PLEASE LOGIN TO KANNADANET.COM FOR REGULAR NEWS-UPDATES


  ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ೨೦೧೨ ರಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.  
ಮಲ್ಲಿಕಾ ದತ್ತಿ ಪ್ರಶಸ್ತಿಗೆ ೨೦೧೨ ರಲ್ಲಿ ಪ್ರಕಟವಾದ ಅತ್ಯುತ್ತಮ ಲೇಖಕಿಯರ ಕೃತಿಗೆ ರೂ.೫೦೦/- ಬಹುಮಾನ ನೀಡಲಾಗುವುದು, ಹಿರಿಯ-ಕಿರಿಯ ಲೇಖಕಿಯರು ಎಂಬ ವ್ಯತ್ಯಾಸವಿಲ್ಲ. ಯಾರು ಬೇಕಾದರೂ ಭಾಗವಹಿಸಬಹುದು. ಸ್ವತಂತ್ರ ಅಥವಾ ಅನುವಾದಿತ ಕೃತಿಯಾದರೂ ಆಗಬಹುದು. ಅಂತರಾಷ್ಟ್ರೀಯ ಮಹಿಳಾ ವರ್ಷದ ಮಹಿಳಾ ದತ್ತಿ ಪ್ರಶಸ್ತಿಗೆ ಮಹಿಳೆಯರ ಅತ್ಯುತ್ತಮ ಕೃತಿಗೆ ರೂ.೫೦೦/- ಬಹುಮಾನವನ್ನು ನೀಡಲಾಗುವುದು. ಸ್ವತಂತ್ರ ಕೃತಿಯಾಗಿರಬೇಕು, ಅನುವಾದ ಕೃತಿಗಳನ್ನಾಗಲೀ, ಪುನರ್ ಮುದ್ರಣಗೊಂಡ ಕೃತಿಗಳನ್ನಾಗಲೀ ಪರಿಣಮಿಸುವುದಿಲ್ಲ.   ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿಗೆ ಲೇಖಕಿ ಒಬ್ಬರ ಮಹತ್ವದ ಕೃತಿಗೆ ರೂ.೫೦೦/- ಬಹುಮಾನ. ಲಿಂ.ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ ಪ್ರಶಸ್ತಿಗೆ   ಅತ್ಯುತ್ತಮ ಮಹಿಳಾ ಸಾಹಿತ್ಯದ (ಮಹಿಳೆಯರನ್ನು ಕುರಿತು ಅಥವಾ ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ರಚಿತವಾದ) ಕೃತಿಗೆ ರೂ.೫೦೦/- ಬಹುಮಾನ.    ನೀಲಗಂಗಾ ದತ್ತಿ ಪ್ರಶಸ್ತಿಗೆ   ಮಹಿಳೆಯರ ಪ್ರಬಂಧ, ಕವನ, ಕಾವ್ಯ ಮತ್ತು ಸಮಕಾಲಿನ ಮೌಲಿಕ ವಿಚಾರವುಳ್ಳ ಗ್ರಂಥಕ್ಕೆ ರೂ.೫೦೦ ಬಹುಮಾನ.   ಶಾರದಾ ಆರ್.ರಾವ್ ದತ್ತಿ ಪ್ರಶಸ್ತಿಗೆ ಉದಯೋನ್ಮುಖ ಮಹಿಳಾ ಬರಹಗಾರರ ಅತ್ಯುತ್ತಮ ಕೃತಿಗೆ ರೂ.೨೫೦/- ಬಹುಮಾನ.  