ನಗರ ಸ್ಥಳೀಯ ಸಂಸ್ಥೆ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಈಗಾಗಲೆ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗಿದ್ದು, ನೀತಿ ಸಂಹಿತೆಯ ಪಾಲನೆ ಹಾಗೂ ಉಲ್ಲಂಘನೆಯ ನಿಗಾ ವಹಿಸಲು ಎಂಸಿಸಿ ತಂಡ ರಚಿಸಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಆದೇಶ ಹೊರಡಿಸಿದ್ದಾರೆ.
ಪ್ರತಿ ವಾರ್ಡ್‌ಗೆ ಒಂದು ಎಂ.ಸಿ.ಸಿ. ತಂಡವನ್ನು ರಚಿಸಲಾಗಿದ್ದು, ತಾಲೂಕು ಮಟ್ಟದ ಅಧಿಕಾರಿಗಳು ಎಂ.ಸಿ.ಸಿ. ತಂಡದ ಮುಖ್ಯಸ್ಥರಾಗಿದ್ದರೆ, ಇವರೊಂದಿಗೆ ಇಬ್ಬರು ಸಿಬ್ಬಂದಿ ಹಾಗೂ ಓರ್ವ ಪೊಲೀಸ್ ಪೇದೆ ಕಾರ್ಯ ನಿರ್ವಹಿಸುವರು.
ಕೊಪ್ಪಳ ನಗರಸಭೆ: ವಾರ್ಡ್ ನಂ. ೦೧ ರಿಂದ ೦೬ ರವರೆಗಿನ ವ್ಯಾಪ್ತಿಯ ನಿಗಾ ವಹಿಸಲು ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಎಂಸಿಸಿ ತಂಡದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ವಾರ್ಡ್ ನಂ. ೦೭ ರಿಂದ ೧೨- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಕೊಪ್ಪಳ. ವಾರ್ಡ್ ನಂ. ೧೩ ರಿಂದ ೧೮- ಕಾರ್ಯದರ್ಶಿಗಳು, ಎಪಿಎಂಸಿ, ಕೊಪ್ಪಳ. ವಾರ್ಡ್ ನಂ. ೧೯ ರಿಂದ ೨೪- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಸಣ್ಣ ನೀರಾವರಿ ಉಪವಿಭಾಗ, ಕೊಪ್ಪಳ. ವಾರ್ಡ್ ನಂ. ೨೫ ರಿಂದ ೩೧- ಸಹಾಯಕ ನಿರ್ದೇಶಕರು, ಭೂಸೇನಾ ನಿಗಮ, ಕೊಪ್ಪಳ.
ಗಂಗಾವತಿ ನಗರಸಭೆ : ವಾರ್ಡ್ ನಂ. ೦೧ ರಿಂದ ೦೬- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ನಗರಸಭೆ, ಗಂಗಾವತಿ. ವಾರ್ಡ್ ನಂ. ೦೭ ರಿಂದ ೧೨- ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಗಂಗಾವತಿ. ವಾರ್ಡ್ ನಂ. ೧೩ ರಿಂದ ೧೮- ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕರು, ಗಂಗಾವತಿ. ವಾರ್ಡ್ ನಂ. ೧೯ ರಿಂದ ೨೪- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಜಿ.ಪಂ.ಇಂ. ಉಪವಿಭಾಗ, ಗಂಗಾವತಿ. ವಾರ್ಡ್ ನಂ. ೨೫ ರಿಂದ ೩೧- ಸಹಾಯಕ ನಿರ್ದೇಶಕರು, ಪಶುಸಂಗೋಪನಾ ಇಲಾಖೆ, ಗಂಗಾವತಿ.
ಕುಷ್ಟಗಿ ಪುರಸಭೆ : ವಾರ್ಡ್ ನಂ. ೧ ರಿಂದ ೧೨- ಕಾರ್ಯನಿರ್ವಾಹಕ ಅಧಿಕಾರಿಗಳು, ತಾ.ಪಂ., ಕುಷ್ಟಗಿ. ವಾರ್ಡ್ ನಂ. ೧೩ ರಿಂದ ೨೩- ಕಾರ್ಯ ನಿರ್ವಾಹಕ ಅಭಿಯಂತರರು, ಜಿ.ಪಂ.ಇಂ. ಉಪವಿಭಾಗ, ಕುಷ್ಟಗಿ.
ಯಲಬುರ್ಗಾ ಪಟ್ಟಣ ಪಂಚಾಯತಿ : ವಾರ್ಡ್ ನಂ. ೦೧ ರಿಂದ ೧೧ ರವರೆಗಿನ ವ್ಯಾಪ್ತಿಗೆ ಸಹಾಯಕ ಕೃಷಿ ನಿರ್ದೇಶಕರು, ಯಲಬುರ್ಗಾ ಇವರನ್ನು ಎಂ.ಸಿ.ಸಿ. (ಚುನಾವಣಾ ನೀತಿ ಸಂಹಿತೆ ನಿಗಾ ತಂಡ) ತಂಡದ ಮುಖ್ಯಸ್ಥರನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಆದೇಶದಲ್ಲಿ ತಿಳಿಸಿದ್ದಾರೆ.
0 comments:
Post a Comment