PLEASE LOGIN TO KANNADANET.COM FOR REGULAR NEWS-UPDATES



  ನಗರದ ಸರ್ವೋದಯ ಕೈಗಾರಿಕಾ ತರಬೇತಿ ಕೇಂದ್ರ ದಲ್ಲಿ ಕ್ರಾಂತಿವೀರ ಬ್ರಿಟೀಷರ ಸಿಂಹಸ್ವಪ್ನ ಶಹಿದ್ ಭಗತ್‌ಸಿಂಗ್ ರವರ ೮೨ನೇ ಸ್ಮರಣ ದಿನಾಚಾರಣೆಯನ್ನು ಎ.ಐ.ಡಿ.ವೈ.ಓ ಜಿಲ್ಲಾ ಸಮಿತಿಯಿಂದ ಆಚರಿಸಲಾಯಿತು.
ಭಗತ್‌ಸಿಂಗ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವದರೋಂದಿಗೆ ಕಾರ್ಯಕ್ರಮ ಆರಂಭವಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎ.ಐ.ಡಿ.ವೈ.ಓ ರಾಜ್ಯ ಸಮಿತಿಯ ಉಪಾಧ್ಯಕ್ಷರಾದ ಕಾಂ. ಶರಣಗೌಡ ಗೂಗಲ್ ರವರು ಮುಖ್ಯ ಅಥಿತಿ ಸ್ಥಾನವನ್ನು ನಿರ್ವಯಿಸುವದರ ಜೋತೆಗೆ ಭಗತ್ ಸಿಂಗ್ ರವರ ಹೋರಾಟದ ಜೀವನದ ಹಾದಿಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಕೇವಲ ೨೩ ನೇ ವಯಸ್ಸಿನಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಭಗತ್‌ಸಿಂಗ್ ರಂತಹ ಕ್ರಾಂತಿಕಾರಿಗಳ ಆದರ್ಶ ನಮಗೆ ತುಂಬಾ ಪ್ರಸ್ತುತ. ನಾವು ಇಂದು ಭಾತರದ ಸ್ವಾತಂತ್ರಕ್ಕೆ ಹೋರಾಡಿದ ಹಲವಾರು ಸ್ವಾತಂತ್ರ ಹೋರಾಟಗಾರರನ್ನು ಮರೆತ್ತಿರುವದರಿಂದ ಇಂದು ನಮ್ಮ ಯುವಜನರು & ವಿದ್ಯಾರ್ಥಿಗಳು ಬೇರಿಲ್ಲದವರಾಗಿ ದಿಕ್ಕು ತಪ್ಪುತ್ತಿದ್ದಾರೆ. ಬರೀ ಬ್ರಿಟೀಷರಿಂದ ಸ್ವಾತಂತ್ರ ಪಡೆಯುವದು ಅಷ್ಟೇ ಅಲ್ಲಾ ಮಾನವನಿಂದ ಮಾನವನ ಷೋಷಣೆ ಇಲ್ಲದಂತಹ ಸಮಾಜದ ನಿರ್ಮಾಣದ ಕನಸನ್ನುಕಂಡಿದ್ದ ಭಗತ್‌ಸಿಂಗ್‌ರ ಅಪೂರ್ಣವಾದ ಕೆಲಸವನ್ನು ಪೂರ್ಣಗೊಳಿಸಲು ಸಜ್ಜಾಗಬೇಕೇಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು." 
ಮೋದಲೇ ಮಾತನಾಡಿದ ಎ.ಐ.ಡಿ.ವೈ.ಓ ಜಿಲ್ಲಾ ಸಮಿತಿಯ ಅದ್ಯಕ್ಷರಾದ ಮಾರುತಿ ಎನ್. ಹೊಸಮನಿ ಇಂದಿನ ಅಶ್ಲೀಲ ಸಿನಿಮಾ, ಸಾಹಿತ್ಯ, ಮತ್ತು ರಾಜಕೀಯ ನಾಯಕರ ಅನೈತಿಕತೆ ಭ್ರಷ್ಟಾಚಾರ ವಿರುದ್ದ ಹೋರಾಡಲು ಭಗತ್ ಸಿಂಗ್ ರ ಜೀವನ ಇಂದಿಗೂ ಸ್ಪೂರ್ತಿ. ಅವರ ವಿಚಾರ ಗಳನ್ನು ಇಂದಿನ ವಿದ್ಯಾರ್ಥಿ ಯುವಕರಲ್ಲಿ  ಬೆಳೆಸುವ ಸಲುವಾಗಿ ನಮ್ಮ ಸಂಘಟನೆ ಎ.ಐ.ಡಿ.ವೈ.ಓ (ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಶನ್,) ಸ್ವಾತಂತ್ರ ಹೋರಾಟಗಾರರ ಜೀವನ ಚರಿತ್ರೆಯನ್ನು ಪ್ರಚಾರಮಾಡಿ ಯುವಜನಲ್ಲಿ ಉನ್ನತವಾದ ನೀತಿ, ನೈತಿಕತೆ, ಸಂಸ್ಕೃತಿಯನ್ನು ತುಂಬುವ ಪ್ರಯತ್ನಮಾಡಿತ್ತಿದೆ. ಎಂದು ಹೇಳಿದರು. 
ಕಾರ್ಯಕ್ರಮದ ಮೊದಲಿಗೆ ಭಗತ್‌ಸಿಂಗ್ ರವರಕುರಿತ ಮತ್ತು ದೇಶ ಭಕ್ತಿ ಹಾಡುಗಳನ್ನು  ಶಿವುಕುಮಾರವರು ಮತ್ತು ಕಾಲೇಜಿನ ವಿದ್ಯಾರ್ಥಿಗಳು ಹಾಡಿದರು.  ಅದ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ  ನಿಂಗಪ್ಪ ಗೆದಗೇರಿಯವರು ವಹಿಸಿದ್ದರು. ಮತ್ತು ಇನ್ನೋರ್ವ ಅತಿಥಿಯಾಗಿ ಶ್ರೀ ಕೇದಾರಲಿಂಗೇಶ್ವರ ಐ.ಟಿ.ಐ ಕಾಲೇಜಿನ ಪ್ರಾಚಾರ್ಯರಾದ  ಸಂಗನಗೌಡ ರವರು, ಎ.ಐ.ಡಿ.ವೈ.ಓನ ಕಾರ್ಯದರ್ಶಿ ರಮೇಶ ವಂಕಲಕುಂಟಿ, ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು. ನಿರೂಪಣೆಯನ್ನು ಮಂಜುನಾಥ, ಸ್ವಾಗತವನ್ನು ಸೂರೆಣ್ಣ ರವರರು ಮಾಡಿದರು. ಹಾಗೂ ಎರಡು ಕಾಲೇಜಿನ ವಿದ್ಯಾರ್ಥಿಗಳು ಗಂಭೀರವಾಗಿ ಭಾಗವಹಿಸಿವುದರೋಂದಿಗೆ  ಕಾರ್ಯಕ್ರಮವನ್ನು ಯಶಸ್ವಿಗೋಳಿಸಿದರು.  

Advertisement

0 comments:

Post a Comment

 
Top