PLEASE LOGIN TO KANNADANET.COM FOR REGULAR NEWS-UPDATES


    ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದಂ ವಿದ್ಯಾರ್ಥಿನಿ ಕು.ಮೇಘಾನಾ ಆನಂದ ಜವಾಹರಲಾಲ ನೆಹರು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನೆಹರು ಅವರಿಗೆ ಮಕ್ಕಳೆಂದರೆ ತುಂಬಾ ಪ್ರೀತಿ ಆದ್ದರಿಂದ ಅವರ ಆದರ್ಶವನ್ನು ಶಿಸ್ತು ಸಂಯಮ ಸೌಹಾರ್ದತೆಯಿಂದ ಬೆಳಸಿಕೊಂಡು ಅವರ ಕನಸು ನನಸು ಮಾಡೋಣ ದೇಶ ಸೇವೆಗೆ ನಮ್ಮ ನಮ್ಮ ಕೈಲಾದಷ್ಟು ಮುಂದಾಗೋಣ ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ಪ್ರತಾಪ ನಿಶಾ ಅತ್ತನೂರ ವೀರಪ್ಪ ಮಹಾಲಕ್ಷ್ಮಿ ಕುಂಬಾರ, ರಾಜೇಶ ಓಜನಹಳ್ಳಿ, ಸ್ವಪ್ನಾ ಬೆಲ್ಲದ ತಿರ್ಥೇಶ ಮೇದಾ ನಿರ್ಮಲಾ ತಳವಗೇರ, ದೀಪಿಕಾ, ಲಕ್ಷ್ಮೀ, ಬಡಿಗೇರ, ಶ್ರೀದಾ ಬಡಿಗೇರ, ಆಶಾ ಅತನೂರು ಶ್ರೀನಿವಾಸ, ಸಂತೋಷ, ಬಡಿಗೇರ, ಈ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳ ಸ್ಥಾನವನ್ನು ಅಲಂಕರಿಸಿದರು.
    ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಆರ್.ಹೆಚ್.ಅತ್ತನೂರ ಹಾಗೂ ಎಲ್ಲ ಶಿಕ್ಷಕ ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕು.ಮಾರುತಿ.ಕೆ.ಎಚ್ ನಿರೂಪಿಸಿದರು. ಆಶಾ ದೊಡ್ಡಮನಿ ಪ್ರಾರ್ಥಿಸಿದರು. ನಾಗರಾಜ.ಬಿ.ಕೆ ಸ್ವಾಗತಿಸಿದರು. ಪಾಮೆಶ ದೊಡ್ಡಮ ವಂದಿಸಿದರು. ಕೊನೆಯಲ್ಲಿ ಮಕ್ಕಳಿಗೆ ಸಿಹಿ ವಿತರಿಸಲಾಯಿತು.


Advertisement

0 comments:

Post a Comment

 
Top