PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಏ.೧೧:  ನಗರದ ಕವಲೂರು ಓಣಿಯ ಬಿಜೆಪಿ ಪಕ್ಷದ ವಿವಿಧ ಮುಖಂಡರು ಹಾಗೂ ಕಾರ್ಯಕರ್ತರು ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್‌ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.
ಕವಲೂರು ಓಣಿಯ ರಮೇಶ ಹದ್ಲಿ, ಶಂಕರಗೌಡ ಮಾ.ಪಾ. ಕುಣಕೇರಿ, ಪ್ರಭು ಕವಲೂರು, ಬಿಟಿ ಪಾಟೀಲ್ ನಗರದ ರಾಜು ಹೊಸಮನಿ ನೇತೃತ್ವದ ಮಂಜುನಾಥ ಶ್ಯಾಪುರ, ಶಿವಣ್ಣ ಬೂದಿಹಾಳ, ಈರಯ್ಯ ಹಿರೇಮಠ, ರಮೇಶ ಅತ್ತಲ್ಲಿ, ದಾವೂದ್ ಬೇಳೂರು, ರಮೇಶ, ಪರಮೇಶ, ಆನಂದ ಸೇರಿದಂತೆ ಅನೇಕರು ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.  

ತಾಂಡಾದ ನೂರಾರು ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ
ಕೊಪ್ಪಳ, ಏ.೧೧:  ತಾಲೂಕಿನ ಕುಣಕೇರಿ ತಾಂಡಾ, ಹುಲಗಿ ತಾಂಡಾ ಮತ್ತು ಕನಕಾಪುರ ತಾಂಡಾದ ವಿವಿಧ ಪಕ್ಷಗಳ ನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್‌ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.
ತಾಂಡಾದ ಮುಖಂಡರಾದ ಶಂಕರನಾಯಕ, ಶಿವಪ್ಪ ಮುಂಗಲಿ, ಲಾಲಪ್ಪ ಬಡಿಗಿ, ಸುರೇಪ್ಪ ಜಾಕೋಡ್, ಬಾಳಪ್ಪ ಹಾಗೂ ಮಹಿಳಾ ಮುಖಂಡರಾದ ಜೀಣಾಬಾಯಿ, ನಾಜುಬಾಯಿ, ಶಾಂತವ್ವ ಗೌಡ್ರ, ಲಕ್ಷ್ಮವ್ವ ಬಂಡಿ ನೇತೃತ್ವದ ನೂರಾರು ಕಾರ್ಯಕರ್ತರು ಅಧಿಕೃತವಾಗಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.
ಗುನ್ನಳ್ಳಿ, ಯತ್ನಟ್ಟಿ ಯುವಕರು ಜೆಡಿಎಸ್ ಸೇರ್ಪಡೆ
ಕೊಪ್ಪಳ, ಏ.೧೧:  ತಾಲೂಕಿನ ಗುನ್ನಳ್ಳಿ ಹಾಗೂ ಯತ್ನಟ್ಟಿ ಗ್ರಾಮಗಳ ವಿವಿಧ ಪಕ್ಷಗಳ  ಕಾರ್ಯಕರ್ತರು ಹಾಗೂ ಮುಖಂಡರು ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್‌ರವರ ಸಮ್ಮುಖದಲ್ಲಿ ನಗರದ ಹೊರ ವಲಯದ  ಜೆಡಿಎಸ್ ಪಕ್ಷದ ಪ್ರಚಾರ ಕಾರ್ಯಾಲಯದಲ್ಲಿ ಪಕ್ಷ ಸೇರ್ಪಡೆಗೊಂಡರು.
ಗುನ್ನಳ್ಳಿ ಗ್ರಾಮದ ಹನುಮಪ್ಪ ಅಡೂರು, ನಾಗರಾಜ ಎಲ್‌ಎಲ್‌ಬಿ ಹಾಗೂ ಯತ್ನಟ್ಟಿ ಗ್ರಾಮದ ಚರಂಜೀವಿ ಪೂಜಾರ, ಮಲ್ಲಿಕಾರ್ಜುನ ಪೂಜಾರ ನೇತೃತ್ವದ ಯುವಕರು ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.

