ಜನಪರವಾಗಿ ಹೋರಾಟ ಮಾಡುತ್ತಿರುವ ಹೋರಾಟಗಾರ ಜೆ.ಭಾರದ್ವಾಜರನ್ನು ಗಡಿಪಾರು ಮಾಡಲು ಜಿಲ್ಲಾಡಳಿತ ತೆಗೆದುಕೊಂಡಿರುವ ನಿರ್ಧಾರ ಜನವಿರೋಧಿ ಹಾಗು ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡುವಂತಹದ್ದು ಎಂದು ಸಿಪಿಎಂಎಲ್ ಕೇಂದ್ರ ಸಮಿತಿಯ ಶಂಕರ ಹೇಳಿದರು. ಅವರು ಮೀಡಿಯಾ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಿಯಲ್ ಎಸ್ಟೇಟ್ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿರುವ ಜಿಲ್ಲಾಧಿಕಾರಿ ಜನಪರ ಹೋರಾಟಗಾರನನ್ನು ಗಡಿಪಾರು ಮಾಡುವದನ್ನು ವಿರೋಧಿಸುತ್ತೇವೆ. ಚಳುವಳಿಗಳನ್ನು ಹೋರಾಟಗಳನ್ನು ಹತ್ತಿಕ್ಕುವ ಕೆಲಸ ಜಿಲ್ಲಾಧಿಕಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದರ ವಿರುದ್ದ 16ರಂದು ಗಂಗಾವತಿಯಲ್ಲಿ ರ್ಯಾಲಿ ಹಮ್ಮಿಕೊಳ್ಳಲಾಗಿದ್ದು 18ರಂದು ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಜೆ.ಭಾರದ್ವಾಜರ ಪತ್ನಿ ಶಾಂತಕುಮಾರಿ ಮಾತನಾಡಿ ಜಿಲ್ಲಾಧಿಕಾರಿಗಳು ನಮಗೆ ಕಾರಣವಿಲ್ಲದೇ ತೊಂದರೆ ಕೊಡುತ್ತಿದ್ದಾರೆ. ನಮಗೆ ಜೀವ ಬೆದರಿಕೆ ಇದೆ. ನನ್ನ ಗಂಡನನ್ನು ಎನ್ ಕೌಂಟರ್ ಮಾಡಿಸಲಾಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ನನಗೆ ಮತ್ತು ನನ್ನ ಪತಿ ಜೆ.ಭಾರದ್ವಾಜರಿಗೆ ಏನಾದರು ತೊಂದರೆ ಆದರೆ ಅದಕ್ಕೆ ಜಿಲ್ಲಾಧಿಕಾರಿಗಳೆ ಹೊಣೆ ಹೊರಬೇಕಾಗುತ್ತದೆ . ಗಡಿಪಾರು ಯಾತಕ್ಕಾಗಿ ಮಾಡುತ್ತಿದ್ದಾರೆ ಎಂದು ಕಾರಣ ನೀಡಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಹಿರಿಯ ಹೋರಾಟಗಾರ ವಿಠ್ಠಪ್ಪ ಗೋರಂಟ್ಲಿ, ಬಸವರಾಜ ಶೀಲವಂತರ ಗಡಿಪಾರು ಆದೇಶವನ್ನು ಖಂಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಅಪ್ಪಣ್ಣ ಉಪಸ್ಥಿತರಿದ್ದರು.
0 comments:
Post a Comment