ದಿ|| ಗೌರಮ್ಮ ಹಾರ್‍ನಹಳ್ಳಿ ಕೆ.ಮಂಜಪ್ಪ ದತ್ತಿ ಪ್ರಶಸ್ತಿಗೆ ಲೇಖಕಿಯರಿಂದ ರಚಿತವಾದ ಯಾವುದೇ ಪ್ರಕಾರದ ಕೃತಿಗೆ ರೂ.೧೦೦೦/- ಬಹುಮಾನ. ದಿ|| ಎಚ್.ಕರಿಯಣ್ಣ ದತ್ತಿ ಪ್ರಶಸ್ತಿಗೆ ಲೇಖಕಿಯರಿಂದ ರಚಿತವಾಗಿರುವ ಮಕ್ಕಳ ಪುಸ್ತಕಕ್ಕೆ ರೂ.೫೦೦/- ಬಹುಮಾನ.  ಡಾ|| ಎಚ್.ನರಸಿಂಹಯ್ಯ ದತ್ತಿ ಪ್ರಶಸ್ತಿಗೆ ವೈಚಾರಿಕ ಹಾಗೂ ವೈಜ್ಞಾನಿಕ ಮನೋಭಾವಕ್ಕೆ ಸಂಬಂಧಿಸಿದ ಶ್ರೇಷ್ಠ ಕೃತಿಗೆ ರೂ.೫೦೦/- ಬಹುಮಾನ.  ಅಸುಂಡಿ ಹುದ್ದಾರ್ ಕೃಷ್ಣರಾವ್ ಸ್ಮಾರಕ ದತ್ತಿ ಪ್ರಶಸ್ತಿಗೆ ಹರಿದಾಸ ಸಾಹಿತ್ಯ ಕುರಿತ ಕೃತಿಗೆ ರೂ.೨೫೦/- ಬಹುಮಾನ. ಜಿ.ಪಿ.ರಾಜರತ್ನಂ ಸಂಸ್ಮರಣ ದತ್ತಿ ಪ್ರಶಸ್ತಿಗೆ (ಮಕ್ಕಳ ಪುಸ್ತಕ ಬಹುಮಾನ ಸ್ಪರ್ಧೆ-ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬರಹಗಾರರಿಗೆ ಮಾತ್ರ ಅವಕಾಶ) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬರಹಗಾರರು ಬರೆದಿರುವ ಅತ್ಯುತ್ತಮ ಮಕ್ಕಳ ಪುಸ್ತಕಕ್ಕೆ ರೂ.೨೫೦/- ಬಹುಮಾನ. (ಪುಸ್ತಕ ೧೫ ವರ್ಷ ವಯಸ್ಸಿನ ಒಳಗಿರುವ ಮಕ್ಕಳು ಓದುವಂತಹ ಕೃತಿ ಯಾಗಿರಬೇಕು), ದಿ|| ಕೆ.ವಿ.ರತ್ನಮ್ಮ ದತ್ತಿ ಪ್ರಶಸ್ತಿಗೆ  ಉದಯೋನ್ಮುಖ ಬರಹಗಾರರ ಅತ್ಯುತ್ತಮ ಚೊಚ್ಚಲ ಪದ್ಯಕೃತಿ ಒಂದಕ್ಕೆ ರೂ.೫೦೦/- ಬಹುಮಾನ. ಸ್ಪರ್ಧೆಯಲ್ಲಿ ಯಾರು ಬೇಕಾದರು ಭಾಗವಹಿಸಬಹುದು,  ರತ್ನಾಕರವರ್ಣಿ-ಮುದ್ದಣ್ಣ-ಅನಾಮಿಕ ದತ್ತಿ ಪ್ರಶಸ್ತಿಗೆ ಅತ್ಯುತ್ತಮ ಗದ್ಯಕೃತಿ ಒಂದಕ್ಕೆ ಹಾಗೂ ಅತ್ಯುತ್ತಮ  ಪದ್ಯ ಕೃತಿ ಒಂದಕ್ಕೆ ತಲಾ ೫೦೦/-ಬಹುಮಾನ. ಸ್ಪರ್ಧೆಯಲ್ಲಿ ಯಾರು ಬೇಕಾದರು ಭಾಗವಹಿಸಬಹುದು, ಪಿ.ಶಾಂತಿಲಾಲ್ ದತ್ತಿ ಪ್ರಶಸ್ತಿಗೆ  ಜೈನ ಸಾಹಿತ್ಯ ಕುರಿತ ಯಾವುದೇ ಪ್ರಕಾರದ ಕನ್ನಡ ಪುಸ್ತಕಕ್ಕೆ ರೂ.