PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಮುಂಬರುವ ಫೆ. ೦೯-೧೦- ಹಾಗ ೧೧ ರಂದು  ವಿಜಾಪೂರದಲ್ಲಿ ಜರುಗಲಿರುವ  ೭೯ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ೨೫೦ ರೂಗಳ ಶುಲ್ಕವನನು ನಿಗದಿಗೊಳಿಸಲಾಗಿದೆ. 
 ಜಿಲ್ಲೆಯಿಂದ ಪ್ರತಿನಿಧಿಯಾಗಿ ಭಾಗವಹಿಸಲು ಇಚ್ಚಿಸುವವರು ಇದೆ ಜನೆವರಿ ೩೦ ರೊಳಗಾಗಿ ಆಯಾ ತಾಲೂಕಿನ ಕಸಾಪ ಅಧ್ಯಕ್ಷರನ್ನು ಸಂಪರ್ಕಿಸಿ ನಿಗದಿತ ಶುಲ್ಕವನ್ನು ತುಂಬಿ ರಶೀದಿಯನ್ನು ಪಡೆಯಬೇಕು. ಈ ಭಾರಿ ಸಮ್ಮೇಳನ ನಡೆಯುವ ಸಂದರ್ಭದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಲು ಅವಕಾಶ ಇರುವುದಿಲ್ಲ. ಪುಸ್ತಕ ಮತ್ತು ವಾಣಿಜ್ಯ ಮಳಿಗೆ ತೆರೆಯಲು ಮೂರು ದಿನಗಳ ಅವಧಿಗೆ ಅನುಕ್ರಮವಾಗಿ ೧೦೦೦ ರೂ ಹಾಗೂ ೨೦೦೦ ರೂ ಗಳನ್ನು ನಿಗದಿ ಮಾಡಲಾಗಿದೆ. ಮಳಿಗೆಗಳಿಗೆ ವಿದ್ಯುತ್ ಸಂಪರ್ಕ, ಕುರ್ಚಿ, ಹಾಗೂ ಟೇಬಲ್ ಗಳನ್ನು ನೀಡಲಾಗುವದು. ಹಾಗೂ ಸಮ್ಮೆಳನಕ್ಕೆ ದೇಣಿಗೆ ಹಾಗೂ ಜಾಹೀರಾತುಗಳನ್ನು ನೀಡಬಯಸುವವರು ಜಿಲ್ಲಾ ಕಸಾಪಕ್ಕೆ ಸಂಪರ್ಕಿಸಿ ರಶೀದಿ ಪಡೆಯಲು  ಜಿಲ್ಲಾ ಕಸಾಪ ಕೋರಿದೆ. ಹೆಚ್ಚಿನ ಮಾಹಿತಿಗಾಗಿ - ೯೦೦೮೫೮೫೪೮೨ ಸಂಪರ್ಕಿಸಲು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ  ಹಾಗೂ ಗೌರವ ಕೋಶಾಧ್ಯಕ್ಷರಾದ ಆರ್. ಎಸ್. ಸರಗಣಾಚಾರಿ ಕೋರಿದ್ದಾರೆ. 

Advertisement

0 comments:

Post a Comment

 
Top