PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಡಿ.೨೮  : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಗ್ರಾಮ ಪಂಚಾಯತ್ ಬೂದಗೂಂಪಾ ಮತ್ತು ಶ್ರೀ ಸ್ವಾಮಿ ವಿವೇಕಾನಂದ ಯುವಕ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಪ್ರಸಕ್ತ ಸಾಲಿನ ಕೊಪ್ಪಳ ಜಿಲ್ಲಾ ಮಟ್ಟದ ಯುವಜನ ಮೇಳ ಕಾರ್ಯಕ್ರಮವನ್ನು ಡಿ.೩೧ ರಂದು ಕೊಪ್ಪಳ ತಾಲೂಕಿನ ಬೂದಗುಂಪಾ ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. 
ಈ ಜಿಲ್ಲಾಮಟ್ಟದ ಯುವಜನ ಮೇಳ ಕಾರ್ಯಕ್ರಮದಲ್ಲಿ ಭಾವಗೀತೆ, ಜನಪದ ಗೀತೆ, ರಂಗಗೀತೆ, ಜಾನಪದ ನೃತ್ಯ, ಗೀಗೀ, ಪದಗಳು ಲಾವಣಿ, ಕೋಲಾಟ ಭಜನೆ, ಜೋಳ-ರಾಗಿ ಬೀಸುವ ಪದ ಸೋಬಾನ ಪದಗಳು ಏಕಪಾತ್ರಾಭಿನಯ, ವೀರಗಾಸೆ (ಪುರವಂತಿಕೆ), ಡೊಳ್ಳು ಕುಣಿತ, ದೊಡ್ಡಾಟ, ಸಣ್ಣಾಟ, ಚರ್ಮವಾದ್ಯ ಮೇಳ ಯಕ್ಷಗಾನ, ಈ ಸ್ಪರ್ಧೆಗಳು ನಡೆಯಲಿದ್ದು ಈಗಾಗಲೇ ಪ್ರಸಕ್ತ ಸಾಲಿನ ತಾಲೂಕ ಯುವಜನ ಮೇಳಗಳಲ್ಲಿ ಭಾಗವಹಿಸಿದ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವೀತಿಯ ಸ್ಥಾನ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದವರು ಮಾತ್ರ ಈ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ. 
ಯುವಜನ ಮೇಳದಲ್ಲಿ ಭಾಗವಹಿಸಲು ಸಾಮಾನ್ಯ ಸೂಚನೆಗಳು : ಕಾಲಾವಕಾಶ ತೀರ್ಪುಗಾರರು ನೀಡುವ ಕರೆಗಂಟೆಯಿಂದ ಪ್ರಾರಂಭವಾಗುತ್ತದೆ. ಸ್ಪರ್ಧೆಗೆ ನೀಡುವ ಮುನ್ನುಡಿ ಇತ್ಯಾದಿಗಳು ಈ ಅವಧಿಯಲ್ಲಿ ಸೇರಿರುತ್ತವೆ, ಯಾವುದೇ ತಂಡದಲ್ಲಿ ೧೮ ರಿಂದ ೩೫ವರ್ಷ ಒಳಗಿನವರಿಗೆ ಮಾತ್ರ ಸ್ಪರ್ಧಾಗಳಲ್ಲಿ ಭಾಗವಹಿಸಲು ಅವಕಾಶವಿರುತ್ತದೆ, ಧ್ವನಿ ಮುದ್ರಿತ ಕ್ಯಾಸೆಟ್‌ಗಳಿಗೆ ಅವಕಾಶವಿಲ್ಲ. ಸ್ಪರ್ದೆಗೆ ಬೇಕಾಗುವ ಸಾಮಗ್ರೀಗಳನ್ನು ತಾವೇ ತರಬೇಕು, ಸ್ಪರ್ಧೆಯಲ್ಲಿ ಯಾವುದೇ ತಂಡ ಅಥವಾ ವ್ಯಕ್ತಿ ರಾಜ್ಯಮಟ್ಟದ ಯುವಜನ ಮೇಳದಲ್ಲಿ ಸತತವಾಗಿ ಎಡರು ಬಾರಿ ಪ್ರಥಮ ಸ್ಥಾನಗಳಿಸಿದರೆ ಅಂತವರು ಅದೇ ಸ್ಪರ್ಧೆಯಲ್ಲಿ ಮೂರನೇ ಬಾರಿ ತಾಲ್ಲೂಕು ಮಟ್ಟದಿಂದಲು ಸಹ ಭಾಗವಹಿಸಲು ಅವಕಾಶವಿರುವುದಿಲ್ಲ. ಭಾಗವಹಿಸುವ ಸ್ಪರ್ಧಾಳುಗಳಿಗೆ ತಾಲೂಕ ಸ್ಥಾನದಿಂದ ಸಂಘಟನೇಯ ಸ್ಥಾನದವರೆಗೂ ಸಾಮಾನ್ಯ ಬಸ್ ದರ ಪ್ರಯಾಣ ಭತ್ಯೆಯನ್ನು ನೀಡಲಾಗುವುದು ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. 
ಹೆಚ್ಚಿನ ಮಾಹಿತಿಗಾಗಿ ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿಗಳಾದ ಕೊಪ್ಪಳ ತಾಲೂಕ ಎನ್.ಎಸ್.ಪಾಟೀಲ್ ಮೊ.ನಂ: ೯೯೮೦೮೫೨೭೩೫, ಕುಷ್ಟಗಿ ತಾಲೂಕ ಧರ್ಮಕುಮಾರ ಕಂಬಳಿ ಮೊ.ನಂ :೯೯೮೦೧೯೦೭೧೨, ಯಲಬುರ್ಗಾ ತಾಲೂಕ ಬಸವರಾಜ್ ಮೊ. ನಂ. ೯೪೮೧೫೫೦೬೩೮, ಗಂಗಾವತಿ ತಾಲೂಕ ತಿಪ್ಪಯ್ಯ ಸ್ವಾಮಿ ಹಿರೇಮಠ ಮೊ.ನಂ :೯೦೦೮೩೬೩೬೭೦ ಅಥವಾ ಕಛೇರಿ ದೂರವಾಣಿ ಸಂಖ್ಯೆ ೦೮೫೩೯-೨೦೧೪೦೦ಗೆ ಸಂಪರ್ಕಿಸುವಂತೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಎನ್.ಘಾಡಿ  ತಿಳಿಸಿದ್ದಾರೆ.

Advertisement

0 comments:

Post a Comment

 
Top