PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ. ನ. ೨೮. ದಲಿತ ಸಾಹಿತ್ಯ ಪರಿಷತ್ತು ರಾಜ್ಯಘಟಕದಿಂದ ೨೦೧೦-೧೧ನೇ ಸಾಲಿನ ಉತ್ತಮ ದಲಿತ ಸಂಶೋಧನೆ ಪ್ರಕಾರದಲ್ಲಿ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಕನ್ನಡ ಉಪನ್ಯಾಸಕರಾದ ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್‌ರವರ "ಕೊಪ್ಪಳ ಜಿಲ್ಲೆಯ ಶಾಸನಗಳು ಮತ್ತು ಸಾಂಸ್ಕೃತಿಕ ಇತಿಹಾಸ" ಎಂಬ ಕೃತಿ ಆಯ್ಕೆಯಾಗಿದೆ.
 ಈ ಪ್ರಶಸ್ತ್ತಿಯನ್ನು ೨೦೧೨ ಡಿಸೆಂಬರ್ ೨೯ ಹಾಗೂ ೩೦ ರಂದು ಬೆಳಗಾವಿಯಲ್ಲಿ ನಡೆಯುವ ನಾಲ್ಕನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
    ಎರಡು ದಿನ ನಡೆಯುವ ಸಮ್ಮೇಳನಕ್ಕೆ ಜಿಲ್ಲೆಯಿಂದ ದಲಿತ ಸಾಹಿತಿಗಳು, ದಲಿತಪರ ಸಾಹಿತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿರುವ ಅವರು, ಸಮ್ಮೇಳನದಲ್ಲಿ ದಲಿತಪರ ಚಿಂತನೆ ನಡೆಯಲಿದೆ, ಎಲ್ಲರೂ ಸಮ್ಮೇಳನಕ್ಕೆ ಹೆಚ್ಚಿನ ಸಹಾಯ ಸಹಕಾರ ನೀಡುವಂತೆ ಕೋರಿದ್ದಾರೆ.

Advertisement

0 comments:

Post a Comment

 
Top