PLEASE LOGIN TO KANNADANET.COM FOR REGULAR NEWS-UPDATES


ಪಂಚಮಸಾಲಿ ಜಿಲ್ಲಾ ಯುವ ಘಟಕ ಕೊಪ್ಪಳ ಇವರಿಂದ ೧೮೯ ನೇ ವೀರರಾಣಿ ಕಿತ್ತೂರ ಚೆನ್ನಮ್ಮ ಜಯಂತೋತ್ಸವ ಮತ್ತು ಇಷ್ಟಲಿಂಗ ಪೂಜಾ ಕಾರ್ಯಕ್ರಮ.
ಕೊಪ್ಪಳ : ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಜಿಲ್ಲಾ ಯುವ ಘಟಕದಿಂದ ಕೊಪ್ಪಳದ ಮಹೇಶ್ವರ ದೆವಸ್ಥಾನದಲ್ಲಿ ಬೆಳಗ್ಗೆ ಇಷ್ಠಲಿಂಗಾ ಪೂಜಾ ಕಾರ್ಯಕ್ರಮವನ್ನು ಬಸಯ್ಯ ಸಸಿಮಠ ಸ್ವಾಮಿಗಳು ನೆರವೇರಿಸಿಕೊಟ್ಟರು. ನಂತರ ವೀರರಾಣಿ ಕಿತ್ತೂರ ಚೆನ್ನಮ್ಮ ಭಾವಚಿತ್ರ ಮೆರವಣಿಗೆಗೆ ಪುರಸಭೆಯ ಸದಸ್ಯರಾದ ಈರಣ್ಣ ಹಂಚಿನಾಳ ಇವರು ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಮಹಿಳೆಯರಿಂದ ಕಳಸ ಮತ್ತು ಬೈಕ ರ್‍ಯಾಲಿ ಡೊಳ್ಳು ಕುಣಿತಗಳಿಂದ ಸಮಾಜ ಬಾಂದವರು ಮಹೇಶ್ವರ ದೆವಸ್ಥಾನದಿಂದ ಜವಾಹರರೋಡ ಮತ್ತು ಅಶೋಕ ಸರ್ಕಲ ಮುಖಾಂತರ ಚನ್ನಮ್ಮನ ಭಾವ ಚಿತ್ರ ಮೆರವಣಿಗೆ ಸಾಗಿ, ವೀರರಾಣಿ ಕಿತ್ತೂರ ಚೆನ್ನಮ್ಮ ಸರ್ಕಲನಲ್ಲಿ ವೀರರಾಣಿ ಕಿತ್ತೂರ ಚೆನ್ನಮ್ಮ ವೃತ್ತವನ್ನು ಸರ್ಕಾರಿ ವಕೀಲರಾದ ಬಿ. ಎಸ್ ಪಾಟೀಲ ಮತ್ತು ಪತ್ರಪ್ಪ ಪಲ್ಲೇದ ಅನಾವರಣ ಮಾಡಿದರು. 
