ಕೊಪ್ಪಳ :- ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶರಣ ಧರ್ಮದ ಕಿರ್ತಿ ಪತಾಕೆಯನ್ನು ಎತ್ತಿ ಹಿಡಿದ ಅಂಬಿಗರ ಚೌಡಯ್ಯನವರ ದಿನಾಚರಣೆಯ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದಂತಹ ಆರ್.ಹೆಚ್.ಅತ್ತನೂರು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಇವರು ಶರಣ ಮಹಾಕ್ರಾಂತಿಯಲ್ಲಿ ಹೊರಹೊಮ್ಮಿದ ಅನರ್ಘ್ಯ ರತ್ನಗಳಲ್ಲಿ ಅಂಬಿಗರ ಚೌಡಯ್ಯನವರು ಒಬ್ಬರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅವರ ಸಾಧನೆ ಅಪಾರವಾದುದ್ದು. ಅವರ ವಿಚಾರ ಧಾರೆಗಳು ಸಮಾಜಕ್ಕೆ ಸಾರ್ವಕಾಲಿಕವಾದವಗಳು ಅಂತಹ ಆದರ್ಶಗಳನ್ನು ಅಳವಡಿಸಿಕೊಳ್ಳಿರಿ ಎಚಿದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಮೊದಲಿಗೆ ಶ್ರೀಮತಿ ಜಯಶ್ರೀ ಕುಕರ್ಣಿಯವರು ಅಂಬಿಗರ ಚೌಡಯ್ಯಯನವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಶಾಲಾ ಶಿಕ್ಷಕರು ಮತ್ತು ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾರಾದ ಶ್ರೀಮತಿ ರೇಣುಕಾ ಅತ್ತನೂರು ಹಾಗೂ ಶಿಕ್ಷಕ/ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕುಮಾರಿ ಆಶಾ ದೊಡ್ಡಮನಿ ನಿರೂಪಿಸಿದರು. ನಾಗರಾಜ.ಕೆ ಸ್ವಾಗತಿಸಿದರು. ಕುಮಾರ ರಾಘವೇಂದ್ರ. ಜಿ ವಂದಿಸಿದರು
0 comments:
Post a Comment