೫೦೦/- ಬಹುಮಾನ.  ಅಕ್ಕಮ್ಮ ಗಿರಿಗೌಡ ರುದ್ರಪ್ಪ ದತ್ತಿ ಪ್ರಶಸ್ತಿಗೆ   ಅತ್ಯುತ್ತಮವಾದ ಜಾನಪದ ಸಾಹಿತ್ಯ ಕೃತಿ ಒಂದಕ್ಕೆ  ೫೦೦/- ಬಹುಮಾನ. ಜಯಲಕ್ಷ್ಮಮ್ಮ ಬಿ.ಎಸ್.ಸಣ್ಣಯ್ಯ ದತ್ತಿ ಪ್ರಶಸ್ತಿಗೆ ಪ್ರಾಚೀನ ಸಂಪಾದಿತ ಕೃತಿಗೆ ರೂ.೧೦೦೦/- ಬಹುಮಾನ.  ಸ್ಪರ್ಧೆಯಲ್ಲಿ ಯಾರು ಬೇಕಾದರು ಭಾಗವಹಿಸಬಹುದು.  ಕುಂಬಾಸ್ ದತ್ತಿ ಪ್ರಶಸ್ತಿಗೆ   ಕನ್ನಡ ಹಾಸ್ಯ ಸಾಹಿತ್ಯ ಕೃತಿಗೆ ರೂ.೫೦೦/- ಬಹುಮಾನ. (ಹಾಸ್ಯ ಸಾಹಿತ್ಯದ ಬಗ್ಗೆ ಬರೆದಿರುವ ಪುಸ್ತಕ, ಲೇಖನ, ಚುಟುಕು ಇತ್ಯಾದಿಗಳ ಬಗ್ಗೆ ವಿವರವಾದ ಪರಿಚಯ ಬರೆದು ಕಳುಹಿಸುವುದು), ಪ್ರೊ|| ಡಿ.ಸಿ.ಅನಂತಸ್ವಾಮಿ ದತ್ತಿ ಪ್ರಶಸ್ತಿಗೆ ಅತ್ಯುತ್ತಮ ಚೊಚ್ಚಲ ಕವನ ಸಂಕಲನಕ್ಕೆ ರೂ.೫೦೦/- ಬಹುಮಾನ. ಸ್ಪರ್ಧೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಜಿ.ಆರ್. ರೇವಯ್ಯ ದತ್ತಿ ಪ್ರಶಸ್ತಿಗೆ ಪ್ರಕಟವಾದ ದೀನ ದಲಿತರ ಮತ್ತು ಶೋಷಿತ ವರ್ಗಗಳ ರಕ್ಷಣೆಗೆ ಶ್ರಮಿಸುವ ವ್ಯಕ್ತಿಗಳ ಬಗ್ಗೆ ಸಾಹಿತ್ಯ ಕೃತಿಗೆ ರೂ.೧೦೦೦/- ಬಹುಮಾನ. ಉದಯೋನ್ಮುಖ ಬರಹಗಾರರು, ಬರಹಗಾರ್ತಿಯರು ಸ್ಪರ್ಧೆಯಲ್ಲಿ ಭಾಗವಹಿಸಬಹುದು, ಸಿಸು ಸಂಗಮೇಶ ದತ್ತಿ ಪ್ರಶಸ್ತಿಗೆ  ಅತ್ಯುತ್ತಮ ಮಕ್ಕಳ ಸಾಹಿತ್ಯ ಕೃತಿಗೆ ರೂ.೫೦೦/- ಬಹುಮಾನ. ಸ್ಪರ್ಧೆಯಲ್ಲಿ ಯಾರು ಬೇಕಾದರು ಭಾಗವಹಿಸಬಹುದು, ಪಂಪಮ್ಮ-ಶರಣೇಗೌಡ ವಿರುಪಾಪುರ ದತ್ತಿ ಪ್ರಶಸ್ತಿಗೆ  ಉತ್ತಮ ಸಾಹಿತ್ಯ ಕೃತಿಗೆ ರೂ.೫೦೦/- ಬಹುಮಾನ. (ರಾಯಚೂರು ಜಿಲ್ಲೆಯ ಬರಹಗಾರರಿಗೆ ಮಾತ್ರ ಸೀಮಿತ), ಕೆ.ವಾಸುದೇವಾಚಾರ್ ದತ್ತಿ ಪ್ರಶಸ್ತಿಗೆ ಸಣ್ಣಕಥಾ ಸಂಕಲನ ಕೃತಿಗೆ ರೂ.