PLEASE LOGIN TO KANNADANET.COM FOR REGULAR NEWS-UPDATES

 ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಸೋಮವಾರ ನಡೆದ ಗಣಿತ ವಿಷಯದ ಪರೀಕ್ಷೆಗೆ ಜಿಲ್ಲೆಯ ೧೫೮೫೯ ವಿದ್ಯಾರ್ಥಿಗಳು ಹಾಜರಾಗಿದ್ದು, ೭೧೦ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.  ಯಾವುದೇ ಡಿಬಾರ್ ಪ್ರಕರಣ ವರದಿಯಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
     ಎಸ್.ಎಸ್.ಎಲ್.ಸಿ. ಪರೀಕ್ಷೆಯ ಗಣಿತ ವಿಷಯಕ್ಕೆ ಬಾಲಕರು- ೯೦೭೯, ಬಾಲಕಿಯರು- ೭೪೯೦ ಸೇರಿದಂತೆ ಒಟ್ಟು ೧೬೫೬೯ ವಿದ್ಯಾರ್ಥಿಗಳು ದಾಖಲಾಗಿದ್ದರು.  ಇದರಲ್ಲಿ ಬಾಲಕರು- ೮೬೧೩, ಬಾಲಕಿಯರು- ೭೨೪೬ ಸೇರಿದಂತೆ ಒಟ್ಟು ೧೫೮೫೯ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದು,   ೪೬೬-ಬಾಲಕರು, ೨೪೪- ಬಾಲಕಿಯರು ಗೈರು ಹಾಜರಾಗಿದ್ದಾರೆ.  ಕೊಪ್ಪಳ ತಾಲೂಕಿನಲ್ಲಿ ೫೨೪೧ ವಿದ್ಯಾರ್ಥಿಗಳ ಪೈಕಿ ೪೯೭೨ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.  ಗಂಗಾವತಿ ತಾಲೂಕಿನಲ್ಲಿ ೫೩೭೪ ವಿದ್ಯಾರ್ಥಿಗಳ ಪೈಕಿ ೫೧೫೯, ಕುಷ್ಟಗಿ ತಾಲೂಕಿನಲ್ಲಿ ೨೮೦೨ ವಿದ್ಯಾರ್ಥಿಗಳ ಪೈಕಿ ೨೭೦೫, ಯಲಬುರ್ಗಾ ತಾಲೂಕಿನಲ್ಲಿ ೩೧೫೨ ವಿದ್ಯಾರ್ಥಿಗಳ ಪೈಕಿ ೩೦೨೩ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.  ಕೊಪ್ಪಳ ತಾಲೂಕಿ೮ನಲ್ಲಿ ೨೬೯, ಗಂಗಾವತಿ- ೨೧೫, ಕುಷ್ಟಗಿ-೯೭ ಮತ್ತು ಯಲಬುರ್ಗಾ ತಾಲೂಕಿನಲ್ಲಿ ೧೨೯ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು  ತಿಳಿಸಿದ್ದಾರೆ.

Advertisement

0 comments:

Post a Comment

 
Top