PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ ಯುವಕರು ದಾರ್ಮಿಕ ಕಾರ್ಯಕ್ರಮಗಳನ್ನು ಆಗಾಗ ಆಯೋಜಿಸುತ್ತಿರಬೇಕು ಅದರಿಂದ ಭಕ್ತಿ, ಶ್ರದ್ದೆ ಮನೋಭಾವ ಬೆಳೆಯುತ್ತದೆ. ಸಂಸ್ಕೃತಿ ಉಳಿಸಲು ಸಹಕಾರಿಯಾಗುತ್ತದೆ. 
ಎಂದು ತಾಲೂಕಾ ಪಂಚಾಯತಿ ಸದಸ್ಯ ಮುದೇಗೌಡ ಪೋಲಿಸ ಪಾಟೀಲ ಹೇಳಿದರು. ಅವರು ಕಾತರಿಕಿಯ ಶ್ರೀ ತಾಯಮ್ಮದೆವಿ ಭಜನಾ ಯುವಕ ಮಂಡಳಿ ಹಮ್ಮಿಕೊಂಡಿದ್ದ ಶ್ರೀ ದೇವಿ ಪುರಾಣ ಮಹಾಮಂಗಲ ಸಾಮೂಹಿಕ ವಿವಾಹ ಮತ್ತು ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹಿರೇಸಿಂದೋಗಿಯ ಶ್ರೀ.i.ನಿ.ಪ್ರ.ಸ್ವ.ಜ ಚಿದಾನಂದ ಮಹಾಸ್ವಾಮಿಗಳು ಇವರು ಸಾನಿದ್ಯ ವಹಿಸಿಕೊಂಡಿದ್ದರು. ತಾಲೂಕಾ ಪಂಚಾಯತ ಮಾಜಿ ಅಧ್ಯಕ್ಷ ವೆಂಕನಗೌಡ ಹಿರೆಗೌಡರ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಗವಿಶಿದ್ದೆಸ್ವರ ಅರ್ಬನ್ ಬ್ಯಾಂಕ ನಿರ್ದೆಶಕ ಬಸವರಾಜ ಶಹಪೂರ, ಗ್ರಾ. ಪಂ. ಸದಸ್ಯ ಯಂಕಪ್ಪ ಕೋರಗಲ್, ಮೈಲಪ್ಪ ದೆವರಮನಿ,  ಗ್ರಾಮದವರಾದ ವೆಂಕಟೇಶ ಪೋಲಿಸ ಪಾಟೀಲ, ಶಿವಪುತ್ರಪ್ಪ ಮಾಸ್ತರ ತಳವಾರ, ರಾಮಣ್ಣ ಮಡಿವಾಳರ, ಗವಿಶಿದ್ದಯ್ಯ ಹಿರೆಮಠ, ಕೊಟ್ರಯ್ಯ ಅಬ್ಬಿಗೇರಿಮಠ, ಈಶಪ್ಪ ಆಡೂರ, ರಾಜೂ ಹುರಕಡ್ಲಿ ಇತರರು ವೇದಿಕೆಯಲ್ಲಿದ್ದರು. ಸಂದರ್ಭದಲ್ಲಿ ಪುರಾಣಿಕ ಶಿವಯ್ಯ ಗಂದದಮಠ ಇವರಿಗೆ ಸನ್ಮಾನಿಸಲಾಯಿತು. ಭಜನಾ ಕಲಾವಿದ ಬಸಯ್ಯ ಅಬ್ಬಿಗೆರಿಮಠ ಪ್ರಾಥಿಸಿದರು. ರಾಜ್ಯಪ್ರಶಸ್ತಿ ವಿಜೇತ ಜಗದಯ್ಯ ಸಾಲಿಮಠ ಸ್ವಾಗತಿಸಿದರು. ಯುವಕ ಮಂಡಳಿ ಕಾರ್ಯದರ್ಶಿ ಫಕಿರೇಶ ಕಮ್ಮಾರ ವಂದನಾರ್ಪಣೆ ಮಾಡಿದರು.

Advertisement

0 comments:

Post a Comment

 
Top