PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಜ. ೧೯   ಕೊಪ್ಪಳ ಜಿಲ್ಲೆಯ ಜನರ ಆದರ, ಆತಿಥ್ಯ ಹಾಗೂ ಸಹೃದಯತೆ ಭಾವನೆಗಳಿಗೆ ನಾನು ಮನ ಸೋತಿದ್ದೇನೆ. ಹೀಗಾಗಿ ನಾನು ಪ್ರತಿ ವರ್ಷವೂ ಇಲ್ಲಿಗೆ ಬಂದು ಕೆಲವು ತಿಂಗಳುಗಳ ಕಾಲ ಇಲ್ಲಿ ಅಂಗವಿಕಲರಿಗೆ ಪುನರ್ವಸತಿ ಸೇವೆ ನೀಡಿ ಹಾಗೂ ಕೆಲವರಿಗೆ ಫಿಜಿಯೋ ಥೆರಪಿ ತರಬೇತಿ ನೀಡಿ ಹಿಂದಿರುಗುತ್ತೇನೆ ಎಂದು ಇತ್ತೀಚಿಗೆ ರೋಟರಿ ಕ್ಲಬ್ಬಿಗೆ ಭೇಟಿ ನೀಡಿದ ಕೆನಡಾ ದೇಶದ ಮಹಿಳೆ  ಹಿಲರಿ ವ್ಯಕ್ತಪಡಿಸಿದರು. 
   ರೋಟರಿ ಕ್ಲಬ್ ವತಿಯಿಂದ ಏರ್ಪಡಿಸಲಾಗಿದದ ಕಾರ್ಯಕ್ರಮವೊಂದರಲ್ಲ್ಲಿ ಬಾಗವಹಿಸಿ ಮಾತನಾಡಿದ ಹಿಲರಿಯವರು ರೋಟರಿ ಸಂಸ್ಥೆಯ ಸೇವಾ ಕಾರ್ಯಗಳನ್ನು ಮನ:ಪೂರ್ವಕವಾಗಿ ಶ್ಲಾಘಿಸಿದರು. 
          ಹಿಲರಿಯವರು ಕೆನಡಾ ದೇಶದ ಬ್ರಿಟಿಷ್ ಕೊಲಂಬಿಯಾ ರಾಜ್ಯದ ನಿವಾಸಿಯಾಗಿದ್ದು ವೃತ್ತಿಯಿಂದ ಫಿಜಿಯೋ ಥೆರಪಿಸ್ಟ್ ಆಗಿದ್ದಾರೆ. ಕಳೆದ ಹದಿನೆಂಟು ವರ್ಷಗಳಿಂದ ಪ್ರತಿ ವರ್ಷವೂ ಭಾರತಕ್ಕೆ ಬಂದು ಕೊಪ್ಪಳ ನಗರದಲ್ಲಿರುವ ಸಮೂಹ ಸಾಮರ್ಥ್ಯ ಸಂಸ್ಥೆಯ ಮೂಲಕ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿರುವ ಅಂಗವಿಕಲರಿಗೆ ವಿವಿಧ ರೀತಿಯ ಸೇವೆ ನೀಡುತ್ತಿದ್ದಾರೆ. ಅಲ್ಲದೆ ಕೆನಡಾ ದೇಶದಲ್ಲಿಯ ರೋಟರಿ ಹಾಗೂ ಇತರೆ ಸೇವಾ ಸಂಸ್ಥೆಗಳಿಂದ ಹಣ ಸಂಗ್ರಹಿಸಿ ಇಲ್ಲಿಯ ತಮ್ಮ ಸೇವಾ ಕಾರ್ಯಗಳಿಗೆ ಉಪಯೋಗಿಸುತ್ತಾರೆ. ಕಳೆದ ಮೂರು-ನಾಲ್ಕು ವರ್ಷಗಳಿಂದ ಕೆನಡಾ ದೇಶದಿಂದ ಫಿಜಿಯೋ ಥೆರಪಿ ವಿದ್ಯಾರ್ಥಿಗಳನ್ನು ಹೆಚ್ಚಿನ ತರಬೇತಿಗಾಗಿ ಕೊಪ್ಪಳದ ಈ ಸಂಸ್ಥೆಗೆ ಕರೆದು ತರುತ್ತಾರೆ. ಅವರ ಈ ಸೇವೆಯನ್ನು ಗುರುತಿಸಿ ಕೆನಡಾ ದೇಶದ ಗ್ರ್ಯಾಮ್ ಫೌಂಡೇಶನ್ ಸಂಸ್ಥೆಯು ಇವರಿಗೆ ರಾಷ್ಟ್ರೀಯ ಪುರಸ್ಕಾರ ನೀಡಿ ಗೌರವಿಸಿದೆ. 
                   ಅವರ ಗೌರವಾರ್ಥ ಏರ್ಪಡಿಸಿದ್ದ  ಕಾರ್ಯಕ್ರಮದ ಅಧ್ಯಕ್ಷತೆಯನ್ನು  ರೋಟರಿ ಅಧ್ಯಕ್ಷ ಡಾ.ಮಹಾಂತೇಶ ಮಲ್ಲನಗೌಡರ ವಹಿಸಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ  ರೋಟರಿ ಮಾಜಿ ಜಿಲ್ಲಾ ಗವರ್ನರ್  ಡಾ.ಕೆ.ಜಿ.ಕುಲಕರ್ಣಿ, ಕಾರ್ಯದರ್ಶಿ ಶೈಲಜಾ, ಇನ್ನರ್ ವ್ಹೀಲ್ ಕ್ಲಬ್ಬಿನ ಡಾ.ರಾಧಾ ಕುಲಕರ್ಣಿ, ರೋ.ಶ್ರೀನಿವಾಸದಾಸ್, ನೀಲಪ್ಪ ಭಾವಿಕಟ್ಟಿ, ಇಂದಿರಾ ಭಾವಿಕಟ್ಟಿ, ಆನಂದ ಕಾಂಬಳೆ, ವೀರಣ್ಣ ಕಮತರ, ಸಮೂಹ ಸಾಮರ್ಥ್ಯದ ಪ್ರಭಾಕರ, ನರೇಂದ್ರ ಕುಲಕರ್ಣಿ,ಬಾಗವಹಿಸಿದ್ದರು. ಏ.ಜಿ.ಶರಣಪ್ಪ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Advertisement

0 comments:

Post a Comment

 
Top