PLEASE LOGIN TO KANNADANET.COM FOR REGULAR NEWS-UPDATES


   ಕೊಪ್ಪಳ : ಇಂದು ನ್ಯಾಯ, ನೀತಿ, ಧರ್ಮ, ಪ್ರೀತಿ, ಮನುಷ್ಯತ್ವ ಇಲ್ಲದ ಸಂಪೂರ್ಣ ಕಗ್ಗತ್ತಲಿನಂತಹ ಸಂಕಟ ಮತ್ತು ಆತಂಕದ  ಸ್ಥಿತಿಯಲ್ಲಿರುತ್ತೇವೆ. ಹೊಲದಲ್ಲಿ ಬೆಳೆ ಯಾವುದು ಕಳೆ ಯಾವುದು ಎಂದು ಗುರುತಿಸಹಬುದು ಆದರೆ ಮನುಷ್ಯನ ಜೀವನದಲ್ಲಿ ಕಳೆ ಯಾವುದು ಬೆಳೆ ಯಾವುದು ಎಂಬುದನ್ನು  ಗುರುತಿಸಲಾರದಷ್ಟು ವಿಷಮಯವಾದ ಸ್ಥಿತಿ ನಿರ್ಮಾಣವಾಗಿದೆ. ಈ ದಿಸೆಯಲ್ಲಿ ಶರಣರು, ದಾರ್ಶನಿಕರು ತೋರಿದ ಮಾರ್ಗವನ್ನು ಅನುಸರಿಸಬೇಕು. ಅಂದಾಗ ಬದುಕಿನ ದಾರಿ ಸುಗಮವಾಗುತ್ತದೆ. ಎಂದು ಮಾತನಾಡಿದರು. ಅವರು  ಸಂಸ್ಥಾನ ಶ್ರೀ ಗವಿಮಠ ಕೊಪ್ಪಳದಲ್ಲಿ ಅಮವಾಸ್ಯೆಯ ಅಂಗವಾಗಿ ಜರುಗಿದ  ೩೭ ನೇ ಮಾಸಿಕ ಬೆಳಕಿನೆಡೆಗೆ  ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು ಹಸಿವು, ಅನ್ಯಾಯ, ಶೋಷಣೆ, ಇವುಗಳ ವಿರುದ್ದ ಹೋರಾಡುವಂತಹ ಎದೆಗಾರಿಕೆ ರೂಢಿಸಿಕೊಳ್ಳಬೇಕು. ಹಾಗೆಯೇ  ಶರಣರ ನಾಡಿನಲ್ಲಿ ಬದುಕಿದ ನಾವುಗಳು ಧನ್ಯರು, ಶರಣರ  ಮೌಲ್ಯಗಳಿಗೆ ನಾವು ಬೆಲೆ ಕೊಟ್ಟು ಬದುಕಿದಾಗ ಬದುಕು ಹಸನಾಗುತ್ತದೆ ಎಂದರು.  ಅಧ್ಯಕ್ಷತೆಯನ್ನು   ಎಚ್.ಎಸ್. ಪಾಟೀಲ ಹಿರಿಯ ಸಾಹಿತಿಗಳು ಕೊಪ್ಪಳ ವಹಿಸಿಮಾತನಾಡಿದರು.  ಕುಷ್ಟಗಿಯ ಪುಣ್ಯಕೋಟಿ ಕಲಾತಂಡದ   ವಾಲ್ಮೀಕಪ್ಪ ಹನುಮಪ್ಪ ಎಕ್ಕರನಾಳ್ ಅವರಿಂದ  ಸಂಗೀತ ಕಾರ್ಯಕ್ರಮ ಜರುಗಿತು.  ಭಕ್ತಿಸೇವೆಯನ್ನು ಲಿಂ. ಶ್ರೀ ಗವಿಯಪ್ಪ ಗುರುಬಸಪ್ಪ ಜವಳಿ  ಸ್ಮರಣಾರ್ಥ ಶ್ರೀಮತಿ ನೀಲಮ್ಮ ಕೊಟ್ಟಪ್ಪ ಜವಳಿ ಅಧ್ಯಕ್ಷರು ತಾಲೂಕ ಪಂಚಾಯತಿ ಯಲಬುರ್ಗ, ಸಾ.ಬೆಣಕಲ್ ವಹಿಸಿದ್ದರು. ಪೂಜ್ಯ ಶ್ರೀ ಗವಿಸಿದ್ಧೇಶ್ವರ ಶ್ರೀಗಳು ಹಾಗೂ ಅಪಾರ ಸದ್ಭಕ್ತರು ಭಾಗವಹಿಸಿದ್ದರು.

Advertisement

0 comments:

Post a Comment

 
Top