೫೦೦/- ಬಹುಮಾನ. ಸ್ಪರ್ಧೆಯಲ್ಲಿ ಯಾರು ಬೇಕಾದರು ಭಾಗವಹಿಸಬಹುದು, ಡಾ|| ಆರ್.ಜೆ.ಗಲಗಲಿ ದತ್ತಿ ಪ್ರಶಸ್ತಿಗೆ  ಉತ್ತಮ ಕವನ ಸಂಕಲನ ಒಂದಕ್ಕೆ ರೂ.೧೦೦೦/- ಬಹುಮಾನ. ಬೆಳಗಾವಿ ಜಿಲ್ಲೆಯ ಬರಹಗಾರರಿಗೆ ಮಾತ್ರ ಅವಕಾಶ. ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಡಾ.ಮದನಕೇಸರಿ ಜೈನ ದತ್ತಿ ಪ್ರಶಸ್ತಿಗೆ  ಯಾವುದೇ ಜೈನ ಸಾಹಿತ್ಯ ಧರ್ಮಕ್ಕೆ ಸಂಬಂಧಪಟ್ಟ ಕೃತಿಗೆ ಬಹುಮಾನ, ಬಹುಮಾನದ ಮೊತ್ತ ರೂ. ೭,೫೦೦/.  ವಿಜಾಪುರ ಜಿಲ್ಲಾ ಸಮೀರವಾಡಿಯಲ್ಲಿ ನಡೆದ ೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನ ದತ್ತಿ ಪ್ರಶಸ್ತಿಗೆ (ಬಾಗಲಕೋಟೆ ಮತ್ತು ವಿಜಾಪುರ ಜಿಲ್ಲೆಯ ಲೇಖಕ ಲೇಖಕಿಯರಿಗೆ ಮಾತ್ರ ಅವಕಾಶ)  ಸಣ್ಣಕತೆ, ಕಾದಂಬರಿ, ಕಾವ್ಯ, ನಾಟಕ, ಮಕ್ಕಳ ಸಾಹಿತ್ಯ ಹೀಗೆ ಐದು ಪ್ರಕಾರದ ಕೃತಿಗಳನ್ನು ಸ್ಪರ್ಧೆಗೆ ಕಳುಹಿಸಬಹುದು. ಒಂದೊಂದು ಪ್ರಕಾರದ ಪುಸ್ತಕಕ್ಕೆ ತಲಾ ರೂ.೫೦೦/- ಬಹುಮಾನ ನೀಡಲಾಗುವುದು. ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಬಾಗಲಕೋಟೆಯ ಜಿಲ್ಲಾಧ್ಯಕ್ಷರು ನಡೆಸುವರು. ವಸುದೇವ ಭೂಪಾಲಂ ದತ್ತಿ ಪ್ರಶಸ್ತಿಗೆ   ಅತ್ಯುತ್ತಮ ಕಾದಂಬರಿ ಕೃತಿಗೆ ರೂ.೫,೦೦೦/- ಬಹುಮಾನ.   ಸಣ್ಣಕಥಾ ಸಂಕಲನಗಳನ್ನು ಸ್ಪರ್ಧೆಗೆ ಕಳುಹಿಸಬಹುದು ರೂ.೩,೦೦೦/- ಬಹುಮಾನ ನೀಡಲಾಗುವುದು.   ಮಕ್ಕಳ ಸಾಹಿತ್ಯ ಕೃತಿಗೆ ರೂ.೨,೦೦೦/- ಬಹುಮಾನ.  ಅನುವಾದಿತ ಕೃತಿಗಳು, ವೈಚಾರಿಕ ಲೇಖನಗಳು ಕೃತಿಗೆ ರೂ.೨೦೦೦/- ಬಹುಮಾನ ನೀಡಲಾಗುವುದು.  ದಿ|| ಡಿ.ಮಾಣಿಕರಾವ ಸ್ಮರಣಾರ್ಥ ಹಾಸ್ಯ ಸಾಹಿತ್ಯ ದತ್ತಿ ಪ್ರಶಸ್ತಿಗೆ  ಯಾವುದೇ ಪ್ರಕಾರದ ಹಾಸ್ಯ ಸಾಹಿತ್ಯ ಕೃತಿಗೆ ರೂ.