ರಾಜ್ಯದ ಕೊಪ್ಪಳ, ಬಳ್ಳಾರಿ ಜಿಲ್ಲೆ ಹಾಗೂ ನೆರೆಯ ಆಂಧ್ರದ ಗುಂತಕಲ್, ಗುತ್ತಿ ಮುಂತಾದೆಡೆ ಬೈಕ್ ಕಳುವು ಮಾಡಿ ವಂಚಿಸುತ್ತಿದ್ದ ಜಾಲವನ್ನು ಕೊಪ್ಪಳ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ ಸುಮಾರು ೩. ೨೫ ಲಕ್ಷ ರೂ. ಬೆಲೆ ಬಾಳುವ ೧೧ ಮೋಟಾರ್ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಗಂಗಾವತಿ ತಾಲೂಕು ಹಂಪಸದುರ್ಗ ಗ್ರಾಮದ ಯಮನೂರಪ್ಪ ತಂದೆ ನಾಗಪ್ಪ (೨೭) ಹಾಗೂ ಬಳ್ಳಾರಿ ಜಿಲ್ಲೆ ನೆಲ್ಲೂಡಿ ಕೊಟ್ಟಾಲ ಗ್ರಾಮದ ಶ್ರೀನಿವಾಸ ತಂದೆ ಭೀಮಣ್ಣ (೩೫) ಇವರೇ ಬಂಧಿತ ಆರೋಪಿಗಳು.

ನೆರೆ ರಾಜ್ಯದಲ್ಲೂ ಕಳವು : ಇಬ್ಬರು ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದಾಗ ಗಂಗಾವತಿ, ಹಗರಿ, ಗುಂತಕಲ್, ಕುರಗೋಡ, ಕಂಪ್ಲಿ, ಗುತ್ತಿ ಹೀಗೆ ಮುಂತಾದ ಕಡೆ ಸೇರಿ ಮೋಟಾರ್ ಸೈಕಲ್‌ಗಳನ್ನು ಕಳ್ಳತನ ಮಾಡಿದ ಬಗ್ಗೆ ಪತ್ತೆಯಾಗಿದ್ದು ಈ ಇಬ್ಬರು ಆರೋಪಿತರಿಂದ ಒಟ್ಟು ರೂ.೩,೨೫,೦೦೦/- ಬೆಲೆಯ ಬಜಾಜ್ ಡಿಸ್ಕವರ್, ಹಿರೋಹೊಂಡಾ ಗ್ಲಾಮರ್, ಹೀರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಹೀಗೆ ಒಟ್ಟು ೧೧ ಮೋಟಾರ್ ಸೈಕಲ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸದ್ಯ ಈ ಇಬ್ಬರು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಪ್ರಕರಣದ ತನಿಖೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ಪ್ರಕಾಶ, ಪೊಲೀಸ್ ಉಪಾಧೀಕ್ಷಕರಾದ ಸುರೇಶ ಬಿ. ಮಸೂತಿ ಇವರ ಮಾರ್ಗದರ್ಶನದಲ್ಲಿ ಕೊಪ್ಪಳ ಗ್ರಾಮೀಣ ವೃತ್ತದ ಸಿ.ಪಿ.ಐ. ವೆಂಕಟಪ್ಪ ನಾಯಕ್, ಕೊಪ್ಪಳ ಠಾಣೆಯ ಪಿ.ಎಸ್.ಐ. ಮಹಾಂತೇಶ ಸಜ್ಜನ್ ಹಾಗೂ ಸಿಬ್ಬಂದಿಗಳಾದ ತಿಪ್ಪೇಸ್ವಾಮಿ, ಅಂದಪ್ಪ, ರಾಜಮಹ್ಮದ, ಸಂಗಮೇಶ, ಪುತ್ರಪ್ಪ, ರಂಗನಾಥ, ವಿರುಪಾಕ್ಷಪ್ಪ, ಮಂಜುನಾಥ, ಪರಶುರಾಮ ಭಾಗವಹಿಸಿದ್ದರು.
0 comments:
Post a Comment