ಆಯ್ಕೆಯಾದರೆ ಮತದಾರರ ಮನೆ ಬಾಗಿಲಿಗೆ ಸೇವೆ: ಪ್ರದೀಪಗೌಡ
ಕೊಪ್ಪಳ,ಏ,೧೧: ಕ್ಷೇತ್ರದ ಜನತೆ ಆಯ್ಕೆಗೊಳಿಸಿದಲ್ಲಿ ಮತದಾರರ ಮನೆಗೆ ಅಲೆದು ಕ್ಷೇತ್ರದ ಅಭಿವೃದ್ಧಿ ಮತ್ತು ಜನ ಸೇವೆ ಮಾಡುವುದಾಗಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್ ತಿಳಿಸಿದರು.
ಅವರು ಮಂಗಳವಾರ ನಗರದ ಹೊಸಪೇಟೆ ರಸ್ತೆಯಲ್ಲಿನ ಜೆಡಿಎಸ್ ಪಕ್ಷದ ಪ್ರಚಾರ ಕಾರ್ಯಾಲಯದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷಗಳ ನೂರಾರು ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ನೆರೆದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
 ಜನಸೇವೆ ಮಾಡುವದಾಗಿ ಅಧಿಕಾರಕ್ಕೆ ಬಂದರವು ಜನತೆಯನ್ನು ಮನೆಗೆ ಅಲೆಸುವಂತೆ ನಾನು ಮಾಡುವುದಿಲ್ಲ, ಆಯಾ ಮತದಾರರೆಲ್ಲಾ ಆಜ್ಞೆಮಾಡಿದರೆ ಸಾಕು ಅಲ್ಲಿನ ಯಾವುದೇ ಸಮಸ್ಯೆ ಇರಲಿ ತಕ್ಷಣ ಪರಿಹರಿಸುವೇ. ಎಸ್‌ಎಂಎಸ್ ಮೂಲಕ ಸಮಸ್ಯೆ ತಿಳಿಸಿದರೆ ಪರಿಹಾರ ಕಂಡುಕೊಳ್ಳುವುದು ಒಟ್ಟಾರೆ ಅಧಿಕಾರ ಮತದಾರರ ಕೈಯಲ್ಲಿ ಎಂಬುದನ್ನು ಸಾಬೀತು ಪಡಿಸುತ್ತೇನೆ. ಅದೇ ರೀತಿ ಜನತೆಯೂ ದಕ್ಷ, ಪ್ರಾಮಾಣಿಕ ಹಾಗೂ ಜನಚಿಂತಕರಿಗೆ ನಮ್ಮ ಮತ ಎಂಬುದನ್ನು ಸಾಬೀತು ಪಡಿಸಲು ಈ ಚುನಾವಣೆ ಸಾಕ್ಷಿಯಾಗಬೇಕಿದೆ. ಪ್ರತಿಯೊಬ್ಬ ಮತದಾರ ಈ ಚುನಾವಣೆಯಲ್ಲಿ ಅದನ್ನು ನಿಜಗೊಳಿಸಲು ಕಡ್ಡಾಯ ಮತದಾನದ ಮೂಲಕ ಜೆಡಿಎಸ್ ಪಕ್ಷ ಅತ್ಯಧಿಕ ಮತಗಳಿಂದ ವಿಜಯಶಾಲಿಯಾಗಲು ತಾವೇಲ್ಲಾ ಬೆಂಬಲಿಸಿ ಹರಸಬೇಕೆಂದು ಅವರಿಲ್ಲಿ ಮನವಿ ಮಾಡಿದರು.
ದಿನದಿಂದ ದಿನಕ್ಕೆ ವಿವಿಧ ಪಕ್ಷಗಳ ಕಾರ್ಯಕರ್ತರು ನಮ್ಮ ಪಕ್ಷದ ದಕ್ಷತೆ ಹಾಗೂ ಜನಪರ ಕಾರ್ಯಗಳನ್ನು ಕಂಡು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷ ಸೇರ್ಪಡೆಗೊಳ್ಳುತ್ತಿರುವುದು ಪಕ್ಷಕ್ಕೆ ಮತಷ್ಟು ಆನೆ ಬಲ ಬಂದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. 
