PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಡಿ. ೧೯  : ಕೊಪ್ಪಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಮಳೆ ಮಲ್ಲೇಶ್ವರ ದೇವಸ್ಥಾನಕ್ಕೆ ೧. ೧೫ ಕೋಟಿ ರೂ. ವೆಚ್ಚದಲ್ಲಿ ನೂತನ ಸಿ.ಸಿ. ರಸ್ತೆ ನಿರ್ಮಾಣ ಮಾಡುವ ಕಾಮಗಾರಿಗೆ ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಚಾಲನೆ ನೀಡಿದರು.
  ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಮಳೆಮಲ್ಲೇಶ್ವರ ದೇವಸ್ಥಾನವು ಒಂದು. ಇಲ್ಲಿಯ ಪರಿಸರ ಅತ್ಯಂತ ಆಕರ್ಷೀಣಿಯವಾಗಿದೆ ಮತ್ತು ಆಹ್ಲಾದಕರವಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ಜಿಲ್ಲೆಯ ಮಹತ್ವದ ಪ್ರವಾಸಿ ಸ್ಥಳವಾಗಿ ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಕ್ಷೇತ್ರಕ್ಕೆ ಮಹಾಭಾರತದ ನಂಟು ಇದ್ದು, ಅರ್ಜುನ ಪಾಶುಪತಾಸ್ತ್ರ ಪಡೆದನೆಂಬ ಪ್ರತೀತಿ ಇದೆ.  ಅಲ್ಲದೆ ಇಲ್ಲಿ ಪ್ರತಿನಿತ್ಯ ವಿವಾಹ ಮತ್ತು ಇನ್ನೀತರ ಶುಭ ಕಾರ್ಯಗಳಿಗೆ ಅನುಕೂಲವಾಗುವಂತೆ ಈಗಾಗಲೇ ಪ್ರವಾಸೋದ್ಯಮ ಇಲಾಖೆಯಿಂದ ರೂ.೧ ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಗುತ್ತಿಗೆದಾರರು ಶ್ರೀ ಸುಕ್ಷೇತ್ರದಲ್ಲಿ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಹೇಳಿದರು.
     ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಅದ್ಯಕ್ಷ ರಾಘವೇಂದ್ರ ಹಿಟ್ನಾಳ, ನಗರಾಭಿವೃದ್ದಿ ಪ್ರಾಧಿಕಾರದ ಅದ್ಯಕ್ಷ ಅಪ್ಪಣ್ಣ ಪದಕಿ, ನಗರಸಭೆ ಸದಸ್ಯರಾದ ವಿರುಪಾಕ್ಷಪ್ಪ ಮೊರನಾಳ, ಮಹಾದೇವಪ್ಪ ಜವಳಿ, ಶಿವು ಕೊಣಂಗಿ, ಮಳೆಮಲ್ಲೇಶ್ವರ ಟ್ರಸ್ಟ ಅದ್ಯಕ್ಷರಾದ ಶಿವಣ್ಣ ಹಡಗಲಿ, ಮುಖಂಡರಾದ ಚಂದ್ರು ಹಲಗೇರಿ, ಗಾಳೆಪ್ಪ ದದೆಗಲ್, ಭೂ ನ್ಯಾಯ ಮಂಡಳಿ ಸದಸ್ಯ ಹಾಲೇಶ ಕಂದಾರಿ, ಗವಿಸಿದ್ದಪ್ಪ ಬೆಲ್ಲದ, ಶೇಖರ ಇಂದರಗಿ ಮುಂತಾದವರು ಉಪಸ್ಥಿತರಿದ್ದರು.


ಮೆಟ್ರಿಕ್ ನಂತರದ ೩ ವಸತಿ ನಿಲಯ ಮಂಜೂರು - ಸಂಗಣ್ಣ ಕರಡಿ
ಕೊಪ್ಪಳ ಡಿ. ೧೯  : ಕೊಪ್ಪಳ ವಿಧಾನಸಭಾ ಕ್ಷೇತ್ರದ ವಿಧ್ಯಾರ್ಥಿಗಳ ಬಹುದಿನದ ಬೇಡಿಕೆಯನ್ನು ಪರಿಗಣಿಸಿ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿ/ ವಿದ್ಯಾರ್ಥಿನಿಯರ ವಸತಿ ನಿಲಯಗಳನ್ನು ಪ್ರಾರಂಬಿಸಲು ಸರ್ಕಾರ ಮಂಜೂರಾತಿ ನೀಡಿದೆ ಎಂದು ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. 
  ಕೊಪ್ಪಳದಲ್ಲಿ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳು ವಸತಿ ನಿಲಯಗಳ ಕೊರತೆಯಿಂದ ಗ್ರಾಮೀಣ ಪ್ರದೇಶ ಮತ್ತು ಬೇರೆ ತಾಲೂಕಗಳಿಂದ ಗುಣಮಟ್ಟದ ಶಿಕ್ಷಣವನ್ನು ಅರಸಿ ಕೊಪ್ಪಳ ಬರುವವರಿಗೆ ವಸತಿ ನಿಲಯಗಳ ಕೊರತೆಯಿಂದ ತೊಂದರೆ ಅನುಭವಿಸುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಕೊಪ್ಪಳ ನಗರದಲ್ಲಿ ವಿದ್ಯಾರ್ಥಿಗಳ ೧೦೦, ವಿದ್ಯಾರ್ಥಿನಿಯರು ೧೦೦, ಅಳವಂಡಿ ಗ್ರಾಮದಲ್ಲಿ ವಿದ್ಯಾರ್ಥಿಗಳ ೧೦೦ ಸಂಖ್ಯೆಯುಳ್ಳ ಹೀಗೆ ಹೊಸದಾಗಿ ಒಟ್ಟು ೦೩ ವಸತಿ ನಿಲಯಗಳಿಗೆ ಮಂಜೂರು ನೀಡಲಾಗಿದೆ.   ಪ್ರತಿ ವಸತಿ ನಿಲಯಕ್ಕೆ ಅಗತ್ಯವಿರುವ ನಿಲಯಪಾಲಕ ಹುದ್ದೆ-೧, ಅಡುಗೆಯವರು-೩, ಅಡುಗೆ ಸಹಾಯಕರು-೨, ರಾತ್ರಿ ಕಾವಲುಗಾರರು-೧, ಒಟ್ಟು -೭ ಹುದ್ದೆಗಳಿಗೂ ಸಹ ಸರ್ಕಾರ ಮಂಜೂರಾತಿ ನೀಡಿದೆ.
  ವಸತಿ ನಿಲಯಗಳ ಮಂಜೂರಾತಿಗೆ ಶ್ರಮಿಸಿದ ಮುಖ್ಯ ಮಂತ್ರಿಗಳಾದ ಜಗದೀಶ ಶೆಟ್ಟರ್, ಸಮಾಜ ಕಲ್ಯಾಣ ಸಚಿವರಾದ ಡಾ|| ಎ. ನಾರಾಯಣಸ್ವಾಮಿ, ಜಿಲ್ಲಾ ಉಸ್ತುವರಿ ಸಚಿವರಾದ ಮುರಗೇಶ ನಿರಾಣಿಯವರಿಗೆ ಕೊಪ್ಪಳದ ಪಾಲಕರು ಮತ್ತು ವಿದ್ಯಾರ್ಥಿ/ನಿಯರ ಪರವಾಗಿ ಕೊಪ್ಪಳ ಶಾಸಕ  ಸಂಗಣ್ಣ ಕರಡಿ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.




Advertisement

0 comments:

Post a Comment

 
Top