ಕೊಪ್ಪಳ.ನ.೧೫. ಇಂದಿನ ಮಕ್ಕಳೆ ಈ ನಾಡಿನ ಭಾವಿ ಪ್ರಜೆಗಳಾಗಿದ್ದು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರ ಮುಂದಿನ ಭವಷ್ಯ ಉಜ್ವಲಗೊಳಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದು ಇದನ್ನು ಅರಿತು ಶಿಕ್ಷಕರು ತಮ್ಮ ಜವಾಬ್ದಾರಿ ಪ್ರಾಮಾಣಿಕವಾಗಿ ನಿಭಾಯಿಸಬೆಕೆಂದು ಜೆ.ಡಿ.ಎಸ್. ತಾಲುಕಾಧ್ಯಕ್ಷ ಅಂದಪ್ಪ ಮರೆಬಾಳ ಹೇಳಿದರು.
ಅವರು ಗುರುವಾರ ಬೆಳಿಗ್ಗೆ ನಗರದಲ್ಲಿರುವ ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಮಿಲ್ಲತ್ ಶಾಲೆಯಲ್ಲಿ ಎರ್ಪಡಿಸಿದ ಮಕ್ಕಳ ದಿನಾಚರಣೆ ಸಮಾರಂಭದ ಉದ್ಘಾಟನೆಯನ್ನು ನೆರವೆರಿಸಿ ಮಾತಾನಾಡುತ್ತ ಮಕ್ಕಳಲ್ಲಿ ಛಲವಿರಬೇಕು ಛಲದಿಂದ ಭವಿಷ್ಯ ಉಜ್ವಲಗೊಳ್ಳುತ್ತದೆ. ಸತತ ಪರಿಶ್ರಮದಿಂದ ಯಶಸ್ಸು ಕಾಣಲು ಸಾದ್ಯಾ ಎಂದರು.
ಮುಂದುವರೆದು ಮಾತಾನಾಡಿ ಜಿವನದಲ್ಲಿ ಆಗುಹೊಗುವ ಬಗ್ಗೆ ಬೇಸರ ಪಡಬಾರದು ಎಲ್ಲವು ಸಹಜವಾಗಿ ತೆಗದು ಕೊಳ್ಳುವ ಪ್ರವರ್ತಿ ಬೆಳೆಸಿಕೊಳ್ಳಬೆಕು, ಸೊಲು ಗೆಲುವು ಸಮಾನವಾಗಿ ಸ್ವಿಕರಿಸಬೆಕು, ಸೋಲೆ ಗೆಲುವಿನ ಮೂಲವಾಗಿದ್ದು ಅದನ್ನ ಅರಿತುಕೊಂಡು ಛಲದಿಂದ ಮುನ್ನುಗಬೇಕು ಅಂದಾಗ ಮಾತ್ರ ಯಶಸ್ಸು ಕಾಣಲು ಸಾದ್ಯಾ ಎಂದು ಜೆ.ಡಿ.ಎಸ್. ತಾಲುಕಾಧ್ಯಕ್ಷ ಅಂದಪ್ಪ ಮರೆಬಾಳ ಹೆಳಿದರು.
ಮುಖ್ಯ ಅಥಿತಿಗಳಾಗಿ ಜೆ.ಡಿ.ಎಸ್.ನ ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷ ಸೈಯದ್ ಹಜರತ್ ಪಾಶಾ ಖಾದ್ರಿ ಮಾತಾನಾಡಿ ಪ್ರತಿಯೊಬ್ಬ ವಿಧ್ಯಾರ್ಥಿಗಳ ಬೆನ್ನ ಹಿಂದೆ ಗುರುವಿರಬೆಕು ಮುಂದೆ ಗುರಿ ಇರಬೇಕು ಶಿಕ್ಷಕರು ಮಕ್ಕಳಿಗೆ ಭೇಧ ಭಾವ ಮಾಡದೆ ಸಮಾನವಾಗಿ ಒಳ್ಳೆಯ ಶಕ್ಷಣ ನಿಡಿ ಈ ದೇಶಕ್ಕೆ ಉತ್ತಮ ಪ್ರಜೆಗಳನ್ನಾಗಿ ನಿಮಾರ್ಣ ಮಾಡುವ ನಿಮಾರ್ಪಕರು ಶಿಕ್ಷಕರಾಗಿದ್ದಾರೆಂದು ಜೆ.ಡಿ.ಎಸ್.ನ ಲ್ಪಸಂಖ್ಯಾತರ ಜಿಲ್ಲಾಧ್ಯಕ್ಷ ಸೈಯದ್ ಹಜರತ್ ಪಾಶಾ ಖಾದ್ರಿ ಹೇಳಿದರ.
ಸಮಾರಂಭದ ಅಧ್ಯಕ್ಷತೆಯನ್ನು ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಮಿಲ್ಲತ್ ಶಾಲೆಯ ಮುಖ್ಯ ಸಲಹೆಗಾರ ಎಂ. ಸಾದಿಕ ಅಲಿ ವಹಿಸಿದ್ದರು. ಇದೆ ಸಂದರ್ಭದಲ್ಲಿ ಎರ್ಪಡಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ವಿಧ್ಯಾರ್ಥಿಗಳಿಗೆ ಸೈಯದ್ ಫೌಂಡೆಶನ್ ಅಧ್ಯಕ್ಷ ಕೆ.ಎಂ.ಸೈಯದ್ ಬಹುಮಾನ ವಿತರಣೆ ಮಾಡಿದರು. ವೇದಿಕೆ ಮೆಲೆ ಶಾಲೆಯ ಆಢಳಿತಾಧಿಕಾರಿ ಸೈಯದ್ ಯಜದಾನಿ ಪಾಶಾ ಖಾದ್ರಿ, ಮುಖ್ಯ ಶಿಕ್ಷಕಿ ಶ್ರೀಮತಿ ಆಶಾಬೇಗಂ ಅಲ್ಲದೆ ನಿರ್ಲಗಿಯ ಬಸನಗೌಡ ಉಪಸ್ತಿತರಿದ್ದರು ಸಹಶಿಕ್ಷಕ ಶ್ರೀನಿವಾಸ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರೆ ಸಹಶಿಕ್ಷಕಿ ರಾಧಾ ಬಡಿಗೇರ ಸ್ವಾಗತಿಸಿದರು. ಸಹ ಶಿಕ್ಷಕಿ ಆಫ್ರೀನ ಬೇಗಂ ನಿರೂಪಿಸಿದರು.
0 comments:
Post a Comment