ಪ್ರತಿಭಟನಾ ಸ್ಥಳಕ್ಕೆ ಜಿ.ಪಂ.ಅಧ್ಯಕ್ಷ ರಾಘವೇಂದ್ರ ಹಿಟ್ನಾಳ ಭೇಟಿ
ಕೊಪ್ಪಳ.ನ. ೨೧. ಇಲ್ಲಿನ ಬಹದ್ದೂರ ಬಂಡಿ ರಸ್ತೆಯಲ್ಲಿರುವ ಸರ್ವೆ ನಂ. ೪೩೮ರ ಕೊಳಗೆರಿ ಮನೆಗಳಲ್ಲಿ ವಾಸವಾಗಿರುವ ಕೊಳಗೆರಿ ನಿವಾಸಿಗಳು ನಡೆಸಿರುವ ಧರಣಿ ಸ್ಥಳಕ್ಕೆ ಜಿ.ಪಂ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ್ ಭೇಟಿ ನೀಡಿ ತಮ್ಮ ಪ್ರತಿಭಟನೆಗೆ ಬೆಂಬಲ ಕೋರುವುದಾಗಿ ಹೇಳಿದರು.
ಸುಮಾರು ನಾಲ್ಕೈದು ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವ ನಿಮಗೆ ನ್ಯಾಯ ಕೊಡಿಸುವ ಭರವಸೆಯನ್ನೂ ನೀಡಿದ ಅವರು, ಈಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿಯೂ ಹೇಳಿದರು. ತಾವು ಸದಾ ತಮ್ಮೊಂದಿಗಿದ್ದು, ತಮಗೆ ಆಗುತ್ತಿರುವ ಅನ್ಯಾಯದ ವಿರುಧ್ದ ಜಿಲ್ಲಾಧಿಕಾರಿಗಳ ಜೊತೆ ಮುಕ್ತವಾಗಿ ಚರ್ಚಿಸಿ ನ್ಯಾಯ ಕೊಡಿಸುವ ಭರವಸೆ ನೀಡಿದರು.
ಧರಣಿ ಕುಳಿತ ತಾವೆಲ್ಲರೂ ಸೇರಿ ಜಮೀನು ಖರೀದಿಸಿದ್ದು ನಗರದ ಜನತೆಗೆ ತಿಳಿದಿದೆ. ಈ ಹಿಂದೆ ಕಾಂಗ್ರೆಸ ಸರಕಾರವಿದ್ದ ಸಂದರ್ಭದಲ್ಲಿ ಈ ಯೋಜನೆ ಜಾರಿಗೆ ಬಂದ್ದಿದ್ದು ಇಲ್ಲಿ ವಾಸಿಸುತ್ತಿರುವ ಯಾರು ಶ್ರಿಮಂತರಲ್ಲ ಎಲ್ಲರೂ ಕೂಲಿ ಮಾಡಿಕೊಂಡು ಜಿವನ ಸಾಗಿಸುತ್ತಿರುವವರಾಗಿದ್ದೀರಿ ನೀಮಗೆ ಯಾವುದೇ ರೀತಿ ತೊಂದರೆ ಯಾಗದ ಹಾಗೆ ನೊಡಿಕೊಳ್ಳುತ್ತೆನೆಂದು ಭರವಸೆ ನೀಡಿದರು.
ಈ ಸಂಧರ್ಬದಲ್ಲಿ ಜಿ.ಪಂ.ಮಾಜಿ ಸದಸ್ಯ ಪ್ರಸನ್ನ್ ಗಡಾದ, ತಾಲೂಕಾ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಬಿ.ನಾಗರಳ್ಳಿ, ನಗರ ಘಟಕ ಅಧ್ಯಕ್ಷರಾದ ಮರ್ದಾನಸಾಬ ಅಡ್ಡೆವಾಲೆ, ಇಂದ್ರಾ ಬಾವಿಕಟ್ಟಿ, ಅಫ್ಸರ್ ಸಾಬ ಅತ್ತಾರ, ದ್ಯಾಮಣ್ಣ ಚಿಲುವಾಡಗಿ, ಮಾನ್ವಿ ಪಾಶಾ. ಅಕ್ಬರ ಪಾಶಾ ಪಲ್ಟನ್, ಸರೋಜ ಬಾಕ್ಳೆ, ನೂರಜಾನ್‌ಬಿ ನಿರಲಗಿ ಹಾಗು ಬಡ ಸ್ಲಂ ನಿವಾಸಿಗಳ ಹೊರಾಟ ಸಮಿತಿ ಅಧ್ಯಕ್ಷರಾದ ಈಶಪ್ಪ ಹೂಗಾರ್, ಪಂಚ್ ಕಮಿಟಿ ಅಧ್ಯಕ್ಷರಾದ ಜಾಫರ್ ಸಾಬ, ಅಕ್ಬರ ಪೊಲಿಸ್‌ಮನಿ, ಬಶಿರ್ ಅತ್ತಾರ್ ರುಸ್ತುಂ ಹಾಗು ಅಕ್ಬರ, ಜಾದವ್ ಮುಂತಾದವರು ಸೆರಿದಂತೆ ನೂರಾರು ಮಹಿಳೆಯರು ಉಪಸ್ತಿತರಿದ್ದರು.
0 comments:
Post a Comment