ೯ ಪ್ರಕರಣಗಳಲ್ಲಿ ಮೊಕದ್ದಮೆ ದಾಖಲಿಸಿ, ೦೭ ಜನರನ್ನು ಬಂಧಿಸಲಾಗಿದೆ.  ಇದರಲ್ಲಿ ೬೬. ೯೨೦ ಲೀ. ಅಕ್ರಮ ಮದ್ಯ ಮತ್ತು ೧೫. ೬೦೦ ಲೀ. ಬಿಯರ್ ವಶವಾಗಿದೆ.  ಯಲಬುರ್ಗಾ ತಾಲೂಕಿನಲ್ಲಿ ೨೨ ಕಡೆ ದಾಳಿ ನಡೆದಿದ್ದು, ೦೪ ಪ್ರಕರಣಗಳನ್ನು ದಾಖಲಿಸಿ, ೦೪ ಜನರನ್ನು ಬಂಧಿಸಲಾಗಿದೆ.  ಇದರಲ್ಲಿ ೧೭. ೮೨೦ ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ.  ಅಕ್ರಮ ಮದ್ಯ ಸಾಗಾಣಿಕೆಗೆ ಸಂಬಂಧಿಸಿದಂತೆ ಈವರೆಗೆ ಒಂದು ಟಿ.ವಿ.ಎಸ್. ದ್ವಿಚಕ್ರವಾಹನ ಮತ್ತು ೦೧ ಟಾಟಾ ಇಂಡಿಕಾ ಕಾರು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ  ತಿಳಿಸಿದೆ.

Advertisement

0 comments:

Post a Comment

 
Top