PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಡಿ.೩೧ ಕೊಪ್ಪಳ ಜಿಲ್ಲೆಯ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಇಡಿ  ತರಬೇತಿ ಹೋದಿದ ಶಿಕ್ಷರಿಗೆ ಸರಕಾರಿ  ಪ್ರೌಢ ಶಾಲೆಗಳಲ್ಲಿನ ಗ್ರೇಡ್-೨ ಸಹ ಶಿಕ್ಷಕರ ಹುದ್ದೆಗೆ ಮತ್ತು ಬಿಪಿಇಡಿ ತರಬೇತಿ ಹೊಂದಿದ ದೈಹಿಕ ಶಿಕ್ಷಕರಿಗೆ-ಗ್ರೆಡ್-೨ ಶಿಕ್ಷಕರಿಗೆ ದೈಶಿ ಗ್ರೇಡ್-೧ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಜುಲೈ ೦೧, ೨೦೧೨ ರಲ್ಲಿದ್ದಂತೆ ವಿಷಯವಾರು ಅಂತಿಮ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಸಿದ್ದಪಡಿಸಿದೆ. 
ಈ ಜೇಷ್ಠತಾ ಪಟ್ಟಿಯನ್ನು ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸಲಾಗಿದೆ. ಜನೇವರಿ ೦೭, ೨೦೧೩ ರೊಳಗಾಗಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಡಳಿತ ವಿಭಾಗದ ಉಪನಿರ್ದೇಶಕರಾದ ಜಿ.ಹೆಚ್.ವೀರಣ್ಣ ತಿಳಿಸಿದ್ದಾರೆ.

Advertisement

0 comments:

Post a Comment

 
Top