PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ :-  ಡಿವಾಯನ್ ಪಾರ್ಕ್ ಟ್ರಸ್ಟ್ ಸಾಲಿ ಗ್ರಾಮದ ಅಂಗ ಸಂಸ್ಥೆಯಾದ ವಿವೇಕ ಜಾಗೃತ ಬಳಗ ಕೊಪ್ಪಳ ದಿ ೨೪ ಶನಿವಾರ ಸಾಯಂಕಾಲ ೪ ಗಂಟೆಗೆ (ಸುಕೋ ಬ್ಯಾಂಕ್ ಎದುರುಗಡೆ ಹೊಸಪೇಟ ರೋಡ ) ಶ್ರೀ ಗವಿಸಿದ್ದೇಶ್ವರ ಕನ್ವನ್ಸೆನ್ ಹಾಲ್  ಕೊಪ್ಪಳದಲ್ಲಿ ವಿವೇಕ ಸಂಪದ ಓದುಗರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
    ಈ ಸಮಾವೇಶದ ಸಾನಿಧ್ಯವನ್ನು ಪೂಜ್ಯ ಶ್ರೀ ಚೈತನ್ಯಾನಂದ ಸ್ವಾಮಿಜಿ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ ಅಧ್ಯಕ್ಷರು ಕೊಪ್ಪಳ ಇವರು ವಹಿಸುವರು ಹಾಗೂ ಡಿವಾನ್ ಪಾರ್ಕ್ ಟ್ರಸ್ಟ್ ಸಾಲಿ ಗ್ರಾಮದ ವಲಯ ಅಧಿಕಾರಿ ಶಿವಶಂಕರಪ್ಪ ಬ್ಯಾಡಗಿ, ಜ್ಞಾನಜ್ಯೋತಿ ಅಧಿಕಾರಿಣಿಯಾದ ಶ್ರೀಮತಿ ಆಶಾ ಗುಜ್ಜರ ಹುಬ್ಬಳ್ಳಿ, ಅಂತರಾಳ ಅಧಿಕಾರಿಗಳು ಕೊಪ್ಪಳ ಜಿಲ್ಲೆಯ  ಶರಣಪ್ಪ ಬಂಡಿ  ಇವರು ಆಗಮಿಸುವರು. ಕಾರಣ ಶ್ರೀ ರಾಮಕೃಷ್ಣ ಪರಮಹಂಸರು, ಶ್ರೀ ಶಾರದಮಾತೆ ಹಾಗೂ ಶ್ರೀ ವಿವೇಕಾನಂದರ ಅಭಿಮಾನಿಗಳು ಎಲ್ಲರು ಈ ಓದುಗರ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಕೋರಲಾಗಿದೆ.
    ಹಾಗೂ ಡಿವಾಯನ್ ಪಾರ್ಕ್ ಟ್ರಸ್ಟ್ ಸಾಲಿ ಗ್ರಾಮದ ಅಂಗ ಸಂಸ್ಥೆಯಾದ ವಿವೇಕ ಜಾಗೃತ ಬಳಗ ಕೊಪ್ಪಳದ ಹೋಸ ಬಳಗ ರಚನೆ ಕಾರ್ಯಕ್ರಮವು ಜರಗುವುದು. ಕಾರಣ ಬಳಗದ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಬೆಕೆಂದು ಕೊರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ :- ೯೪೪೮೧೨೦೩೭೯,   ೯೪೪೨೧೪೨೭೪,

                                      

Advertisement

0 comments:

Post a Comment

 
Top