PLEASE LOGIN TO KANNADANET.COM FOR REGULAR NEWS-UPDATES


  ರಾಜ್ಯ ಚುನಾವಣೆ ಆಯೋಗದಿಂದ ಮಾ.೦೭ ರಂದು ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಯಲ್ಲಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಶೇಷ ದಳಗಳನ್ನು ರಚಿಸಲಾಗಿದೆ ಎಂದು ಕೊಪ್ಪಳ ಜಿಲ್ಲೆಯ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.
ಸಂಗಮೇಶ ಮುರನಾಳ ಅಬಕಾರಿ ನಿರೀಕ್ಷಕರು, ಉಪವಿಭಾಗ (ನೋಡಲ್ ಅಧಿಕಾರಿ) ಮೊ.೯೪೪೯೫೯೭೧೭೫ ಇವರನ್ನು ಕುಷ್ಟಗಿ ಮತ್ತು ಗಂಗಾವತಿ ಕಾರ್ಯವ್ಯಾಪ್ತಿಗೆ ವಹಿಸಲಾಗಿದೆ. ಕೊಪ್ಪಳ ಮತ್ತು ಯಲಬುರ್ಗಾಕ್ಕೆ ಮಂಜುನಾಥ ಮಾಲಿಪಾಟೀಲ್ ಅಬಕಾರಿ ನಿರೀಕ್ಷಕರು, ಜಿಲ್ಲಾ ವಿಚಕ್ಷಣ ದಳ (ನೋಡಲ್ ಅಧಿಕಾರಿ) ಮೊ.೯೪೪೯೫೯೭೧೭೬, ಯಮನೂರಸಾಬ ಹೊಸಮನಿ ಅಬಕಾರಿ ನಿರೀಕ್ಷಕರು, ಕೊಪ್ಪಳ (ತಾಲೂಕ ಪ್ರಹಾರದಳ) ಮೊ.೯೪೪೮೭೫೭೯೨೩ ಇವರನ್ನು ಕೊಪ್ಪಳಕ್ಕೆ ನಿಯೋಜಿಸಲಾಗಿದೆ. ರಾಮನಗೌಡ ಮುದಿಗೌಡರ ಅಬಕಾರಿ ನಿರೀಕ್ಷಕರು, ಕುಷ್ಟಗಿ (ತಾಲೂಕ ಪ್ರಹಾರದಳ) ಮೊ.೯೪೪೯೨೬೨೩೦೪ ಇವರನ್ನು ಕುಷ್ಟಗಿಗೆ ನಿಯೋಜಿಸಲಾಗಿದೆ. ವಾಜೇಂದ್ರಾಚಾರ್ಯ ಅಬಕಾರಿ ನಿರೀಕ್ಷಕರು, ಗಂಗಾವತಿ (ತಾಲೂಕ ಪ್ರಹಾರದಳ) ಮೊ.೯೪೮೧೦೮೫೩೦೭ ಇವರನ್ನು ಗಂಗಾವತಿಗೆ ನಿಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಟ್ಟದ ಅಬಕಾರಿ ಉಪ ಅಧೀಕ್ಷಕರ ಕಛೇರಿ, ಉಪ ವಿಭಾಗ ಬಿ.ಟಿ.ಪಾಟೀಲ್ ನಗರ ಕೊಪ್ಪಳ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ : ೦೮೫೩೯-೨೨೧೬೧೦ ಇವರನ್ನು ಸಂಪರ್ಕಿಸಬಹುದಾಗಿದೆ.

Advertisement

0 comments:

Post a Comment

 
Top