ಕೊಪ್ಪಳ ಜ.೧೫ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ಫೆ.೨೬ ಮತ್ತು ೨೭ ರಂದು ಎರಡು ದಿನಗಳ ಕಾಲ ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿಯಿಂದ ರಾಜ್ಯ ಮಟ್ಟದ ಕನ್ನಡ ಸಂಶೋಧನ ಕಮ್ಮಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಮ್ಮಟದ ಉಸ್ತುವಾರಿಗೆ ಸಂಚಾಲಕರನ್ನಾಗಿ ಪುಂಡಲೀಕ ಹಾಲಂಬಿ ಅವರನ್ನು ನೇಮಿಸಲಾಗಿದೆ.
ಕನ್ನಡಕ್ಕೆ ಶಾಸ್ತ್ರೀಯ ನುಡಿ ಗೌರವ ಸಂದ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ದೂರದೃಷ್ಠಿಯಿಂದ ರೂಪಗೊಂಡ ಈ ಕಾರ್ಯಕ್ರಮದಲ್ಲಿ, ಕನ್ನಡದಲ್ಲಿರುವ ಸಂಶೋಧನ ಅವಕಾಶಗಳು, ತಂತ್ರಜ್ಞಾನ ಬಳಕೆ, ಅನ್ಯಶಿಸ್ತುಗಳು, ಅನ್ಯಜ್ಞಾನ, ಅಲಕ್ಷಿತ ಕ್ಷೇತ್ರಗಳು, ಉತ್ತಮ ಸಂಶೋದನೆ ಸೇರಿದಂತೆ ಹಲವು ವಿಚಾರಗಳ ಮೇಲೆ ನಾಡಿನ ಗಣ್ಯ ತಜ್ಞರು ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ.
೨೦೧೧-೧೨ನೇ ಸಾಲಿನಲ್ಲಿ ನಾಡಿನ ಎಲ್ಲಾ ಜಿಲ್ಲೆಗಳಲ್ಲಿ ನಡೆದ ಕನ್ನಡ ಸಂಶೋಧನ ಕಮ್ಮಟದಲ್ಲಿ ಭಾಗವಹಿಸಿದ್ದು, ಈಗ ಅವರಲ್ಲಿ ಆಯ್ಕ ಕೆಲವರನ್ನು ಗುರುತಿಸಿ ಕಮ್ಮಟ ನಡೆಸುವ ಉದ್ದೇಶ ಪರಿಷತ್ತಿನದ್ದಾಗಿದ್ದು, ಆಸಕ್ತರು ಆಯಾ ಜಿಲ್ಲಾ ಕಸಾಪ ಅಧ್ಯಕ್ಷರುಗಳ ಮೂಲಕ ಜ.೩೦ ರೊಳಗೆ ಸಲ್ಲಿಸಬಹುದಾಗಿದ್ದು, ಹೆಸರು, ವಿಳಾಸ, ಸಂಕ್ಷಿಪ್ತ ಮಾಹಿತಿಯೊಂದಿಗೆ ಡಿ.ಮಂಜುನಾಥ, ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾಧಿಕಾರಿಗಳ ಕಚೇರಿ ಹತ್ತಿರ, ಶಿವಮೊಗ್ಗ ಇವರಿಗೆ ಸಲ್ಲಿಸಬಹುದಾಗಿದೆ
0 comments:
Post a Comment