ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರ ಹಾಗೂ ಮಹಿಳೆಯರ ಮತ್ತು ಮಕ್ಕಳ ಅಭಿವೃದಿ ಇಲಾಖೆ ಕೊಪ್ಪಳ ಹಾಗೂ ಸಂದೇಶ ಗ್ರಾಮೀಣಾಭಿವೃದ್ದಿ ಸಂಸ್ಥೆ ಕೊಪ್ಪಳ ಹಾಗೂ ಜಿಲ್ಲಾ ವಕೀಲರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಾನೂನು ಕಾರ್ಯಗಾರ ಹಾಗು ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟಲು ಬೃಹತ್ ಆಂದೋಲನ ಕಾರ್ಯಕ್ರಮ ದಿನಾಂಕ ೦೮-೦೩-೨೦೧೩ ರಂದು ಜಿಲ್ಲಾ ನ್ಯಾಯಾಲಯದ ಸಾಕ್ಷಿದಾರ ಮೊಗಸಾಲೆ ಕಟ್ಟಡ ಕೊಪ್ಪಳ.
ಕಾರ್ಯಕ್ರಮದ ಉದ್ಘಾಟಣೆಯನ್ನು ಸನ್ಮಾನ್ಯ ಶ್ರೀಕಾಂತ ಬಬಲಾದಿ, ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರು ಹಾಗೂ ಅಧ್ಯಕ್ಷರು ಜಿಲ್ಲಾ ಕಾನೂನು ಸೆವಾ ಪ್ರಾಧಿಕಾರ ಕೊಪ್ಪಳ ಇವರು ಮಾತನಾಡುತ್ತಾ, ಭಾರತದೇಶದಲ್ಲಿ ಮಹಿಳೇಯರ ಮೇಲಿನ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಅತ್ಯಾಚಾರ ಪ್ರಕರಣಗಳು ನಡೆಯಲಾರದಂತೆ ತಡೆಗಟ್ಟಲು ಶಿಕ್ಷಣ ಪಡೆದು ಕನೂನಿನ ಅರಿವು ಪಡೆದುಕೊಂಡು ಈ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಹಲವಾರು ಮಹಾನಿಯರು ಕೂಡಾ ದುಡಿದಿರುವುದು ಸಂಗತಿ. ತಾವೆಲ್ಲರೂ ಸಂಗಟಿತ ಹೋರಾಟದ ಮೂಲಕ ಇಂತಹ ಅನಿಷ್ಟ ಪದ್ದತಿ ಹೋಗಲಾಡಿಸಲು ಕರೆ ಕೊಟ್ಟರು.
ಮುಖ್ಯ ಅತಿಥಿಗಳಾಗಿ ಶಿವರಾಮ. ಕೆ. ಸಿವಿಲ್ ಜಡ್ಜ, ಹಾಗೂ ಸದಸ್ಯ ಕಾರ್ಯದರ್ಶಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕೊಪ್ಪಳ ಅವರು ಮಾತನಾಡುತ್ತಾ, ಸರಕಾರ ಹಾಗೂ ಸಂಘಸಂಸ್ಥೆಗಳು ಭಾಲ್ಯ ವಿವಾಹ ತಡೆಗಟ್ಟಲು ಕಂಕಣ ಬದ್ದರಾಗಿ ಗ್ರಾಮ ಮಟ್ಟದಲ್ಲಿ ಜಾಗೃತ ಗೊಳಿಸಬೆಕೆಂದು ತಿಳಿಸಿದರು.
ಶ್ರೀಮತಿ ಕಾವೇರಿ ಸಿವಿಲ್ ಜಡ್ಜ, ಜೆ.ಎಂ.ಎಫ್.ಸಿ ಕೊಪ್ಪಳ ರವರು ಮಾತನಾಡುತ್ತಾ ಸಂಘರ್ಷ ಇಲ್ಲದ ಸಮಾಜ ಪರಿವರ್ತನೆ ಯಾಗಲು ಸಾಧ್ಯಾಗುವದಿಲ್ಲ. ಮಹಿಳೆಯರು ಶಿಕ್ಷಣದಿಂದ ಮುಂದೆ ಬರಲು ಕರೆಕೊಟ್ಟರು.
