ನಗರ, ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗದ ಸೂಚನೆಯಂತೆ ಮತದಾನಕ್ಕೆ ನಿಗದಿಪಡಿಸಿರುವ ಮಾ. ೭ ರ ಮುಂಚಿನ ೪೮ ಗಂಟೆಯ ಒಳಗಾಗಿ ಎಲ್ಲ ಬಗೆಯ ಬಹಿರಂಗ ಪ್ರಚಾರ ಅಂತ್ಯಗೊಳಿಸಬೇಕು ಎಂದು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗ ಸೂಚಿಸಿರುವಂತೆ ಮತದಾನಕ್ಕೆ ಮುಂಚಿನ ೪೮ ಗಂಟೆಯ ಒಳಗಾಗಿ ಚುನಾವಣೆಯ ಬಹಿರಂಗ ಪ್ರಚಾರ, ಅಂದರೆ ಸಭೆ, ಸಮಾರಂಭ, ಮೆರವಣಿಗೆ, ಟಿ.ವಿ., ಮುದ್ರಣ ಮಾಧ್ಯಮ, ಶ್ರವಣ, ಎಲೆಕ್ಟ್ರಾನಿಕ್ ಇತ್ಯಾದಿ ಮಾಧ್ಯಮಗಳ ಮೂಲಕ ಯಾವುದೇ ಪ್ರಚಾರ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈಗಾಗಲೆ ಅಭ್ಯರ್ಥಿಗಳ ಕೈಪಿಡಿಯಲ್ಲಿ ಇದನ್ನು ಸ್ಪಷ್ಟವಾಗಿ ತಿಳಿಸಲಾಗಿದ್ದು, ಕೈಪಿಡಿಗಳನ್ನು ಅಭ್ಯರ್ಥಿಗಳಿಗೆ ಒದಗಿಸಲಾಗಿದೆ.
ರಾಜಕೀಯ ಪಕ್ಷಗಳ ಮುಖಂಡರು, ತಾರಾ ಪ್ರಚಾರಕರು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಿಂದ, ಅಭ್ಯರ್ಥಿಗಳ ಪರ ಮತ ಯಾಚಿಸುವ ಆ ವಾರ್ಡಿನ ಮತದಾರರಲ್ಲದ ಏಜೆಂಟರು, ಮತ್ತು ಆ ವಾರ್ಡಿನ ಮತದಾರರಲ್ಲದವರು, ಮಾ. ೫ ರ ಬೆಳಿಗ್ಗೆ ೭ ಗಂಟೆಯ ಒಳಗಾಗಿ ವಾರ್ಡ್ ವ್ಯಾಪ್ತಿಯನ್ನು ಬಿಡತಕ್ಕದ್ದು, ಸರ್ವರೂ ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ, ಚುನಾವಣೆಗಳನ್ನು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತವಾಗಿ ನಡೆಸಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ತಿಳಿಸಿದ್ದಾರೆ.
0 comments:
Post a Comment