PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ: ರಾಷ್ಟ್ರ ಮತ್ತು ರಾಜ್ಯದ ರೈತರಿಗೆ ಕೃಷಿಯಲ್ಲಿ ಹೊಸ ತಂತ್ರಜ್ಞಾನ ಸಿಗದೇ ಅನ್ಯಾಯವೆಸಗಲು ಕೇಂದ್ರ ಸಕಾರ ಸಜ್ಜಾದಂತಿದೆ. ಪ್ರಪಂಚದ ಇತರೆಡೆ ರೈತರು ಹೊಸ ಹೊಸ ತಂತ್ರಜ್ಞಾನದ ಅಳವಡಿಕೆಯಿಂದ ಪ್ರಗತಿ ಪಥದಲ್ಲಿ ಸಾಗಿ ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಆದರೆ ನಮ್ಮ ರೈತರು ಈ ಸೌಲಬ್ಯದಿಂದ ವಂಚಿತರಾಗಿದ್ದಾರೆ. ಇದಕ್ಕೆ ನೇರ ಕಾರಣ ಕೇಂದ್ರ ಸಕಾರದ ತಪ್ಪು ನಿರ್ಧಾರಗಳೇ ಕಾರಣ.
    ಹೊಸ ತಂತ್ರಜ್ಞಾನದ ಹಲವು ಬಿತ್ತನೆಯ ಬೀಜಗಳು ರೋಗ ನಿರೋಧಕಗಳಿಂದ ಕೂಡಿರುತ್ತವೆ. ಇವುಗಳಿಗೆ ಕೀಟ ಹಾಗೂ ರೋಗ ಬಾಧೆ ಕಾಡುವುದಿಲ್ಲ ಪ್ರಕೃತಿ ವಿಕೋಪಗಳನ್ನು ತಡೆದುಕೊಳ್ಳುವ ಶಕ್ತಿ ಹೊಂದಿರುತ್ತದೆ. ಕಡಿಮೆ ನೀರು ಹಾಗು ಕಡಿಮೆ ಗೊಬ್ಬರದಿಂದ ಉತ್ತಮ ಫಸಲು ಪಡೆಯಬಹುದಾಗಿದೆ.
    ಆದರೆ ಇತ್ತೀಚೆಗೆ ಕೆಲವು ಎನ್.ಜಿ. ಓ ಗಳು ಮತ್ತು ಕೇಂದ್ರ ಸಕಾರದ ಇಲಾಖೆಗಳು ಆಮೀಷಗಳಿಗೆ ಒಳಗಾಗಿ ತಪ್ಪು ಮಾಹಿತಿಯಿಂದ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಒಂದು ತನಿಖಾ ತಂಡ ರಚಿಸಿ ಹೊಸ ತಂತ್ರಜ್ಞಾನದ ವರದಿಯನ್ನು ಸಲ್ಲಿಸಲು ಕೋರಿದೆ. ಆದರೆ ಈ ತನಿಖಾ ತಂಡದ ಸಾಧಕ ಬಾಧಕಗಳನ್ನು ಅದ್ಯಯಿಸದೇ ಭಾರತದಲ್ಲಿ ಕೃಷಿಗೆ ಹೊಸ ತಂತ್ರಜ್ಞಾನ ೧೦ ವರ್ಷಗಳ ಕಾಲ ಅವಶ್ಯಕತೆ ಇಲ್ಲವೆಂದು ವರದಿಯನ್ನು ಸಲ್ಲಿಸಲು ಸಿದ್ದತೆ ನಡೆಸುತ್ತಿದೆ. ಆದಕಾರಣ ರಾಜ್ಯ ಹಾಗು ಕೇಂದ್ರ ಸರ್ಕಾರಗಳು ಮಧ್ಯ ಪ್ರವೇಶಿಸಿ ಈ ದುರಂತವನ್ನು ತಡೆಯಬೇಕೆಂದು ಕರ್ನಾಟಕ ರೈತ ಪ್ರಗತಿ ಚಕ್ರ ಕೊಪ್ಪಳ ಜಿಲ್ಲಾಧ್ಯಕ್ಷರಾದ ಕನಕಪ್ಪ ಹನುಮಂತಪ್ಪ ಮಳಗಾವಿ ಹಾಗೂ ರಾಜ್ಯ ಕಾರ್ಯದರ್ಶಿ ಎಂ. ಚಂದ್ರಶೇಖರಗೌಡ ಬೆನ್ನೂರು ಮತ್ತು ಕೊಪ್ಪಳ ತಾಲೂಕಾ ಅಧಕ್ಷರಾದ ಎಂ. ಹೊಸಮನಿ, ಲಿಂಗರಾಜ ಹೂಗಾರ ಅಧ್ಯಕ್ಷರು ಕನಕಗಿರಿ ಉಮೇಶರಡ್ಡಿ ಕಾರ್ಯದರ್ಶಿ ಕನಕಗಿರಿ ಇನ್ನಿತರ ರೈತ ಮುಖಂಡರುಗಳು ಒತ್ತಾಯಿಸಿದ್ದಾರೆ ಎಂದು  ರಾಜ್ಯ ಕಾರ್ಯದರ್ಶಿ ಚಂದ್ರಶೇಕರ ಬೆನ್ನೂರು ತಿಳಿಸಿದ್ದಾರೆ.

Advertisement

0 comments:

Post a Comment

 
Top