ಜಿಲ್ಲಾಧಿಕಾರಿಗಳಾದ ತುಳಸಿ ಮದ್ದಿನೇನಿ ರವರು ಮಾತನಾಡಿ, ಮಹಿಳೆಯರು ಶಿಕ್ಷಣ ಸಂಘಟನೆ ಹೋರಾಟದ ಮೂಲಕ ತಮ್ಮ ಮೂಲಭೂತ ಕರ್ತವ್ಯಗಳನ್ನು ಅರ್ಥಮಾಡಿಕೊಂಡು ಭಾಲ್ಯ ವಿವಾಹ ವರದಕ್ಷಿಣೆ ಪಿಡುಗು, ಮಹಿಳೆಯರ ಆಸ್ಥಿ ಹಕ್ಕು, ಇತ್ಯಾದಿ ವಿಷಯಗಳ ಕುರಿತು ಭಾರತ ಸಂವಿದಾನದಲ್ಲಿ ಅಡಕವಾಗಿರುವ ಸಮಾನತೆ ಹಕ್ಕು, ಮಹಿಳೆಯರಿಗೆ ಬ್ಯಾಂಕು ಮಾಡುವದು ಬೇಡ ಅವರಿಗೆ ಎಲ್ಲಾ ಬ್ಯಾಮಕುಗಳಲ್ಲಿ ಶೇ ೪೦% ಸಾಲ ಸೌಲಭ್ಯ ಸಿಕ್ಕಾಗ ಈ ಕಾರ್ಯಕ್ರಮ ಯಶಸ್ವಿಯಾಗುವದು ಎಂದರು, ಈ ಅಂತರಷ್ಟ್ರೀಯ ಮಹಿಳಾದಿನಾಚರಣೆ ಈ ಜಿಲ್ಲೆಯಲ್ಲಿ ಮಹಿಳೆಯರು ಕೂಡಾ ಎಲ್ಲಾ ರಂಗದಲ್ಲೂ ಇರುವುದು ಸಂತೋಷದ ವಿಷಯ ಪ್ರತಿಯೊಬ್ಬ ಮಹಿಳೆಯರು ಕೂಡಾ ಆರ್ಥಿಕವಾಗಿ ಸಮಾನರಾಗುತ್ತಾರೆ ಎಂದರು.
ಈ ಸಂದರ್ಭದಲ್ಲಿ ವಿ. ದೊರೆಸ್ವಾಮಿ, ಉಪನಿರ್ದೆಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಕೊಪ್ಪಳ, ಎ.ವಿ.ಕಣವಿ, ಜಿಲ್ಲಾಧ್ಯಕ್ಷರು ಕೊಪ್ಪಳ, ವಿ.ಎಂ.ಬೂಸನೂಮಠ, ಶಾಂತಶ್ರೀ, ಕಾಳಮ್ಮ ಪತ್ತಾರ, ಶಿವಲಿಲಾ ಹೊನ್ನೂರ, ಸಾವಿತ್ರಿ ಮುಜುಮದಾರ, ಎಂ ಮುನಿರಾಜು, ಹೆಚ್.ಪಿ. ಜಗದೀಶ, ನಾಗನಗೌಡ, ಹೆಚ್,ಎಸ್, ಹೊನ್ನುಂಚಿ, ಬಿ.ಟಿ. ಬೊಗೇಶ, ಇಲಾಖೆಯ ಎಲ್ಲಾ ಸಿಬ್ಬಂದಿವರ್ಗ, ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘದ ಪ್ರತಿನಿಧಿಗಳು, ಹಾಗೂ ಅಂಗನವಾಡಿ ಮೆಲ್ವಿಚಾರಕಿಯರು, ಮಕ್ಕಳ ರಕ್ಷಣಾ ಅಧಿಕಾರಿಗಳು, ಹಾಗೂ ಸಿಬ್ಬಂದಿ, ಇನ್ನು ಮುಂತಾದವರು ಉಪಸ್ಥಿತರಿದ್ದರು.
0 comments:
Post a Comment