ಕೊಪ್ಪಳ,ಜ.೦೩: ಜಿಲ್ಲಾ ಜಲಾನಯನ ಅಭಿವೃದ್ಧಿ ಇಲಾಖೆಯ ವೀರಣ್ಣ ಕಮತರ್ ಅವರು ರೋಟರಿ ಇಂಟರ್‌ನ್ಯಾಷನಲ್ ವತಿಯಿಂದ ಕೊಡಮಾಡುವ ಪಿಹೆಚ್‌ಎಫ್ (Panl Harris Fellow) ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನಗರದ ಡಾ.ಕೆ.ಜಿ.ಕುಲಕರ್ಣಿ ಆಸ್ಪತ್ರೆ ಸಭಾ ಭವನದಲ್ಲಿ ಕೊಪ್ಪಳ ರೋಟರಿ ಕ್ಲಬ್ ಹಾಗೂ ಇಂಟರ ನ್ಯಾಷನಲ್‌ದಿಂದ ಜರುಗಿದ ಸಮಾರಂಭವೊಂದರಲ್ಲಿ ವೀರಣ್ಣ ಕಮತರ್ ಅವರಿಗೆ ಪಿ.ಹೆಚ್.ಎಫ್. ಪ್ರಶಸ್ತಿ ಪ್ರದಾನ ಮಾಡಲಾಯಿತು. ರೋಟರಿ ಜಿಲ್ಲಾ ಮಾಜಿ ಗವರ್ನರ್ ಡಾ.ಕೆ.ಜಿ.ಕುಲಕರ್ಣಿ, ಜಿಲ್ಲಾ ಜಲಾನಯನ ಅಭಿವೃದ್ದಿ ಇಲಾಖೆಯ ವೀರಣ್ಣ ಕಮತರ್, ನಿವೃತ್ತ ಬ್ಯಾಂಕ್ ನೌಕರ ನೀಲಪ್ಪ ಭಾವಿಕಟ್ಟಿ, ಕು.ನರೇಂದ್ರ ಕುಲಕರ್ಣಿಯವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವೀರಣ್ಣ ಕಮತರ್ ಅವರು, ದಾನ ಮಾಡುವಾಗ ಆಗುವ ಆನಂದ ಅವರ್ಣೀಯ, ನಮ್ಮ ಜೇಬು ತುಂಬಿದ್ದರೂ ಸಹ ದಾನ ಮಾಡಬೇಕೆಂಬ ಹೃದಯ ಪಡೆಯುವುದು ಅವಶ್ಯವೆಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ಡಾ.ಮಹಾಂತೇಶ ಮಲ್ಲನಗೌಡರ ಇವರು ವಹಿಸಿ ರೋಟರಿ ಕ್ಲಬ್ ಚಟುವಟಿಕೆಗಳಿಗೆ ಸಾರ್ವಜನಿಕರ ಸಹಕಾರ ಇರಲೆಂದು ತಿಳಿಸಿದರು. ಸಮಾರಂಭದಲ್ಲಿ ಅನುಸೂಯಾ ಜಹಗೀರದಾರ ಇವರಿಂದ ಸಂಗೀತ ಕಾರ್ಯಕ್ರಮ ಜರುಗಿ ದಾಸರ ಪದಗಳು, ಶರಣರ ವಚನಗಳು, ಹಳೆ ಚಲನಚಿತ್ರ ಗೀತೆಗಳನ್ನು ಹಾಡಿ ಮನರಂಜಿಸಿದರು. ಹಾರ್ಮೋನಿಯಂನ ಪಟವಾರಿ, ತಬಲಾದ ಅನಂತ ಇವರು ಸಾಥ್ ನೀಡಿದರು. ನಿರೂಪಣೆಯನ್ನು ರೋಟರಿ ಕ್ಲಬ್ ಖಜಾಂಚಿ ಎ.ಜಿ.ಶರಣಪ್ಪ ನಿರ್ವಹಿಸಿದರು. ಕೊನೆಯಲ್ಲಿ ರೋಟರಿ ಕಾರ್ಯದರ್ಶಿ ಶೈಲಜಾ ಶರಣಪ್ಪ ವಂದನಾರ್ಪಣೆಗೈದರು.
0 comments:
Post a Comment