೫೦೦೦/- ಬಹುಮಾನ ನೀಡಲಾಗುವುದು. ದಿ|| ಕಾಕೋಳು ಸರೋಜಮ್ಮ ದತ್ತಿ ಪ್ರಶಸ್ತಿಗೆ   ನಾಟಕ ಪ್ರಕಾರಕ್ಕೆ ರೂ.೧೦೦೦/- ಬಹುಮಾನ. ದಿ|| ಡಾ.ಎ.ಎಸ್.ಧರಣೇಂದ್ರಯ್ಯ-ಮನೋವಿಜ್ಞಾನ ದತ್ತಿ ಪ್ರಶಸ್ತಿಗೆ  ಮನೋವಿಜ್ಞಾನ ದತ್ತಿ ಪ್ರಶಸ್ತಿಗೆ ಮನೋವಿಜ್ಞಾನ ಸಾಹಿತ್ಯ ಕೃತಿಗೆ ರೂ.೫,೦೦೦/- ಬಹುಮಾನ.  ನಾ.ಕು. ಗಣೇಶ ದತ್ತಿ ಪ್ರಶಸ್ತಿಗೆ  ಪ್ರಥಮ ಕವನ ಸಂಕಲನಕ್ಕೆ ರೂ.೧,೦೦೦/- ಬಹುಮಾನ ನೀಡಲಾಗುವುದು. 
ಪ್ರತಿ ಪ್ರವೇಶಕ್ಕೆ ತಲಾ ಮೂರು ಪುಸ್ತಕಗಳನ್ನು ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು ೫೬೦-೦೧೮ ಇವರಿಗೆ ಏ.೩೦ ರೊಳಗಾಗಿ ತಲುಪಿಸಬೇಕು, ಪರಿಶೀಲನೆಗೆ ಬಂದ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ. ಒಂದಕ್ಕಿಂತ ಹೆಚ್ಚು ಗ್ರಂಥಗಳು ಅತ್ಯುತ್ತಮವೆಂದು ಪರಿಗಣಿತವಾದರೆ ಬಹುಮಾನ ಹಣವನ್ನು ಹಂಚಿ ವಿತರಿಸುವ ಹಕ್ಕು ಪರಿಷತ್ತಿಗೆ ಇರುತ್ತದೆ, ಪಿ.ಎಚ್.ಡಿ. ಗ್ರಂಥಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ, ಭಾಗವಹಿಸುತ್ತಿರುವ ಸ್ಪರ್ಧೆಯ ದತ್ತಿ ಹೆಸರನ್ನು ಪುಸ್ತಕದ ಮೊದಲ ಒಳಪುಟದಲ್ಲಿ ಸ್ಪಷ್ಟವಾಗಿ ಸೂಚಿಸತಕ್ಕದ್ದು, ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಹೆಸರು, ವಿಳಾಸ, ದೂರವಾಣಿ ಹಾಗೂ ಮೊಬೈಲ್ ಸಂಖ್ಯೆಗಳನ್ನು ನಮೂದಿಸಬೇಕು, ಹೆಚ್ಚಿನ ವಿವರಗಳಿಗೆ ಸ್ವ-ವಿಳಾಸದ ಸ್ಟಾಂಪ್ ಹಚ್ಚಿದ ಲಕೊಟೆ ಇಟ್ಟು ಪತ್ರ ಬರೆಯಬಹುದು ಎಂದು ಕಸಾಪ ರಾಜ್ಯ ಗೌರವ ಕಾರ್ಯದರ್ಶಿಗಳು   ತಿಳಿಸಿದ್ದಾರೆ.

12 Mar 2013

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top