ಕೊಪ್ಪಳ, ೨೨ - ನಗರದ ಲಯನ್ಸ್ ಕ್ಲಬ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ನಾಳೆಯಿಂದ ೩ ದಿನಗಳವರೆಗೆ ನಡೆಯುವ ಫೆಬ್ರುವರಿ ತಿಂಗಳ ಕಿರುಪರೀಕ್ಷೆಯಲ್ಲಿ ಪರೀಕ್ಷಾ ಮೇಲ್ವಿಚಾರಕರಿಲ್ಲದೇ, ವಿಶೇಷ, ವಿಶಿಷ್ಟ ರೀತಿಯಲ್ಲಿ ಕಿರುಪರೀಕ್ಷೆ ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಧನಾತ್ಮಕ ವ್ಯಕ್ತಿತ್ವ ನಿರ್ಮಾಣ ಮಾಡುವುದಕ್ಕಾಗಿ ಪ್ರಯತ್ನಪೂರ್ವಕವಾಗಿ ಈ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಮಕ್ಕಳಲ್ಲಿ ಧನಾತ್ಮಕ ಜಾಗೃತಾವಸ್ಥೆಯ ಜ್ಞಾನ ತುಂಬುವ ಪ್ರಕ್ರಿಯೆ, ಸ್ವ-ಚಿಂತನೆ, ಸ್ವ-ವಿಮರ್ಶೆ, ಅಂತರಾವಲೋಕನದ ಜಾಗೃತಾವಸ್ಥೆಯ ಬೆಳವಣಿಗೆ ಮತ್ತು ವೃದ್ಧಿಗಾಗಿ, ಮಕ್ಕಳನ್ನು ಭವಿಷ್ಯದ ದಕ್ಷ ಮತ್ತು ಪ್ರಾಮಾಣಿಕ ನಾಗರಿಕನ್ನಾಗಿ ನಿರ್ಮಿಸಲಿಕ್ಕೆ, ಅವರಿಗೇ ಸ್ವಾತಂತ್ರ್ಯವನ್ನು ಒದಗಿಸಿ, ಆ ಮೂಲಕ ಜವಾಬ್ದಾರಿಯ ಪರಿಕಲ್ಪನೆಯನ್ನು ಒದಗಿಸುವ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಥಮ ಮತ್ತು ಮಾದರಿ ಎನ್ನಬಹುದಾದ ಹೊಸ ಒಂದು ಪ್ರಯತ್ನವನ್ನು ಮಾಡಲಾಗುವುದು. ಇದರ ಫಲಿತಾಂಶದ ಆಧಾರದಲ್ಲಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಯೋಜನೆಗಳೊಂದಿಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಬಹುದಾದ ಧನಾತ್ಮಕ ಚಿಂತನೆಯನ್ನು ಮಕ್ಕಳಿಗೆ ನೀಡುವ ಉದ್ಧೇಶ ಹೊಂದಿದ್ದು, ಈ ಕುರಿತು ಪಾಲಕರಿಂದಲೂ ಅಭಿಪ್ರಾಯ ಕೋರಲಾಗಿದೆ ಎಂದು ಶಾಲಾ ಪ್ರಾಚಾರ್ಯ ಎ. ಧನಂಜಯನ್ ತಿಳಿಸಿದ್ದಾರೆ.
Home
»
»Unlabelled
» ಪರಿಕ್ಷಾ ಮೇಲ್ವಿಚಾರಕರಿಲ್ಲದೇ ಫೆಬ್ರುವರಿ ತಿಂಗಳ ಕಿರುಪರೀಕ್ಷೆ !
Subscribe to:
Post Comments (Atom)
0 comments:
Post a Comment