PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ :-  ದಿ.೨೧-೧೧-೨೦೧೨ ರಂದು ಬುಧುವಾರ   ಓಜನಹಳ್ಳಿ ಶ್ರೀ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಗ್ರಾಮ ಪಂಚಯತ ಓಜನಹಳ್ಳಿ ಹಾಗೂ ಯೂನೆಸೆಫ್ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ ಆಯೋಜಿಸಲಾಯಿತು.
    ತಾ.ಪಂ ಸದಸ್ಯರಾದ ಶ್ರೀ ರಮೆಶ ಚೌಡ್ಕಿಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಮುಕ್ಕಣ್ಣ ಹೋಸಗೇರಿ  ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ ಸದಸ್ಯರು, ಎಲ್ಲಾ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಮುಖ್ಯ ಗುರುಗಳು, ಸಹಶಿಕ್ಷಕರು, ಡಿ.ಸಿ.ಪಿ.ಯೂ ನ ಪ್ರತಿನಿಧಿಗಳು, ಅಂಗನವಾಡಿ ಮೇಲ್ವಿಚಾರಕಿ, ಕಾರ್ಯಕರ್ತೆಯರು, ಆಶಾಕಾರ್ಯರ್ತೆಯರು, ಗ್ರಾ.ಪಂ ಸಿಬ್ಬಂದಿ ಬಾಲಿಕಾ ಸಂಘಗಳ ಸದಸ್ಯರು ಯುವಚೇತನ ಯುವಕ ಮಂಡಳಿ ಸದಸ್ಯರು ಗ್ರಾಮದ ಗುರು ಹಿರಿಯರು ಭಾಗವಹಿಸಿದ್ದರು.
    ಪ್ರಸ್ತಾವಿಕವಾಗಿ ಮಾತನಾಡಿದ ಸಮುದಾಯ ಸಂಘಟಕರಾದ ಆನಂದ.ಎನ್.ಹಳ್ಳಿಗುಡಿ  ಹಿಂದಿನ ಮಕ್ಕಳ ಹಕ್ಕುಗಳ ಗ್ರಾಮ ಸಭೆ ನಡಾವಳಿಗಳ ಪರಿಶೀಲನೆ, ಮಕ್ಕಳ ಅಭಿವೃದ್ದಿ ಅಂಕಿ ಅಂಶ ಪಟ್ಟಿ ವರದಿಯನ್ನು ಸಭೆಗೆ ಮಂಡಿಸಿದರು. ತಾಲೂಕ ಪಂಚಾಯತ ಸದಸ್ಯರು, ಗ್ರಾ.ಪಂ ಮಕ್ಕಳ ಬೆಡಿಕೆಗಳಾದ ಶಾಲಾ ಕಂಪೌಂಡ, ಅಂಗನವಾಡಿ ಕೇಂದ್ರಗಳ ದುರಸ್ಥಿ, ಮಾಡಿಕೊಟ್ಟಿದನ್ನು ಸ್ಮರಿಸಿದರು.  ಪಂಚಾಯತ ಪ್ರತಿವರ್ಷ ಗ್ರಾಮ ಸಭೆಯನ್ನು ನಡೆಸಿ ಮಕ್ಕಳ ಬೇಡಿಕೆ ಸಮಸ್ಯೆಗಳನ್ನು ಪರಿಶೀಲಿಸಬೇಕು. ದುಡಿತದಿಂದ ಬಾಲ್ಯ ವಿವಾಹ ಮುಕ್ತ ಮಕ್ಕಳ ಅಭಿವೃದ್ದಿ ಸಾಧಿಸುವಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ಕಾರ್ಯ ನಿರ್ವಹಿಸಬೇಕೆಂದರು. ಬಾಲ ಕಾರ್ಮಿಕತೆ ಬಾಲ್ಯ ವಿವಾಹ ಜಿತ ಪದ್ದತಿ ಅನಾಥ, ಅಂಗವಿಕಲ, ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳ ರಕ್ಷಣೆ ಪೋಷಣೆಗೆ ಸಂಭದಿಸಿದಂತೆ ಗ್ರಾಮ ಪಂಚಾಯತ ಅಥವಾ ಮಕ್ಕಳ ಸಹಾಯವಾಣಿ ೧೦೯೮ ಅಥವಾ ೯೪೪೮೪೭೬೯೬೫ ಗೆ ಕರೆ ಮಾಡಿ ಮಾಹಿತಿ ನೀಡಲು ತಿಳಿಸಿದರು. ಮಕ್ಕಳ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳು ನಿರ್ಲಕ್ಷ ವಹಿಸುವುದು ಇಚ್ಚಾಶಕ್ತಿ ಕೋರತೆ ತೋರಿಸುವುದನ್ನು ಟಿಕಿಸಿದರು. ಸಮುದಾಯದ ಅಭಿವೃದ್ದಿಯ ಜೋತೆಗೆ ಮಕ್ಕಳ ಶಿಕ್ಷಣ ಆರೋಗ್ಯ ರಕ್ಷಣಾ ಬಗ್ಗೆ ಕಾಳಜಿ ವಹಿಸಲು ಸಭೆಗೆ ಕೋರಿದರು. ಉದ್ಘಾಟನಾ ಭಾಷಣ ಮಾಡಿದ ತ.