ನಂತರ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಶೇಖರಪ್ಪ ಮುತ್ತೇನವರ ಮಾತನಾಡಿ ವೀರರಾಣಿ ಕಿತ್ತೂರು ಚೆನ್ನಮ್ಮ ನವರ ಬಗ್ಗೆ ಸಮಾಜವಷ್ಟೆ ಅಲ್ಲದೆ ಅವರ ಕುರಿತು ಮಹಾತ್ಮ ಗಾಂಧಿಜೀಯವರು ೧೯೨೪ ರಲ್ಲಿ ನಡೆದ ಅಖಿಲ ಭಾರತ ಕಾಂಗ್ರೇಸಿನ ಅಧಿವೇಶನ್ ನಾಯಕತ್ವದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮನವರು ಎಂದರೆ ಧಾರವಾಡದ ಆಗಿನ ಚಿಲ್ಲಾಧಿಕಾರಿಯಾದ ತ್ಯಾಕರೆಯನ್ನು ವದಿಸಿ ಕಿತ್ತೂರಿನಲ್ಲಿ ಸ್ವಾತಂತ್ರ್ಯದ್ವಜವನ್ನು ಹಾರಿಸಿದಳು. ಮುಖ್ಯವಾಗಿ ರಾಣಿಚೆನ್ನಮ್ಮನವರ ಬ್ರೀಟಿಷರ ವಿರುದ್ದದ ಕದನವು ಇಡೀ ನಾಡಿನ ಜನತೆಗೆ ಮಾದರಿಯಾಗಿತ್ತು. ಈ ದೆಸದ ಬ್ರೀಟಿಷರ ವಿರುದ್ದದ ಸಮರಕ್ಕೆ ಸ್ಪೂರ್ತಿಯಾಗಿತ್ತು ಎಂದು ಹೇಳಿದರು.  ಇದೆ ಸಂದರ್ಬದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮನವರ ವಿಜಯೋತ್ಸವ ಕಾರ್ಯಕ್ರಮವನ್ನು ಸರಕಾರಿ ಕಾರ್ಯಕ್ರಮವಾಗಬೇಕೆಂದು ಮತ್ತು ಬೆಳಗಾವಿಯ ಸುವರ್ಣ ಸೌಧದ ಎದುರುಗಡೆ ಚನ್ನಮ್ಮನವರ ಪ್ರತಿಮೆಯನು ಸರಕಾರ ಸ್ಥಾಪನೆಮಾಡಬೇಕು. ವಿಜಾಪೂರದ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಕಿತ್ತೂರ ರಾಣಿ ಚೆನ್ನಮ್ಮನ ಅದ್ಯಾಯನ ಪೀಠ ಸ್ಥಾಪಿಸಬೇಕು. ಆಮೂಲಕ ವೀರ ಮಾತೆ ರಾಣಿಚೆನ್ನಮ್ಮವರ ವಿಸ್ವ ಮಾನವತೆ ವಿಚಾರಧಾರೆಯನ್ನು ಇಂದಿನ ಜನಾಂಗಕ್ಕೆ ಮನವರಿಕೆ ಮಾಡುವ ಕೆಲಸ ಮಾಡಿದಂತಾಗುತ್ತದೆ ಎಂದು ಶೇಖರಪ್ಪ  ಮುತ್ತೇನವರು ತಿಳಿಸಿದರು. 
ಈ ಸಂದರ್ಬದಲ್ಲಿ ಕೊಪ್ಪಳ ತಾಲೂಕ ಅಧ್ಯಕ್ಷರಾದ ದೇವರಾಜ ಹಾಲಸಮುದ್ರರವರು ಮತ್ತು ಯಲಬುರ್ಗಾ  ತಾಲೂಕ ಅಧ್ಯಕ್ಷರಾದ ಮಲ್ಲಿಕರ್ಜುನ ರಾಮಶೆಟ್ಟಿ ಕೊಪ್ಪಳ ನಗರ ಘಟಕದ ಅಧ್ಯಕ್ಷರಾದ ಗವಿಸಿದ್ದಪ್ಪ ಪಲ್ಲೆದ, ಗಂಗಾವತಿ ತಾಲೂಕ ಅಧ್ಯಕ್ಷರಾದ ಬಸವರಾಜ ಕೋರಿ, ಶರಣಪ್ಪ ಆನೆಗುಂದಿ, ವೀರಣ್ಣ ಚಾಕಲಬ್ಬಿ, ಪ್ರಕಾಶ ಪರ್ವಗೌಡರ, ಮಾರ್ಕಂಡೇಶ ಚಿತವಾಡಗಿ, ದೊಡ್ಡಬಸಪ್ಪ ಕಂಪ್ಲಿ, ಸುರೇಶ ಹಳೇಗೌಡರ, ಶಂಕರಗೌಡ ಪಾಟೀಲ, ಮುತ್ತಣ್ಣ ಬಳೂಟಗಿ, ಹಂಪಣ್ಣ ಕೋರಿ, ಶಿದ್ದಪ್ಪ ಪತ್ತಾರ, ರತ್ನಾ ಪಾಟೀಲ, ಅನಿತಾ ಮುರಮಿ, ವಿನಯ ಪಾಟೀಲ, ಪ್ರಕಾಶ ಮಿಠಾಯಿ ಮುಂತಾದವರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top