ಕೊಪ್ಪಳ,ಮಾ.೦೯: ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಅತ್ಯಗತ್ಯವೆಂದು ಸಯ್ಯದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್‌ನ ನಿಯೋಜಿತ ಅಭ್ಯರ್ಥಿ ಕೆ.ಎಂ. ಸಯ್ಯದ್ ಹೇಳಿದರು.
ಅವರು ಶನಿವಾರ ತಾಲೂಕಿನ ಟಣಕನಕಲ್ ಗ್ರಾಮದ ವಿರೇಶ್ವರಮಠದಲ್ಲಿ ಹಮ್ಮಿಕೊಂಡಿದ್ದ ಧರ್ಮ ಸಂಸ್ಕೃತಿ ಕಾರ್ಯಕ್ರಮದ ಉದ್ಘಾಟನೆ ನೇರವೇರಿಸಿ ಮಾತನಾಡಿದರು.
ಮುಂದುವರೆದೂ ಮಾತನಾಡಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ, ಧರ್ಮ ಸಂಸ್ಕೃತಿಯಿಂದ ಶಿಸ್ತುಬದ್ಧ ನೆಮ್ಮದಿಯ ಜೀವನ ಸಾಧ್ಯ. ಅತ್ಯಲ್ಪ ಜೀವನದಲ್ಲಿ ದಾನ ಧರ್ಮಗಳ ಮೂಲಕ ಸಾರ್ಥಕ ಬದುಕು ಕಂಡುಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಸುರಪುರದ ನಿಷ್ಠೆ ಕಡ್ಲೆಪ್ಪನಮಠದ ಪ್ರಭುಲಿಂಗ ಮಹಾಸ್ವಾಮಿ ಆಶೀರ್ವಚನ ನೀಡಿ, ಕಳೆದ ೧೨ ವರ್ಷಗಳಿಂದ ಸತತವಾಗಿ ವಿರೇಶ್ವರಮಠದಲ್ಲಿ ಧರ್ಮ ಪ್ರಚೋಧನೆಂಯ ಧಾರ್ಮಿಕ ಕಾರ್ಯಗಳು ಅವಿರತವಾಗಿ ನಡೆಯುತ್ತಾ ಬಂದಿವೆ. ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು ಸೌಹಾರ್ದತೆಯ ಸಂಕೇತವಾಗಿದೆ ಎಂದರು. ಇಂತಹ ಸಾಕಷ್ಟು ಕಾರ್ಯಕ್ರಮಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಮಠದಲ್ಲಿ ನಡೆಯಬೇಕಿದೆ ಎಂಬ ಆಶಯವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವೀರೇಶ್ವರಮಠದ ಪೀಠಾಧೀಪತಿ ಕಾಲಜ್ಞಾನ ಬ್ರಹ್ಮ ಶರಣಬಸವ ಮಹಾಸ್ವಾಮಿಗಳ ಪುತ್ರನ ನಾಮಕರಣ ಹಾಗೂ ವೀರಮಹೇಶ್ವರ ವಟುಗಳಿಗೆ ದೀಕ್ಷೆ ನಂತರ ದೇವಿ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಸಾಂಗೋಪವಾಗಿ ನಡೆಸಲಾಯಿತು.
ಇದೇ ವೇಳೆ ಯಲಬುರ್ಗಾ ಶೀಧರ ಮುರಡಿಮಠದ ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳಿಗೆ `ರೇಷ್ಮೆಋಷಿ' ಎಂಬ ಬಿರುದು ನೀಡಿ ಗೌರವಿಸಲಾಯಿತು. ನಂತರ
ವೀರೇಶ್ವರಮಠದ ಪೀಠಾಧೀಪತಿ ಕಾಲಜ್ಞಾನ ಬ್ರಹ್ಮ ಶರಣಬಸವ ಮಹಾಸ್ವಾಮಿಗಳಿಗೆ ಬಿಳಿಜೋಳ, ಅಕ್ಕಿ, ಬಾಳೆಹಣ್ಣು, ಹೆಸರು ಮತ್ತು ನೆಲ್ಲಿನ ತುಲಾಭಾರವನ್ನು ಭಕ್ತರು ನೇರವೇರಿಸಿದರು. ಹಾಗೂ ಮಠಕ್ಕೆ ಭೂದಾನಿಗಳಾದ ಪಿಡ್ಡನಗೌಡ ಕಲ್ಲನಗೌಡ ಪೊ.ಪಾ. ಕುಟುಂಬಕ್ಕೆ ಸನ್ಮಾನಿಸಿ ಸತ್ಕರಿಸಲಾಯಿತು.
ವೀರೇಶ್ವರಮಠದ ಪೀಠಾಧೀಪತಿ ಕಾಲಜ್ಞಾನ ಬ್ರಹ್ಮ ಶರಣಬಸವ ಮಹಾಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರೇಸಿಂದೋಗಿ ಕಪ್ಪತ್ತೇಶ್ವರಮಠದ ಚಿದಾನಂದ ಮಹಾಸ್ವಾಮಿ, ಮೈನಳ್ಳಿ ಮರುಳಸಿದ್ದ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿ ಹಾಗೂ ನಗರಗಡ್ಡಿಮಠ ಸಂಸ್ಥಾನದ ಶಾಂತಲಿಂಗೇಶ್ವರ ಮಹಾಸ್ವಾಮಿಗಳು ನೆರೆದ ಭಕ್ತಾಧಿಗಳನ್ನುದ್ದೇಶಿಸಿ ಆಶೀರ್ವಚನ ನೀಡಿದರು. ಮಹಿಳಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಇಂದಿರಾ ಭಾವಿಕಟ್ಟಿ, ಬಿಜೆಪಿ ಮುಖಂಡ ವಿರುಪಾಕ್ಷಯ್ಯ ಗದುಗಿನಮಠ,ಅಮರಯ್ಯ ಸ್ವಾಮಿ ಹಿರೇಮಠ, ಜಿ.ಟಿ. ಪಂಪಾಪತಿ, ಮಂಜುನಾಥ ಪಾಟೀಲ್, ಹೊಸಪೇಟೆ ಸ್ವತಂತ್ರ ಹೋರಾಟ ಪತ್ರಿಕೆ ಸಂಪಾದಕ ಮನೋಹರ ಸೇರಿದಂತೆ ಅನೇಕ ಮುಖಂಡರು ವಿವಿಧ ಮಹಿಳಾ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
0 comments:
Post a Comment