PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ೨೦ : ಹಿಂದೂಳಿದ ಕೊಪ್ಪಳ ಜಿಲ್ಲೆಯ ಕೊಪ್ಪಳ ನಗರ ಮತ್ತು ಸುತ್ತಮುತ್ತಲಿನ ಜನತೆಗೆ ಟ್ಯಾಂಕರ್ ಮೂಲಕ ಉಚಿತವಾಗಿ ಕುಡಿಯುವ ನೀರು ಪೂರೈಕೆ ಮಾಡಿ ಜನರಿಂದ ನೀರ್‌ಸಾಬ್ ಬಿರುದು ಪಡೆದಿರುವ ಸಯ್ಯದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಂ.ಸಯ್ಯದ್ ರವರಿಗೆ ನವದೆಹಲಿಯಲ್ಲಿ ನ್ಯಾಷನಲ್ ಯುನಿಟಿ ಕಾನ್ಫ್‌ರೇನ್ಸ್ ವತಿಯಿಂದ ಇಂದಿರಾ ಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿಯನ್ನು ನೀಡಿ ಸತ್ಕರಿಸಲಾಯಿತು.
ಕೊಪ್ಪಳದ ನೀರ್‌ಸಾಬ್ ಎಂದೇ ಜನಪ್ರೀಯತೆ ಹೊಂದಿರುವ ಹಾಗೂ ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ದಿ.ಇಂದಿರಾ ಗಾಂಧಿಯವರ ೯೫ನೇ ಜನ್ಮದಿನದ  ಸಂದರ್ಭದಲ್ಲಿ ನವದೆಹಲಿಯಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ರಾಷ್ಟ್ರದ ಹಲವು ಗಣ್ಯರಿಗೆ ಅವರ ಸಮಾಜ ಸೇವೆಗಾಗಿ ಕೊಡಮಾಡಿದ ಇಂದಿರಾ ಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿಯನ್ನು ದೆಹಲಿಯ ನ್ಯಾಷನಲ್ ಯುನಿಟಿ ಕಾನ್ಫ್‌ರೇನ್ಸ್‌ನ ಪ್ರಧಾನ ಕಾರ್ಯದರ್ಶಿಯಾದ ಗುರೇಂದ್ರ ಸಿಂಗ್‌ರವರು ಕೊಪ್ಪಳದ ಕೆ.ಎಂ.ಸಯ್ಯದ್ ರವರಿಗೆ ನೀಡಿ ಗೌರವಿಸಿದರು. 
ಅಭಿನಂದನೆ : ಸಯ್ಯದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಂ.ಸಯ್ಯದ್ ಅವರಿಗೆ ಇಂದಿರಾ ಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿಗೆ ಲಭಿಸಿರುವುದಕ್ಕೆ ಸಯ್ಯದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಪದಾಧೀಕಾರಿಗಳು, ಸಯ್ಯದ್ ಅಭೀಮಾನಿಗಳ ಸಂಘ, ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹರ್ಷ ವ್ಯಕ್ತ ಪಡಿಸಿ ಅಭಿನಂದಿಸಿದ್ದಾರೆ

Advertisement

0 comments:

Post a Comment

 
Top