PLEASE LOGIN TO KANNADANET.COM FOR REGULAR NEWS-UPDATES





 ಕೊಪ್ಪಳ ಜ.  ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ೧೫೦ನೇ ಜಯಂತಿ ಅಂಗವಾಗಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ ಹಾಗೂ ವಿವಿಧ ಯುವಕ, ಯುವತಿ ಸಂಘಗಳ ಸಹಯೋಗದೊಂದಿಗೆ ಕೊಪ್ಪಳದಲ್ಲಿ ಏರ್ಪಡಿಸಲಾಗಿದ್ದ ಯುವ ಕಾಲ್ನಡಿಗೆ ಜಾಥಾಕ್ಕೆ ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
         ಸರ್ಕಾರದ ವತಿಯಿಂದ ಇದೇ ಪ್ರಥಮ ಬಾರಿಗೆ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಈ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಿವಿಧ ಯುವ ಸಂಘಗಳ ಸಹಯೋಗದೊಂದಿಗೆ ಕೊಪ್ಪಳ ನಗರದ ಸಾರ್ವಜನಿಕ ಮೈದಾನದಿಂದ ನಗರದ ಪ್ರಮುಖ ರಸ್ತೆ ಮೂಲಕ ಜಿಲ್ಲಾ ಕ್ರೀಡಾಂಗಣದವರೆಗೆ ಜಾಥಾ ಸಾಗಿಬಂದಿತು.  ಡೊಳ್ಳು ಕುಣಿತ, ಕೋಲಾಟ ಕುಣಿತ ಮುಂತಾದ ಜಾನಪದ ಕಲಾ ತಂಡಗಳು ಮೆರವಣಿಗೆಯುದ್ದಕ್ಕೂ ತಮ್ಮ ಕಲಾ ಪ್ರದರ್ಶನ ಮೆರೆಯುವ ಮೂಲಕ ಜಾಥಾಕ್ಕೆ ಇನ್ನಷ್ಟು ಮೆರಗು ತಂದವು.  ಸಾವಿರಾರು ಯುವಕ, ಯುವತಿಯರು ಜಾಥಾದಲ್ಲಿ ಭಾಗವಹಿಸಿ, ಸ್ವಾಮಿ ವಿವೇಕಾನಂದರ ತತ್ವಗಳ ಘೋಷಣೆ ಮೊಳಗಿಸಿದರು. 
       ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಜಾಥಾದಲ್ಲಿ ಭಾಗವಹಿಸಿ, ಯುವ ಜನತೆಯನ್ನು ಹುರಿದುಂಬಿಸಿದರು.  ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ, ಭೂನ್ಯಾಯ ಮಂಡಳಿ ಸದಸ್ಯ ಹಾಲೇಶ್ ಕಂದಾರಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿ.ಎನ್. ಘಾಡಿ, ವಂದೇಮಾತರಂ ಯುವ ಸಂಘದ ಅಧ್ಯಕ್ಷ ರಾಕೇಶ್ ಕಾಂಬ್ಳೆ, ಓಜನಹಳ್ಳಿ ಚೇತನ ಸಾಂಸ್ಕೃತಿಕ ಯುವ ಸಂಘದ ಶಿವಮೂರ್ತಿ ಮೇಟಿ, ಶಿವಾನಂದ ಹೊದ್ಲೂರ್, ಮುಂತಾದವರು ಜಾಥಾದಲ್ಲಿ ಭಾಗವಹಿಸಿದ್ದರು.
      ಸ್ವಾಮಿ ವಿವೇಕಾನಂದರ ೧೫೦ನೇ ಜಯಂತಿ ಅಂಗವಾಗಿ, ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾಮಿ ವಿವೇಕಾನಂದರ ಕುರಿತಾದ ಕಿರು ಚಿತ್ರಗಳನ್ನು ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.

Advertisement

0 comments:

Post a Comment

 
Top