ಕೊಪ್ಪಳ : ದಿನಾಂಕ 19 ರಂದು ಬೆಳಗ್ಗೆ ೧೧:೩೦ಕ್ಕೆ ನಗರದ ಅಶೋಕ ವೃತ್ತದಲ್ಲಿ ಕೊಪ್ಪಳ ವಿದಾನಸಭಾ ಕ್ಷೇತ್ರದ ಅಧ್ಯಕ್ಷರಾದ ಕಾಟನ್ ಪಾಷಾ ಇವರ ನೇತೃತ್ವದಲ್ಲಿ ಹಾಗೂ ಜಿಲ್ಲಾ ಕಾಂಗ್ರೆಸ ವತಿಯಿಂದ ನಡೆದ ೩೭೧ ಕಲಂ ನ ಅನುಮೋದನೆಯ ವಿಜೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಕಾಂಗ್ರೆಸ ಅಧ್ಯಕ್ಷರಾದ ಕೆ. ಬಸವರಾಜ ಹಿಟ್ನಾಳರವರು ಹೈದ್ರಬಾದ್ ಕರ್ನಾಟಕ ಜನರ ಬಹುವರ್ಷಗಳ ಬೇಡಿಕೆಯಾಗಿದ್ದ ೩೭೧ ಕಲಂ ನ್ನು ಯು.ಪಿ.ಎ ಸರಕಾರವು ಜಾರಿಗೋಳಿಸಿದ್ದು ಈ ಭಾಗದ ಜನರ ಬಹುದಿನದ ಕನಸು ನನಸಾಗಿದ್ದು ೬ ಜಿಲ್ಲೆಗಳ ಜನರ ಆರ್ಥಿಕ ಹಾಗೂ ಶೈಕ್ಷಣಿಕ ವ್ಯವಸ್ಥೇಯು ಸುಭದ್ರಗೊಳ್ಳಲಿದೆ. ಪ್ರತಿಯೊಬ್ಬ ವಿದ್ಯಾವಂತನಿಗೆ ಉದ್ಯೋಗವು ಲಬಿಸಲಿದ್ದು ಇಡೀ ಹೈದ್ರಾಬಾದ್ ಕರ್ನಾಟಕದ ಜನತೆ ಆರ್ಥಿಕ ಶೈಕ್ಷಣಿಕವಾಗಿ ಸುಭದ್ರತೆ ಹೊಂದಲಿದ್ದಾರೆ. ಯು.ಪಿ.ಎ ಸರಕಾರದ ಈ ಮಹತ್ತರ ಕಾರ್ಯವು ಶ್ಲಾಘನಿಯವಾಗಿದೆ. ೩೭೧ ನ ಕಲಂಮಿನ ಹೋರಾಟದಲ್ಲಿ ಪಾಲ್ಗುಂಡ ಎಲ್ಲ ಸಂಘ ಸಂಸ್ಥೆಗಳ ಅಧ್ಯಕ್ಷರಿಗೆ ಪಧಾದಿಕಾರಿಗಳಿಗೆ ಹಾಗೂ ಸದಸ್ಯರಿಗೆ ಜಿಲ್ಲಾ ಕಾಂಗ್ರೆಸ ವತಿಯಿಂದ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್.ಬಿ. ನಾಗರಳ್ಳಿ, ಜುಲ್ಲುಖಾದರ, ಕೆ. ರಾಘವೇಂದ್ರ ಹಿಟ್ನಾಳ, ಶಾಂತಣ್ಣ ಮುದಗಲ್ ಮದ್ರಾನಲಿ ಅಡ್ಡೆವಾಲಿ, ಅಪ್ಸರ ಸಾಬ್, ಗಾಳೆಪ್ಪ ಪೂಜಾರ, ಕೃಷ್ಣಾ ಇಟ್ಟಂಗಿ, ಜಾಕೀರಹುಸೇನ ಕಿಲ್ಲೆದಾರ, ಗವಿಸಿದ್ದಪ್ಪ ಮುದಗಲ್, ವೈಜ್ಯನಾಥ ದಿವಟರ, ಅರ್ಜುನಸಾ ಕಾಟವಾ, ಸಾವಿತ್ರಿ ಮಜುಮುದಾರ, ಸರೋಜಾ ಭಾಕಳೆ, ಎಲ್ಲಪ್ಪ ಕಾಟರಳ್ಳಿ, ಶಿವಾನಂದ ಹೊದ್ಲೂರ, ಮುನೀರ ಸಿದ್ದಿಕಿ, ಮಲ್ಲಿಕಾರ್ಜುನ, ದಿಡ್ಡಿ ಗಫಾರ, ಜಾಪರ ಸಂಗಟಿ, ಕಬೀರ ಸಿಂದೋಗಿ,ಕಾಂಗ್ರೆಸ ವಕ್ತಾರ ಅಕ್ಬರಪಾಷಾ ಪಲ್ಟನ್ ಮುಂತಾದವರು ಉಪಸ್ಥಿತರಿದ್ದರು .
0 comments:
Post a Comment