ಕೊಪ್ಪಳ : ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಆಶ್ರಯ ಕಾಲೋನಿಯಲ್ಲಿ ನಡೆದ ೨೦೧೨-೧೩ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಪರೀಕ್ಷಿತರಾಜ್‌ರವರು ವಹಿಸಿಕೊಂಡು ಮಾತನಾಡುತ್ತ ಶಿಬಿರಗಳು ಸ್ವಚ್ಛತೆಯ ಅರಿವನ್ನು ಮೂಡಿಸಿ ಪ್ರತಿಭೆಯನ್ನು ಬೆಳೆಸುತ್ತದೆ. ಶಿಬಿರಗಳು ಅವಕಾಶಗಳ ವೇದಿಕೆಯಾಗಿದ್ದು, ಬದುಕಿನ ದಾರಿಯನ್ನು ತೋರುತ್ತದೆ. ಎದುರಿಸುವ ಮನೋಭಾವ ಬೆಳೆಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಶಿಕ್ಷಣ ಸಂಪನ್ಮೂಲ ವ್ಯಕ್ತಿಗಳಾದ ಕೊಟ್ರೇಶ ಹೈದ್ರಿಯವರು ಶಿಬಿರಗಳಿಂದ ಒಳ್ಳೆಯ ನಾಗರಿಕನಾಗಿ ಬೆಳೆಯುತ್ತಾನೆ. ಒಗ್ಗಟ್ಟಿನ ಭಾವನೆಮೂಡಿಸಿ ಆದರ್ಷಗಳನ್ನು ಬೆಳೆಸುತ್ತದೆ ಎಂದರು. ವೇದಿಕೆ ಮೇಲೆ ಸ.ಕಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಯರಾದ ಶ್ರೀಮತಿ ಬಾಲನಾಗಮ್ಮ ಸಹ ಶಿಕ್ಷಕಿಯರಾದ ಶ್ರೀಮತಿ ಗೌರಿ ಎಸ್ ಬಿಜ್ಜಳ, ಉಷಾ ರಾಣಿ, ಪ್ರಾಸ್ತಾವಿಕವಾಗಿ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಾದ ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್ ಮಾತನಾಡಿದರು. ವಿದ್ಯಾರ್ಥಿಗಳ ಪರವಾಗಿ ಮಂಜುಳಾ ಡಂಬಳ, ವೆಂಕನಗೌಡ ಪೋ.ಪಾ, ಪರಶುರಾಮ ನಾಯಕ ಮಾತನಾಡಿದರು.
ಸೋಮಶೇಖರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ರುದ್ರೇಶ ಸ್ವಾಗತಿಸಿದರೆ ಕೊನೆಗೆ ಕಾರ್ತೀಕ ಕುಮಾರ ಎಸ್.ಎಚ್ ವಂದಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ವಿರುಪಾಕ್ಷಿ ನೆರವೇರಿದರು.
0 comments:
Post a Comment