ಕೊಪ್ಪಳ,ಮಾ.೧೨: ಪುಟ್ಟರಾಜ ಗವಾಯಿಗಳೇ ನನ್ನ ಪ್ರೇರಣಾ ಶಕ್ತಿ, ಅವರು ಎಂದು ನಮ್ಮನ್ನೂ ಅಗಲಿಲ್ಲ. ಅವರು ನಮ್ಮಲ್ಲಿ ಚಿರಾಯು ಆಗಿದ್ದಾರೆ ಎಂದು ಸಯ್ಯದ್ ಫೌಂಡೇಶನ್ ಚಾರಿಟೇಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್‌ನ ನಿಯೋಜಿತ ಅಭ್ಯರ್ಥಿ ಕೆ.ಎಂ. ಸಯ್ಯದ್ ಹೇಳಿದರು.
ಅವರು ಸೋಮವಾರ ರಾತ್ರಿ ತಾಲೂಕಿನ ಶಿವಪುರ ಗ್ರಾಮದ ಶ್ರೀ ಮಾರ್ಕಂಡೇಶ್ವರ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಸಿಡಿದೆದ್ದ ಸಿಂಧೂರ ಲಕ್ಷ್ಮಣ ಎಂಬ ಸಾಮಾಜಿಕ ನಾಟಕ ಉದ್ಘಾಟನೆ ನೆರವೇರಿಸಿ ನಂತರ ಪುಟ್ಟರಾಜ ಗವಾಯಿಗಳ ಬಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಮುಂದುವರೆದೂ ಮಾತನಾಡಿ, ನಮ್ಮ ಬದುಕು ಒಂದು ರೀತಿಯ ನಾಟಕವಿದ್ದಂತೆ ಆದೇವರು ನಮಗೂ ಬಣ್ಣಬಳಿದು ಭೂಮಿಗೆ ಬಿಟ್ಟಿದ್ದು ನಾವೇಲ್ಲಾ ಇರುವಷ್ಟು ದಿವಸ ಪ್ರಾಮಾಣಿಕರಾಗಿ ಭಾವೈಕ್ಯತೆ ಹಾಗೂ ದಾನ ಧರ್ಮಗಳಿಂದ ನಿಸ್ವಾರ್ಥ ಸೇವೆ ಮೂಲಕ ಸಾರ್ಥಕ ಬದುಕು ಕಂಡುಕೊಳ್ಳಬೇಕೆಂದರು. ನಾಟಕಗಳನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಹೊಣೆ, ನಾಟಕದಲ್ಲಿನ ಒಳ್ಳೆಯ ದೃಶ್ಯಗಳನ್ನು ಮೈಗೂಡಿಸಿಕೊಂಡು ಕೆಟ್ಟ ಪಾತ್ರಗಳನ್ನು ಇಲ್ಲಿಯೇ ಬಿಟ್ಟು ಹೋಗಬೇಕೆಂದರು. ಇದೇ ವೇಳೆ ಕವಿ, ನಾಟಕಕಾರರಾದ ಎನ್.ಎಂ. ರವಿಕುಮಾರ ಪಂಡಿತ ಪುಟ್ಟರಾಜ ಗವಾಯಿಗಳ ಭಾವಚಿತ್ರಕ್ಕೆ ಜ್ಯೋತಿ ಬೆಳಗಿಸಿ ಮಾತನಾಡಿ, ನಾಟಕ ರಂಗಕ್ಕೆ ಪಂಡಿತ ಪುಟ್ಟರಾಜ ಗವಾಯಿಗಳ ಕೊಡುಗೆ ಅಪಾರ, ನಾಟಕ ರಂಗವು ವಂಶಪಾರಂಪರೆಯಾಗಿರುವುದರಿಂದಲೇ ಇಲ್ಲಿಯವರೆಗೂ ಹರಿದು ಬಂದಿದೆ ಎಂದು ನಾಟಕ ಕ್ಷೇತ್ರದ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷ ಮಂಜುನಾಥ ಹೆಚ್., ಗಂಗಾವತಿಯ ಮಹಾಂತೇಶ, ಶಿವರಾಜ, ಪಂಪನಗೌಡ, ಕರಾವೇ ಅಧ್ಯಕ್ಷ ಹನುಮೇಶ, ಬೀರಪ್ಪ ಶೆಲೂಡಿ, ಅಜೀಜ್, ಸಿದ್ದಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
0 comments:
Post a Comment