PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ೧೬ : ಬೇಲ್ ಡೀಲ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಬಿಡುಗಡೆಗೊಂಡ ಬಳಿಕ ಜಿಲ್ಲೆಗೆ ಪ್ರಥಮಬಾರಿಗೆ ಆಗಮಿಸಿದ ಕೆಎಂಎಫ್ ರಾಜ್ಯಾಧ್ಯಕ್ಷ ಸೋಮಶೇಖರ ರಡ್ಡಿ ಕೊಪ್ಪಳದ ಗಂಗಾವತಿ ರಸ್ಥೆಯಲ್ಲಿ ಮಂಗಳವಾರ ಕೊಪ್ಪಳ ನೂತನ ಹಾಲಿನ ಡೈರಿ ಹಾಗೂ ಸಂಘಗಳ ವಿವಿದ ಕಟ್ಟಡಗಳ ಶಂಖುಸ್ಥಾಪನಾ ಸಮಾರಂಭಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸಿಹಿ ತಿನಿಸಿ ಸ್ವಾಗತಿಸಿದರು. ಬಿಎಸ್‌ಆರ್ ಕಾಂಗ್ರೆಸ್ ಮುಖಂಡರಾದ ಕೆಎಂ ಸಯ್ಯದ್, ಪ್ರಭುಗೌಡ ಪಾಟೀಲ್, ಶಾಮೀದ್ ಸಾಬ್ ಕಿಲ್ಲೇದಾರ್, ಚಂದ್ರಪ್ಪ ಉಲ್ಲತ್ತಿ, ಖಾಜಾಪಾಶಾ, ಯಂಕಪ್ಪ ಕ್ಯಾಸಪ್ಪನವರ್, ಸರ್ಫರಾಜ್, ನಾಗರಾಜ್ ಬೆಲ್ಲದ್, ಹನುಮೇಶ್, ಬಸನಗೌಡ ಹಲಗೇರಿ, ಶಾಂತಾ ನಾಯಕ್, ರೇಣುಕಾ, ಗವಿಸಿದ್ದಪ್ಪ ಹಂಡಿ. ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.

Advertisement

0 comments:

Post a Comment

 
Top