PLEASE LOGIN TO KANNADANET.COM FOR REGULAR NEWS-UPDATES



"ವಿಶ್ವ ಕ್ಷಯರೋಗ ದಿನಾಚರಣೆ" ಕಾರ್ಯಕ್ರಮದ ನಡುವಳಿಕೆಗಳು
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ಕೊಪ್ಪಳ. ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಟಿ.ಬಿ.ವಿಭಾಗ ಕೊಪ್ಪಳ ಇವರ ಸಹಯೋಗದೊಂದಿಗೆ ಇಂದು ದಿನಾಂಕ:೨೫/೦೩/೨೦೧೩ ರಂದು "ವಿಶ್ವ ಕ್ಷಯ ರೋಗ ದಿನಾಚರಣೆ"ಯನ್ನು ಆಚರಿಸಲಾಯಿತು. ಸದರಿ ಕಾರ್ಯಕ್ರಮಕ್ಕೆ  ಡಾ|| ಮಹಾದೇವಸ್ವಾಮಿ.ಎಂ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಕೊಪ್ಪಳ ಹಾಗೂ ಡಾ||ಕೆ.ಜಿ.ಕುಲಕರ್ಣಿ ಚೇರಮನ್ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ಕೊಪ್ಪಳ. ಡಾ||ಸಿ.ಎಸ್. ಕರಮುಡಿ ವೈಸ್ ಚೇರಮನ್ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ಕೊಪ್ಪಳ. ಮತ್ತು ಡಾ||ಲೋಕೇಶ್ ಜಿಲ್ಲಾ ಶಸ್ತ್ರ ಚಿಕಿತ್ಸಕರು ಕೊಪ್ಪಳ, ಡಾ||ಪ್ರವೀಣಕುಮಾರ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳು ಕೊಪ್ಪಳ ಹಾಗೂ ಡಾ|| ಶ್ರೀನಿವಾಸ ಹ್ಯಾಟಿ. ಪ್ರಧಾನ ಕಾರ್ಯದರ್ಶಿಗಳು, ಭಾರತೀಯ ರೆಡ್ ಕ್ರಾಸ ಸಂಸ್ಥೆ ಕೊಪ್ಪಳ. ಇವರೆಲ್ಲರೂ ಉಪಸ್ತಿತರಿದ್ದು ಜಾತಾಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಜಾತಾದಲ್ಲಿ ಕೆಲ್ವರಿಚಾಪಲ್ ಸಂಸ್ಥೆಯ ಸದಸ್ಯರು ಮತ್ತು ಸಿಬ್ಬಂಧಿಯವರು ಹಾಗೂ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.
ನಗರದ ಜವಾಹಾರ ರಸ್ತೆ ಮತ್ತು ಹಸನ ರಸ್ತೆಗಳ ಮೂಲಕ ಜಾತಾ ನಡೆಸಲಾಯಿತು. ನಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಜರುಗಿಸಲಾಯಿತು. 

ಭಾರತೀಯ ರೆಡ್ ಕ್ರಾಸ್ ಸಂಸ್ಥೆ  ಜಿಲ್ಲಾ ಘಟಕ ಕೊಪ್ಪಳ. ಹಾಗೂ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದಿಕ್ ಮಹಾವಿದ್ಯಾಲಯ ಕೊಪ್ಪಳ ಇವರ ಸಹಯೋಗದೊಂದಿಗೆ ದಿನಾಂಕ:೨೩/೦೩/೨೦೧೩ ರಂದು "ವಿಶ್ವ ಕ್ಷಯರೋಗ ದಿನಾಚರಣೆ" ಯ ಅಂಗವಾಗಿ SಇಒIಓಂಖ ಔಓ ಖಿUಃಇಖಅUಐಔSIS ಎಂಬ ಕಾರ್ಯಾಗಾರವನ್ನು ಶ್ರೀ ಗವಿಸಿದ್ದೇಶ್ವರ ಆಯುರ್ವೇದಿಕ್ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಯಿತು. ಸದರಿ ಕಾರ್ಯಾಗಾರಕ್ಕೆ  ಡಾ|| ಕೆ.ಬಿ.ಹಿರೇಮಠ್, ವೈಸ್ ಪ್ರಿನ್ಸಿಪಾಲ್ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದಿಕ್ ಮಹಾವಿದ್ಯಾಲಯ ಕೊಪ್ಪಳ ಹಾಗೂ ಡಾ|| ಕೆ.ಜಿ.ಕುಲಕರ್ಣಿ ಚೇರಮನ್ ಭಾರತೀಯ ರೆಡಕ್ರಾಸ ಸಂಸ್ಥೆ ಜಿಲ್ಲಾ ಘಟಕ ಕೊಪ್ಪಳ. ಮತ್ತು ಡಾ|| ಸಿ.ಎಸ್.ಕರಮುಡಿ. ವೈಸ್ ಚೇರಮನ್ ಭಾರತೀಯ ರೆಡಕ್ರಾಸ ಸಂಸ್ಥೆ ಜಿಲ್ಲಾ ಘಟಕ ಕೊಪ್ಪಳ. ಡಾ||ಶ್ರೀನಿವಾಸ ಹ್ಯಾಟಿ. ಪ್ರಧಾನ ಕಾರ್ಯದರ್ಶಿಗಳು, ಭಾರತೀಯ ರೆಡಕ್ರಾಸ ಸಂಸ್ಥೆ ಜಿಲ್ಲಾ ಘಟಕ ಕೊಪ್ಪಳ ಶ್ರೀ ಸುಧೀರ್ ಅವರಾಧಿ ಖಜಾಂಚಿ. ಭಾರತೀಯ ರೆಡಕ್ರಾಸ ಸಂಸ್ಥೆ ಜಿಲ್ಲಾ ಘಟಕ ಕೊಪ್ಪಳ. ಸದಸ್ಯರಾದ ಡಾ|| ಬಿ.ಎಲ್.ಕಲ್ಮಠ್ . ಡಾ|| ಶಿರೂರ ಮಠ ಇವರೆಲ್ಲರೂ ಉಪಸ್ಥಿತರಿದ್ದು, ಡಾ|| ಪ್ರವೀಣಕುಮಾರ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳು ಕೊಪ್ಪಳ ಇವರು ಕ್ಷಯರೋಗದ ಬಗ್ಗೆ ವಿವರವಾಗಿ ತಿಳಿಸಿದರು. ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದಿಕ ಮಹಾವಿದ್ಯಾಲಯ ವಿದ್ಯಾರ್ಥಿಗಳು ಸದರಿ ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

Advertisement

0 comments:

Post a Comment

 
Top