ಕೊಪ್ಪಳ ನಗರದ ಶ್ರೀ ಗವಿಸಿದ್ಧೇಶ್ವರ ಸಂಯುಕ್ತ ಪ್ರೌಢ ಶಾಲೆಯ ಶಾಲಾ ವಾರ್ಷಿಕೋತ್ಸವದ ನಿಮಿತ್ಯವಾಗಿ ಇತ್ತೀಚಿಗೆ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಬಸವರಾಜ ರಾಜೂರು ಉದ್ದಿಮೆದಾರರು ಕೊಪ್ಪಳ ಇವರ ಅಮೃತ ಹಸ್ತದಿಂದ ಉದ್ಘಾಟಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಸವರಾಜಯ್ಯ ಅವರು ಅತಿಥಿಗಳಾಗಿ ಆಗಮಿಸಿದ್ದರು, ಚಿತ್ರಕಲಾಶಿಕ್ಷಕ ಎಂ.ಎಂ.ಕೌದಿ ಉಸ್ತೂವಾರಿ ವಹಿಸಿದ್ದರು. ಮುಖ್ಯೋಪಾಧ್ಯಾಯರಾದ ಎಸ್.ಸಿ.ಹಿರೇಮಠ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಇತಿಹಾಸ ವಸ್ತು ಪ್ರದರ್ಶನವನ್ನು ಕೂಡಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಏರ್ಪಡಿಸಲಾಗಿತ್ತು. ಶಿಕ್ಷಕ ಜಿ.ವಿ.ಕೊಪ್ಪಳ, ನಾಗರಾಜ ಬಿ. ಶ್ರೀಮತಿ ಕವಿತಾ ಮನು, ವೈ.ಕೆ.ಡೇರಿಮನಿ, ಇವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ಇತಿಹಾಸಕ್ಕೆ ಸಂಬಂಧಪಟ್ಟ ಭೂಪಟ, ರಾಜ ಮಹಾರಾಜರ ಚಿತ್ರ, ದೇಗುಲಗಳ ಮಾದರಿ, ದೇಶ-ವಿದೇಶಗಳ ನಾಣ್ಯ, ನೋಟುಗಳು, ಐತಿಹಾಸಿಕ ವಸ್ತುಗಳ ಸಂಗ್ರಹ ಕುರಿತು ಪ್ರದರ್ಶನ ಏರ್ಪಡಿಸಲಾಗಿತ್ತು. ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಸವರಾಜಯ್ಯ ಆಗಮಿಸಿಮಾತನಾಡುತ್ತಾ ಮಕ್ಕಳಲ್ಲಿ ಸೃಜನಶೀಲತೆ ಸಂಗ್ರಹ ಮನೋಭಾವ ಗುರುಗಳ ಮಾರ್ಗದರ್ಶನವಿದ್ದರೆ ಇತಿಹಾಸದಲ್ಲಿನ ಅಪರೂಪದ ವಸ್ತುಗಳ ಅದ್ಭುತ ಸಂಗ್ರಹ ಮಾಡಬಹುದು ಇದು ಇತರರಿಗೆ ಮಾರ್ಗದರ್ಶನವಾಗಲಿ ಎಂದು ಉದ್ಘಾಟಿಸಿ ಮಾತನಾಡಿದರು.
ಎಸ್.ಸಿ.ಹಿರೇಮಠ, ಮುಖ್ಯೋಪಾಧ್ಯಾಯರು, ಉಪಸ್ಥಿತರಿದ್ದರು. ಎನ್.ಹೆಚ್.ಪಾಟೀಲ ಶಿಕ್ಷಕರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮರಿಶಾಂತವೀರ ಶೆಟ್ಟರ ವಂದಿಸಿದರು ಹಾಗೂ ಎಂ.ಎನ್.ಕಮ್ಮಾರ ನಿರೂಪಿಸಿದರು.s
0 comments:
Post a Comment