ಪಂ ಸದಸ್ಯರು ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೇಲ್ಲರ  ಹೊಣೆ ಪಾಲಕರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೆಕೆಂದು ಕರೆ ನೀಡಿದರು.
    ನರೆಗಲ್ ಶಾಲಾ ಮಕ್ಕಳು ಶಾಲಾ ಕಾಂಪೌಂಡ ಕೊಠಡಿಗಳ ವ್ಯವಸ್ಥೆ ಆಟದ ಸಾಮಾಗ್ರಿಗಳ ಬೇಡಿಕೆ ಮಂಡಿಸಿದರು. ಶಿಕ್ಷಕರು ಆಟದ ಸಾಮಗ್ರಿ ಅನುಧಾನ ಬಳಸಿ ಆಠೋಪಕರಣ ಕೊಡಿಸುವುದಾಗಿ ತಿಳಿಸಿದರು. ಇಲಾಖೆಯ ಗಮನಕ್ಕೆ ಉಳಿದ ವಿಷಯಗಳ ಬಗ್ಗೆ ತಿಳಿಸುವುದಾಗಿ ಹೇಳಿದರು. ಗ್ರಾ.ಪಂ ಎನ್.ಆರ್.ಇ.ಜಿ ಅಡಿ ಕಂಪೌಂಡ ಕಾಮಗಾರಿ ಕೈಗೆತ್ತಿಕೊಳ್ಳುದಾಗಿ ತಿಳಿಸಿದರು. ಯತ್ನಟ್ಟಿ ಶಾಲಾ ಮಕ್ಕಳು ಗೆಟ್ ವ್ಯವಸ್ಥೆ ಶಿಕ್ಷಕರ ಕೊರತೆಯ ಬಗ್ಗೆ ಪ್ರಶ್ನಿಸಿದಾಗ ಎಸ್.ಡಿ.ಎಂ.ಸಿ ಅನುಧಾನದಿಂದ ಗೆಟ್ ಹಾಗೂ ಶಿಕ್ಷಣ ಇಲಾಖೆಗೆ ಹೆಚ್ಚುವರಿ ಶಿಕ್ಷಕರನ್ನು ನೇಮಿಸುವಂತೆ ತಿಳಿಸುವುದಾಗಿ ತಾಲೂಕ ಪಂಚಾಯತ ಸದಸ್ಯರು ತಿಳಿಸಿದರು. ಟಣಕನಕಲ್ ಹಾಗೂ ಹುಚ್ಚಿರೇಶ್ವರ ಕ್ಯಾಂಪ್ ವಿದ್ಯಾರ್ಥಿಗಳು ಶಾಲೆಗೆ ಹೋಗುವ ದಾರಿಯ ವ್ಯವಸ್ಥೆ ಶಾಲಾ ಕಾಂಪೌಂಡ ನಿರ್ಮಾಣ ಬೇಡಿಕೆ ಇಟ್ಟರು. ಪಿ.ಡಿ.ಓರವರು ಇದೇ ವರ್ಷದಲ್ಲಿ ಕಾಮಗಾರಿಯನ್ನು ಕ್ರೀಯಾಯೋಜನೆಯಲ್ಲಿ ಅಳವಡಿಸುವುದಾಗಿ ತಿಳಿಸಿದರು.
    ಓಜನಹಳ್ಳಿ ಶಾಲಾ ವಿದ್ಯಾರ್ಥಿಗಳು ಹಿಂದಿನ ಬೇಡಿಕೆಗಳನ್ನು ಈಡೇರಿಸದೆ  ಈ ಸಲದ ಗ್ರಾಮ ಸಭೆ ಅವಶ್ಯಕತೆ ಏನು? ಆಟದ ಮೈದಾನ, ಕೊಠಡಿಗಳ ಕೊರತೆ , ೮ ನೇ ತರಗತಿಯಾದರು ಬೆಂಚುಗಳು ಇಲ್ಲ, ಕಂಪ್ಯೂಟರ್ ಗಳಿಲ್ಲ, ಬಾಲಕಿಯರಿಗೆ ಶೌಚಾಲಯದ ವ್ಯವಸ್ಥೆ ಇಲ್ಲ, ಎಂದು ಅಳಲು ತೋಡಿಕೊಂಡರು  ತಾಲೂಕ ಪಂಚಾಯತ, ಗ್ರಾ.ಪಂ ರವರು ಉತ್ತರಿಸಿ ಹಂತ ಹಂತವಾಗಿ ಸೌಲಭ್ಯವನ್ನು ಈಡೆರಿಸುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಓಜನಹಳ್ಳಿ  ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪಿ.ಡಿ.ಓ ಶ್ರೀಮತಿ ಮಂಜುಳಾ ಪಾಟೀಲ ಸ್ವಾಗತಿಸಿದರು.  ಶಿಕ್ಷಕರಾದ ನವೀನ ಅಂಗಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಉಮೆಶರವರು. ವಂದಿಸಿದರು. 

Advertisement

0 comments:

Post a Comment

 
Top