ಇದೇ ವೇಳೆ ನಗರ ಯುವ ಘಟಕದ ಅಧ್ಯಕ್ಷ ಸೈಯದ್ ಮಹೆಮುದ್ ಹುಸೇನಿ, ಇಸೂಫ್‌ಖಾನ್ ಸೇರಿದಂತೆ ಇತರರು ಮಾತನಾಡಿ, ಕ್ಷೇತ್ರದಾಧ್ಯಂತ ಗೌಡರ ಕುರಿತು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದಲ್ಲದೇ ಕ್ಷೇತ್ರದ ಅಭಿವೃದ್ಧಿ ಹಿತದೃಷ್ಠಿಯಿಂದ ಬದಲಾವಣೆಗೆ ಸೂಕ್ತ ಕಾಲವೆಂಬುದು ಮತದಾರರು ವ್ಯಕ್ತಪಡಿಸಿದ್ದು ಗೌಡ
 ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲ್ಲೂಕಾಧ್ಯಕ್ಷ ಅಂದಪ್ಪ ಮರೇಬಾಳ,ಎಸ್. ಟಿ ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಹೆಚ್.ರಮೇಶ ವಣಬಳ್ಳಾರಿ, ಪಕ್ಷದ ಮುಖಂಡರಾದ ವಿರೇಶ್‌ಮಹಾಂತಯ್ಯನಮಠ್, ಕೋಟ್ರಪ್ಪ ಕೋರ್ಲಳ್ಳಿ, ಎಂ.ಡಿ.ಹುಸೇನ ಮಾಸ್ಟರ್, ನಗರ ಸಭೆ ಸದಸ್ಯರಾದ ಚನ್ನಪ್ಪ ಕೋಟ್ಯಾಳ್, ಖಾಜಾವಲಿ ಬನ್ನಿಕೊಪ್ಪ, ನಗರ ಯುವ ಘಟಕದ ಅಧ್ಯಕ್ಷ ಸೈಯದ್ ಮಹೆಮುದ್ ಹುಸೇನಿ, ಟಿ.ಟಿ. ಪಾಟೀಲ್, ಸಿದ್ದಾರಡ್ಡಿ ಡಂಬ್ರಳ್ಳಿ, ಹನುಮಂತಪ್ಪ ಹೀರೆಸಿಂದೋಗಿ,  ದೇವೆಂದ್ರಪ್ಪ, ಭಾಗ್ಯನಗರದ ಮಂಜುನಾಥ ಶ್ಯಾವಿ, ಮಂಜುನಾಥ್ ಗಡ್ಡದ್, ವೆಂಕಟೇಶ ಬೆಲ್ಲದ್, ಅಮರೇಶ ಮುರುಳಿ, ವಿಜಯಕುಮಾರ ಬಿಸರಳ್ಳಿ, ಸೇರಿದಂತೆ ಪಕ್ಷದ ಅನೇಕ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಇದೇ ವೇಳೆ ಕನಕಾಪುರ ತಾಂಡಾ, ಹುಲಗಿ ತಾಂಡಾ ಹಾಗೂ ಕುಣಕೇರಿ ತಾಂಡಾದಿಂದ ಆಗಮಿಸಿದ ನೂರಾರು ಜನ ಕಾರ್ಯಕರ್ತರು ಹಾಗೂ ಮುಖಂಡರು ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್ ರವರ ಸಮ್ಮುಖದಲ್ಲಿ  ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.

Advertisement

0 comments:

Post a Comment

 
Top