PLEASE LOGIN TO KANNADANET.COM FOR REGULAR NEWS-UPDATES


ನಗರ ಆಶ್ರಯ ವಸತಿ ಯೋಜನೆ : 
ಕೊಪ್ಪಳ ಫೆ. ೦೭ :  ಆಶ್ರಯ ವಸತಿ ಯೋಜನೆಯಡಿಯಲ್ಲಿನ ನನ್ನ ಮನೆ ನನ್ನ ಸ್ವತ್ತು ಕಾರ್ಯಕ್ರಮವನ್ನು ಮಾರ್ಚ್ ೩೧ ರವರೆಗೆ ವಿಸ್ತರಿಸಲಾಗಿದೆ. ಸಾಲ ವಸೂಲಾತಿ ಹೊಣೆಯನ್ನು ಟೋಟಲ್ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಏಜೆನ್ಸಿಗೆ ವಹಿಸಲಾಗಿದ್ದು, ಈ ಏಜೆನ್ಸಿಯವರು ಬರೆದುಕೊಡುವ ಚಲನ್ ಮೂಲಕ, ಫಲಾನುಭವಿಗಳು ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ಕೊಪ್ಪಳ ನಗರಸಭೆ ಪೌರಾಯುಕ್ತೆ ಬಿ.ಎಂ. ಅಶ್ವಿನಿ ಅವರು ತಿಳಿಸಿದ್ದಾರೆ.
  ಆಶ್ರಯ ವಸತಿ ಯೋಜನೆಯಡಿ ನನ್ನ ಮನೆ ನನ್ನ ಸ್ವತ್ತು ಕಾರ್ಯಕ್ರಮದಲ್ಲಿ ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮ, ಬೆಂಗಳೂರು ಇವರು ಸಾಲ ವಸೂಲಾತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಟೋಟಲ್ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಏಜೆನ್ಸಿಗೆ ವಹಿಸಲಾಗಿದೆ.  ಈ ಏಜೆನ್ಸಿಯಿಂದ ನಿಯುಕ್ತಿಗೊಂಡ ಅಧಿಕೃತ ವ್ಯಕ್ತಿಗಳು ಮನೆ-ಮನೆಗೆ ತೆರಳಿ ಯೋಜನೆಯ ಮಾಹಿತಿ ನೀಡಿ, ಫಲಾನುಭವಿಗಳ ಮನವೊಲಿಸಿ ಸಾಲ ವಸೂಲಾತಿ ಮಾಡುತ್ತಾರೆ.  ಏಜೆನ್ಸಿಗಳು ಫಲಾನುಭವಿಗಳಿಮದ ಸಾಲ ವಸೂಲಾತಿಯನ್ನು ನಗದಾಗಿ ಪಡೆಯದೆ, ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲು ಚಲನ್ ಬರೆದುಕೊಡುವರು.  ಕೊಪ್ಪಳ ನಗರಸಭೆ ವ್ಯಾಪ್ತಿಗೆ ಏಜೆನ್ಸಿಯಿಂದ ಜಿಲ್ಲಾ ಸಂಯೋಜಕರಾಗಿ ಮಿಲಿಂದಕುಮಾರ್- ೯೭೪೦೭೪೦೭೨೪ ಅವರನ್ನು ನಿಯೋಜಿಸಿದ್ದು, ಆಕ್ಸಿಸ್ ಬ್ಯಾಂಕ್ ಖಾತೆ ಸಂ:೯೧೧೦೧೦೦೬೩೮೨೭೯೩೦, ಹಾಗೂ ಐಡಿಬಿಐ ಬ್ಯಾಂಕ್ ಖಾತೆ ಸಂಖ್ಯೆ- ೫೫೧೧೦೪೦೦೦೦೭೦೫೩೧ ಆಗಿರುತ್ತದೆ.  ಆದ್ದರಿಂದ ಯಾವುದೇ ಆಶ್ರಯ ಫಲಾನುಭವಿಗಳು ನಗದಾಗಿ ಹಣವನ್ನು ಯಾರಿಗೂ ನೀಡದೆ, ಮೇಲ್ಕಂಡ ಬ್ಯಾಂಕ್ ಖಾತೆಗೆ ಹಣ ಜಮಾ ಆದ ಬಗ್ಗೆ ದೃಢೀಕರಿಸಿಕೊಳ್ಳಬೇಕು.  ಈ ಖಾತೆಗಳು ಆನ್‌ಲೈನ್ ಇದ್ದು, ಯಾವುದೇ ಭಾಗದಿಂದ ಹಣ ಜಮಾ ಮಾಡಬಹುದಾಗಿದೆ.  ಮಾರ್ಚ್ ೩೧ ರ ಒಳಗೆ ಸಾಲ ಮರುಪಾವತಿ ಮಾಡಿದವರಿಗೆ ಬಡ್ಡಿ ವಿನಾಯಿತಿ ನೀಡಲಾಗಿದ್ದು, ಮನೆಯ ಸಾಲದ ಮೊತ್ತವನ್ನು ಶೀಘ್ರವಾಗಿ ಭರಿಸಲು ಫಲಾನುಭವಿಗಳು ಸಹಕರಿಸಬೇಕು.  ಅನಗತ್ಯವಾಗಿ ಬೇರೆ ಯಾವುದೇ ವ್ಯಕ್ತಿಗಳು ನಗದಾಗಿ ಹಣ ಪಡೆಯಲು ಅಥವಾ ಸುಳ್ಳು ಮಾಹಿತಿ ನೀಡಿದಲ್ಲಿ ಅಥವಾ ಅನುಮಾನ ಕಂಡುಬಂದಲ್ಲಿ ಕೊಪ್ಪಳ ನಗರಸಭೆಗೆ ಅಥವಾ ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ.  ಹೆಚ್ಚಿನ ಮಾಹಿತಿಗೆ ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮ, ಬೆಂಗಳೂರು: ೦೮೦-೨೩೧೧೮೮೮೮, ಟೋಟಲ್ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್: ೦೮೦-೨೬೬೧೬೦೫೩, ೯೭೪೦೭೨೨೬೯೯, ಮಿಲಿಂದಕುಮಾರ್, ಜಿಲ್ಲಾ ಸಂಯೋಜಕ, ಬಿ.ಟಿ. ಪಾಟೀಲ ನಗರ, ೧ನೇ ಕ್ರಾಸ್, ಕೊಪ್ಪಳ- ೯೭೪೦೭೪೦೭೨೪ ಇವರನ್ನು ಸಂಪರ್ಕಿಸಬಹುದಾಗಿದೆ  

Advertisement

0 comments:

Post a Comment

 
Top