ಫೆ. ೨೦-೨೧ ರಂದು ಜೆಸಿಟಿಯು ಸಮಿತಿ ಕರೆ ನೀಡಿದ ದೇಶವ್ಯಾಪಿ ೪೮ ಗಂಟೆಗಳ ಮುಷ್ಕರಕ್ಕೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾರ್ಮಿಕ ಸಂಘಗಳ ಜಂಟಿ ಸಮಿತಿ(ಜೆಸಿಟಿಯು-ಕರ್ನಾಟಕ) ಕರೆಯಿಂದಾಗಿ ಗಂಗಾವತಿಯಲ್ಲಿ ಫೆ.೨೦ರಂದು ಸಿಪಿಐ(ಎಂ.ಎಲ್) ಅಂಗ ಸಂಘಟನೆಗಳು ಮತ್ತು ಆರ್‌ಟಿಸಿ ನಿಗಮದ ನೌಕರರು ಜಂಟಿಯಾಗಿ ರಾಷ್ಟ್ರೀಯ ಮತ್ತು ಸ್ಥಳೀಯ ಸಮಸ್ಯೆಗಳನ್ನು ಇಟ್ಟಕೊಂಡು ಬೆಳಿಗ್ಗೆ ೧೧.೦೦ ಗಂಟೆಗೆ ನಗರದ ಆರ್‌ಟಿಸಿ ಡಿಪೋದಿಂದ ಶ್ರೀ ಕೃಷ್ಣ ದೇವರಾಯ ವೃತ್ತದವರೆಗೆ ಬೈಕ್ ರ್‍ಯಾಲಿಯ ಮೂಲಕ ತೆರಳಿ ತಶೀಲ್ದಾರರಿಗೆ ಮನವಿ ಸಲ್ಲಿಸಿದರು. ಈ ರ್‍ಯಾಲಿಯಲ್ಲಿ ಎಐಸಿಸಿಟಿಯುನ ರಾಜ್ಯಾಧ್ಯಕ್ಷ ಜೆ.ಭಾರದ್ವಾಜ್, ಬಸನಗೌಡ, ಟಿ. ರಾಘವೇಂದ್ರ, ಆರ್‌ಟಿಸಿ ಬಾಷುಮಿಯಾ, ಪ್ರಕಾಶ, ಮಾರುತಿ ಮತ್ತಿತರರು ಭಾಗವಹಿಸಿದ್ದರು.
ಫೆ. ೨೧ರಂದು ನಗರದ ರಾಣಾ ಪ್ರತಾಪ್‌ಸಿಂಗ್ ವೃತ್ತದಿಂದ ಬೃಹತ್ ರ್‍ಯಾಲಿ ಮುಖಾಂತರ ಗಂಗಾವತಿ ಕಾರ್ಮಿಕ ನಿರೀಕ್ಷರ ಕಾರ್ಯಾಲಕ್ಕೆ ತೆರಳಿದ ಸಿಪಿಐಎಂಎಲ್‌ನ ಅಂಗ ಸಂಘಟನೆಗಳಾದ ಎಐಸಿಸಿಟಿಯು, ಕೆಜಿಎಲ್‌ಯು, ಆರ್‌ವೈಎ, ಐಸಾ, ಐಲಾ, ಐಪ್ವಾ ಮತ್ತು ಬೀದಿ ಬದಿಯ ವ್ಯಾಪಾರಿಗಳು ಹಾಗೂ ನೂರಾರು ಜನ ಅಸಂಘಟಿತ ಕಾರ್ಮಿಕರುಗಳನ್ನೊಳಗೊಂಡ ರ್‍ಯಾಲಿಯು ಕಾರ್ಮಿಕ ನಿರೀಕ್ಷಕಿಗೆ ಮನವಿಯನ್ನು ಸಲ್ಲಿಸಿ ಮುಂದೆ ಎಪಿಎಂಸಿ ಗೆ ತೆರಳಿ ಎಪಿಎಂಸಿ ಕಾರ್ಯದರ್ಶಿಗಳ ಮೂಲಕ ಮಾನ್ಯ ವ್ಯವಸ್ಥಾಪಕ ನಿರ್ಧೇಶಕರು ಕರ್ನಾಟಕ ರಾಜ್ಯ ಕೃಷಿ ಮರುಕಟ್ಟೆ ಮಂಡಳಿ ಇವರಿಗೆ ಅಕ್ಕಿ ಗಿರಣಿ ಕಾರ್ಮಿಕರಿಗೆ ಕಾಲೋನಿ ನಿರ್ಮಿಸಬೇಕೆಂದು ಮನವಿಯನ್ನು ಸಲ್ಲಿಸುವುದರೊಂದಿಗೆ ೪೮ ಗಂಟೆಗಳ ಮುಷ್ಕರಕ್ಕೆ ತೆರೆ ಬಿತ್ತು.
0 comments:
Post a Comment